Advertisement

ಅರ್ಧ ದಶಕದ ಉರ್ದು ಶಾಲೆಗೆ ಬೇಕಿದೆ ಕಾಯಕಲ್ಪ

11:05 AM Jul 30, 2018 | |

ಅಫಜಲಪುರ: ಸರ್ಕಾರಿ ಶಾಲೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಬಜೆಟ್‌ನಲ್ಲಿ ನೂರಾರು ಕೋಟಿ ರೂ. ಅನುದಾನ ಮೀಸಲಿಡುತ್ತಿದೆ. ಹತ್ತು ಮನೆಗಳಿರುವಲ್ಲಿ ಒಂದು ಶಾಲೆ ಆರಂಭಿಸುತ್ತಿದೆ. ಆದರೆ ಇಲ್ಲೊಂದು ಅರ್ಧ ದಶಕದ ಉರ್ದು ಶಾಲೆ ಈಗ ಶಿಥಿಲಾವಸ್ಥೆ ತಲುಪಿದ್ದು ಶಾಲೆ ಕಾಯಕಲ್ಪಕ್ಕಾಗಿ ಕಾಯ್ದಿದೆ. ತಾಲೂಕಿನ ಅತನೂರ ಗ್ರಾಮದ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದುಸ್ಥಿತಿಯಾಗಿದೆ.

Advertisement

ಗಣಮುಖೆ ಸಚಿವರಿದ್ದಾಗ ನಿರ್ಮಾಣವಾದ ಶಾಲೆ: ಅಂದಿನ ಮೈಸೂರು ಸರ್ಕಾರದಲ್ಲಿ ಅಫಜಲಪುರದ ಮಾಜಿ ಶಾಸಕರಾದ ಅಣ್ಣಾರಾವ್‌ ಗಣಮುಖೆ ಶಿಕ್ಷಣ ಸಚಿವರಾಗಿದ್ದಾಗ ಈ ಶಾಲೆ ನಿರ್ಮಿಸಲಾಗಿದೆ. ಅಂದಿನಿಂದ ಇಲ್ಲಿನ ವರೆಗೆ
ಶಾಲೆಗೆ ಕಾಯಕಲ್ಪವನ್ನು ಯಾವ ಶಾಸಕರು ಕಲ್ಪಿಸಿಲ್ಲ.
 
ಕುಸಿಯುವ ಹಂತದಲ್ಲಿದೆ ಮೇಲ್ಛಾವಣಿ: ಅತನೂರ ಗ್ರಾಮದ ಗ್ರಾಪಂ ಪಕ್ಕದಲ್ಲಿರುವ 1ರಿಂದ 7ನೇ ತರಗತಿ ವರೆಗಿನ ಸರ್ಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆ ಮೇಲ್ಛಾವಣಿ ಕುಸಿಯುವ ಹಂತ ತಲುಪಿದೆ. ಈ ಶಾಲೆ 1960ರಲ್ಲಿ ಆರಂಭವಾದಾಗಿನಿಂದ ಇಲ್ಲಿನ ತನಕ ದುರಸ್ತಿಯನ್ನು ಮಾಡಿಸಿಲ್ಲ. ಹೀಗಾಗಿ ಮೇಲ್ಛಾವಣಿ ಸಂಪೂರ್ಣ ಕುಸಿಯುವ ಹಂತಕ್ಕೆ ತಲುಪಿದೆ. ಇಂತಹ ಅಪಾಯಕಾರಿ ಶಾಲಾ ಕೊಣೆಗಳಲ್ಲಿ ಮಕ್ಕಳು ಪಾಠ ಕಲಿಯುವಂತೆ ಆಗಿದೆ.

ಇದ್ದು ಇಲ್ಲದಂತಿರುವ ಕಾಂಪೌಂಡ ಗೋಡೆ, ಶೌಚಾಲಯ: ಈ ಶಾಲೆ ಅತನೂರ ಗ್ರಾ.ಪಂ ಪಕ್ಕದಲ್ಲಿಯೇ ಇದೆ. ಅತನೂರ ಗ್ರಾಮದ ಜನನಿಬೀಡ ಪ್ರದೇಶದಲ್ಲಿ ಇರುವುದರಿಂದ ವಾಹನಗಳು, ಜನ ಜಂಗುಳಿ ಹೆಚ್ಚಾಗಿರುತ್ತದೆ. ಹೀಗಾಗಿ ಮಕ್ಕಳಿಗೆ ಪಾಠ ಕೇಳಲು ಕಿರಿಕಿರಿ ಆಗಬಾರದು ಎಂದು ಕಾಂಪೌಂಡ್‌ ಗೋಡೆ ಕಟ್ಟಿಸಲಾಗಿತ್ತು. ಆದರೆ ಕಾಂಪೌಂಡ್‌
ಗೋಡೆಯನ್ನು ಕಿಡಿಗೇಡಿಗಳು ಒಡೆದಿದ್ದಾರೆ.

ಅಲ್ಲದೆ ಶಾಲೆಯಲ್ಲಿ ವಿದ್ಯಾರ್ಥಿನಿಯರು ಮತ್ತು ಶಿಕ್ಷಕಿಯರಿಗಾಗಿ ನಿರ್ಮಿಸಿರುವ ಶೌಚಾಲಯ ಉಪಯೋಗಕ್ಕೆ ಬಾರದಂತಾಗಿದೆ. ಕುಡಿಯುವ ನೀರನ ತೊಂದರೆಯು ಇರುವುದರಿಂದ ಶಾಲೆಯಲ್ಲಿನ ಶೌಚಾಲಯ ಬಳಕೆ
ಮಾಡಲಾಗುತ್ತಿಲ್ಲ.

ಸೌಲಭ್ಯ ಕಲ್ಪಿಸಲು ಆಗ್ರಹ: ಈ ಶಾಲೆ ಐದಾರು ದಶಕಗಳ ಹಿಂದೆ ನಿರ್ಮಾಣವಾಗಿದ್ದು, ಈಗ ಇದಕ್ಕೆ ಕಾಯಕಲ್ಪ ಬೇಕಾಗಿದೆ. ಶಾಲೆಯ ಮೇಲ್ಛಾವಣಿ ದುರಸ್ತಿ, ಸುಸಜ್ಜಿತ ಶೌಚಾಲಯ, ಕಾಂಪೌಂಡ್‌ ಗೋಡೆ ನಿರ್ಮಾಣ ಹಾಗೂ ಕುಡಿಯುವ ನೀರಿನ ಸೌಕರ್ಯಕಲ್ಪಿಸಬೇಕಾಗಿದೆ. ಸಂಬಂಧಪಟ್ಟವರು ಗಮನ ಹರಿಸಿ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಶಿಕ್ಷಕರು, ಮಕ್ಕಳು ಮತ್ತು ಪಾಲಕರು ಆಗ್ರಹಿಸಿದ್ದಾರೆ

Advertisement

ಶಾಲೆಯ ಮೇಲ್ಛಾವಣಿ ಬೀಳುವ ಹಂತಕ್ಕೆ ತಲುಪಿದ್ದರಿಂದ ಮೇಲ್ಛಾವಣಿಯ ಭಾವಚಿತ್ರ ತೆಗೆದು ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ತಾಪಂಗೆ ಪತ್ರ ಬರೆದು ಸಮಸ್ಯೆ ತಿಳಿಸಿದ್ದೇನೆ. ಪರಿಶೀಲಿಸಿ, ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. 
 ಮಹಿಬೂಬ್‌ ಬಾಗವಾನ್‌, ಮುಖ್ಯಶಿಕ್ಷಕ ಸ.ಹಿ.ಪ್ರಾ ಉರ್ದು ಶಾಲೆ, ಅತನೂರ

„ಮಲ್ಲಿಕಾರ್ಜುನ ಹಿರೇಮಠ

Advertisement

Udayavani is now on Telegram. Click here to join our channel and stay updated with the latest news.

Next