Advertisement
ಶೌಚಾಲಯ ನಿರ್ಮಿಸಿಕೊಂಡ ಫಲಾನುಭವಿಗಳಿಗೆ ಗ್ರಾ.ಪಂ. ಹಾಗೂ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದಿಂದಲೂ ಅನುದಾನ ಬಿಡುಗಡೆ ಮಾಡುತ್ತಿರುವುದರಿಂದ ಒಂದು ಶೌಚಾಲಯಕ್ಕೆ ಎರಡು ಬಾರಿ ಅನುದಾನ ಬಿಡುಗಡೆಯಾಗುವ ಸಾಧ್ಯತೆ ಇರುವುದರಿಂದ ಇನ್ನು ಮುಂದೆ ಶೌಚಾಲಯಕ್ಕೆಸಂಬಂ ಧಿಸಿದಂತೆ ಗ್ರಾ.ಪಂ.ನಿಂದ ಮಾತ್ರ ಅನುದಾನ ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ.
ಫಲಾನುಭವಿಗಳಿಗೆ ಗ್ರಾಮ ಪಂಚಾಯತ್‌ನ ಎನ್‌ಆರ್‌ಇಜಿ ಅನುದಾನದಿಂದ ಶೌಚಾಲಯಕ್ಕೆ ಅನುದಾನವನ್ನು ಒದಗಿಸಲಾಗುತ್ತದೆ. ಈ ಮೊದಲು ನಿಗಮದಿಂದಲೇ ಕೊನೆಯ ಕಂತಿನಲ್ಲಿ ಹಣ ಪಾವತಿಸಲಾಗುತ್ತಿತ್ತು. ಪ್ರತ್ಯೇಕ ಆದೇಶ
ವಸತಿ ಯೋಜನೆಯಡಿಯಲ್ಲಿ ನಿರ್ಮಿಸುವ ಮನೆಗಳ ಜತೆಗೆ ಶೌಚಾಲಯ ನಿರ್ಮಾಣ ಕಡ್ಡಾಯ ಮಾಡಲಾಗಿದ್ದು, ವಸತಿ ಯೋಜನೆಯಡಿಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ವಸತಿ ಯೋಜನೆಯಡಿಯಲ್ಲಿ ನೀಡಲಾಗುವ ಕಾಮಗಾರಿ ಆದೇಶದೊಂದಿಗೆ ಶೌಚಾಲಯ ನಿರ್ಮಿಸಿಕೊಳ್ಳಲು ಪ್ರತ್ಯೇಕ ಕಾಮಗಾರಿ ಆದೇಶವನ್ನು ಪಿಡಿಒಗಳು ಫಲಾನುಭವಿಗಳಿಗೆ ನೀಡಿ ಶೌಚಾಲಯ ನಿರ್ಮಾಣ ಮಾಡಲು ಅವಕಾಶವಿತ್ತು.
Related Articles
ಫಲಾನುಭವಿಗಳ ಮನೆ ಪೂರ್ಣಗೊಂಡ ಅನಂತರ ಕೊನೆಯ ಕಂತಿನಲ್ಲಿ ಜಿಪಿಎಸ್ ಛಾಯಾಚಿತ್ರದ ಆಧಾರದ ಮೇಲೆ ಪ್ರತ್ಯೇಕವಾಗಿ ನಿಗಮದಿಂದ ಶೌಚಾಲಯದ ಅನುದಾನ ಬಿಡುಗಡೆ ಮಾಡಲಾಗುತ್ತಿತ್ತು. ಆದರೆ ಇನ್ನು ಈ ಅನುದಾನವನ್ನು ಗ್ರಾಮ ಪಂಚಾಯತ್ ನೀಡಲಿದೆ.
Advertisement
ಜನರಿಗೆ ಉದ್ಯೋಗ ಖಾತ್ರಿ ಮೂಲಕ ಕೂಲಿ ದೊರೆಯಬೇಕು ಎನ್ನುವ ಕಾರಣದಿಂದ ವಸತಿ ನಿಗಮದವರು ಉದ್ಯೋಗ ಖಾತ್ರಿ ಖಾತೆಗೆ ಹಣ ಜಮೆ ಮಾಡಿ ಅದೇ ಹಣ ಫಲಾನುಭವಿಗೆ ದೊರೆಯುವಂತೆ ಮಾಡಲಾಗುತ್ತದೆ.– ಶ್ರೀಧರ್, ತಾ.ಪಂ. ವಸತಿ
ವಿಭಾಗದ ಅಧಿಕಾರಿ ಗುರು ಮುಂಡಾಜೆ