Advertisement

ಪ್ರಯಾಣಿಕ ವಿಮಾನಕ್ಕೆ ಯುದ್ಧ ವಿಮಾನದ ಕಾವಲು!

06:03 AM Mar 27, 2019 | Team Udayavani |

ಹೊಸದಿಲ್ಲಿ: ಮುಂಬಯಿನಿಂದ ಸಿಂಗಾಪುರಕ್ಕೆ ತೆರಳುತ್ತಿದ್ದ ಸಿಂಗಾಪುರ ಏರ್‌ಲೈನ್ಸ್‌ನ ವಿಮಾನಕ್ಕೆ ಬಾಂಬ್‌ ದಾಳಿ ಭೀತಿ ಉಂಟಾಗಿದ್ದರಿಂದ 2 ಎಫ್ 16 ಯುದ್ಧ ವಿಮಾನಗಳ ಕಾವಲು ಒದಗಿಸಲಾಗಿತ್ತು. ವಿಮಾನವು ಸಿಂಗಾ ಪುರದ ಚಾಂಗಿ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಬೆಳಗ್ಗೆ ಸುರಕ್ಷಿತವಾಗಿ ಇಳಿದಿದೆ. ವಿಮಾನದಲ್ಲಿ 263 ಪ್ರಯಾಣಿಕರಿದ್ದರು. ಸೋಮವಾರ ರಾತ್ರಿ ಮುಂಬಯಿ ವಿಮಾನ ನಿಲ್ದಾಣದಿಂದ ವಿಮಾನ ಟೇಕ್‌ ಆಫ್ ಆದ ಅನಂತರ ಬೆದರಿಕೆ ಕರೆ ಬಂದಿತ್ತು. ವಿಮಾನದಲ್ಲಿ ಬಾಂಬ್‌ ಇಡಲಾಗಿದೆ ಎಂದು ಫೋನ್‌ ಮಾಡಿದ ವ್ಯಕ್ತಿ ಹೇಳಿದ್ದ. ಆದರೆ ವಿಮಾನದಲ್ಲಿ ಬಾಂಬ್‌ ಪತ್ತೆಯಾಗಿಲ್ಲ. ಎಲ್ಲ ಪ್ರಯಾಣಿಕರೂ ಸುರಕ್ಷಿತವಾಗಿದ್ದಾರೆ. ಒಬ್ಬ ಮಹಿಳೆ ಮತ್ತು ಮಗುವನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ. ವಿಮಾನದಲ್ಲಿನ ಸಂಕೇತ ಗ್ರಹಿಸುವು ದಕ್ಕಾಗಿ ಎಫ್ 16 ವಿಮಾನಗಳನ್ನು ಕಳುಹಿಸಿತ್ತು ಎನ್ನಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next