Advertisement

ಶೀಘ್ರದಲ್ಲೇ ಗಾರ್ಡ್‌ ರಹಿತ ಟ್ರೈನ್‌; ರೈಲ್ವೇಯಿಂದ EOTT ಸಾಧನ ಖರೀದಿ

11:56 AM May 10, 2017 | udayavani editorial |

ಹೊಸದಿಲ್ಲಿ : ಗಾರ್ಡ್‌ಗಳಿಲ್ಲದೆಯೇ ದೇಶದಲ್ಲಿನ ಸುಮಾರು 1000 ರೈಲುಗಳನ್ನು ಓಡಿಸಲು ಅನುಕೂಲಿಸುವ “ಎಂಡ್‌ ಆಫ್ ಟ್ರೈನ್‌ ಟೆಲಿಮೆಟ್ರಿ (ಇಓಟಿಟಿ) ಉಪಕರಣವನ್ನು 100 ಕೋಟಿ ರೂ. ವೆಚ್ಚದಲ್ಲಿ ಖರೀದಿಸುವುದಕ್ಕೆ ಭಾರತೀಯ ರೈಲ್ವೇ ಸದ್ಯದಲ್ಲೇ ಜಾಗತಿಕ ಟೆಂಡರ್‌ ಕರೆಯಲಿದೆ. 

Advertisement

ಅತ್ಯಾಧುನಿಕ ಇಓಟಿಟಿ ಸಾಧನದಿಂದಾಗಿ ಟ್ರೈನ್‌ ಚಾಲಕ ಮತ್ತು ರೈಲಿನ ಕೊನೇ ಬೋಗಿಯ ನಡುವೆ ಸಂಪರ್ಕ ಇರಲಿದ್ದು ‘ರೈಲಿನ ಎಲ್ಲ ಬೋಗಿಗಳು ಇಂಜಿನ್‌ ನೊಂದಿಗೆ ಜೋಡಿಸಿಕೊಂಡೇ ಇದೆ ಮತ್ತು ಇಡಿಯ ರೈಲು ಒಂದು ಘಟಕವಾಗಿ ಚಲಿಸುತ್ತಿದೆ’ ಎಂಬುದನ್ನು ಈ ಸಾಧನ ಚಾಲಕನಿಗೆ ದೃಢಪಡಿಸುತ್ತದೆ. ಇದರಿಂದಾಗಿ ರೈಲುಗಳಲ್ಲಿ ಗಾರ್ಡ್‌ಗಳ ಆವಶ್ಯಕತೆಯೇ ಇರುವುದಿಲ್ಲ ಎನ್ನಲಾಗಿದೆ. 

ತಲಾ ಇಓಟಿಟಿ ಸಾಧನಕ್ಕೆ 10 ಲಕ್ಷ ರೂ. ಬೆಲೆ ಇದೆ. ಈ ಸಾಧನವು ಎರಡು ಘಟಕಗಳನ್ನು ಹೊಂದಿರುತ್ತದೆ. ಮೊದಲನೇಯದ್ದು – ಕ್ಯಾಬ್‌ ಡಿಸ್‌ಪ್ಲೇ ಯೂನಿಟ್‌ ಚಾಲಕನ ಕೊಠಡಿಯಲ್ಲಿರುತ್ತದೆ. ಎರಡನೆಯಯದ್ದು – ಸೆನ್ಸ್‌ ಆ್ಯಂಡ್‌ ಬ್ರೇಕ್‌ ಯೂನಿಟ್‌ – ರೈಲಿನ ಕೊನೇ ವ್ಯಾಗನ್‌ನಲ್ಲಿರುತ್ತದೆ. 

ಈ ಎರಡೂ ಘಟಕಗಳಿಗೆ ರೇಡಿಯೋ ಟ್ರಾನ್ಸ್‌ಮೀಟರ್‌ ಅಳವಡಿಸಲಾಗಿರುತ್ತದೆ. ಇದರಿಂದಾಗಿ ಟ್ರೈನ್‌ ಚಾಲಕ ಮತ್ತು ಕೊನೆಯ ಬೋಗಿ ಅಥವಾ ವ್ಯಾಗನ್‌ ಜತೆಗೆ ಸಂಪರ್ಕ ಏರ್ಪಟ್ಟಿರುತ್ತದೆ. 

Advertisement

Udayavani is now on Telegram. Click here to join our channel and stay updated with the latest news.

Next