Advertisement
ಪಕ್ಷೇತರ ಅಭ್ಯರ್ಥಿ ಅಮೃತ್ ಶೆಣೈ ಮಾತನಾಡಿ, ಸೋಲು-ಗೆಲುವು ಮುಖ್ಯವಲ್ಲ. ಹೋರಾಟದ ದೃಷ್ಟಿಯಿಂದ ಕಣಕ್ಕಿಳಿದಿದ್ದು ದೂರವಾಣಿ ಕರೆ ಮೂಲಕ ಮತ ನೀಡುವುದಾಗಿ ಸಾವಿರಾರು ಮಂದಿ ಭರವಸೆ ನೀಡಿದ್ದಾರೆ. ನಾನು ಇದುವರೆಗೆ ಮಾಡಿದ ಸಮಾಜಮುಖೀ ಕಾರ್ಯಕ್ಕೆ ಭರವಸೆ ಮಾತುಗಳು ಕೇಳಿ ಬರುತ್ತಿದೆ ಎಂದರು.
ನೆಲೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಗೆಲ್ಲುವ ಭರವಸೆ ಇದೆ. ಜೆಡಿಎಸ್‌ಗೆ ಕ್ಷೇತ್ರ ಬಿಟ್ಟು ಕೊಟ್ಟು ಕಾಂಗ್ರೆಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್‌ರನ್ನು ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಕ್ಷೇತ್ರದ ಯಾವುದೇ ಸಮಸ್ಯೆಗೆ ಸ್ಪಂದಿಸದ ನಿಷ್ಕ್ರಿಯ ಸಂಸದೆ, ಕೇಂದ್ರ ಸರಕಾರದ ನೀತಿಯ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿದ್ದೇನೆ. ಕೋಟಿಗಟ್ಟಲೆ ಹಣದ ಆಮಿಷ ಬಂದಿದೆ. ಆದರೂ ಜಗ್ಗದೆ ಚುನಾವಣೆ ಎದುರಿಸುತ್ತೇನೆ ಎಂದರು. ಸಂಸದನಾಗಿ ಗೆದ್ದ ಬಳಿಕ
ಸಂಸದನಾಗಿ ಗೆದ್ದ ಅನಂತರ ಮರಳಿನ ಸಮಸ್ಯೆಗೆ ಪರಿಹಾರ, ಉಡುಪಿ-ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಾಫ್ಟ್ವೇರ್ ಪಾರ್ಕ್ ನಿರ್ಮಿಸಿ ಉದ್ಯೋಗಕ್ಕಾಗಿ ವಲಸೆ ಹೋಗುವುದನ್ನು ತಪ್ಪಿಸುವುದು, ಸುವರ್ಣ ತ್ರಿಭುಜ ಬೋಟ್ ಮತ್ತು ಮೀನುಗಾರರ ಪತ್ತೆ ಕಾರ್ಯಕ್ಕೆ ನ್ಯಾಯೋಚಿತ ಹೋರಾಟ, ಚಿಕ್ಕಮಗಳೂರು ಜಿಲ್ಲೆಯ ಅಡಿಕೆ, ಕಾಫಿ ಬೆಳೆಗಾರರ, ಕುದುರೆಮುಖ ಕಾರ್ಮಿಕರ ಸಮಸ್ಯೆಗೆ ಪರಿಹಾರ, ಉಭಯ ಜಿಲ್ಲೆಗಳಲ್ಲಿ ಸಾಮಾಜಿಕ ಸಾಮರಸ್ಯ, ಶಾಂತಿ ಕೆಡಿಸುವ ಶಕ್ತಿಗಳ ವಿರುದ್ಧ ಹೋರಾಟ, ರಾ.ಹೆ., ಟೋಲ್‌ಗೇಟ್, ಸಿಆರ್‌ಝಡ್ ಮತ್ತು ಕೇಂದ್ರ ವ್ಯಾಪ್ತಿಯ ಇನ್ನಿತರ ವಿಚಾರಗಳ ಬಗ್ಗೆ ಸಂಸತ್ತಿನಲ್ಲಿ ಹೋರಾಟ, ಉಭಯ ಜಿಲ್ಲೆಗಳ ಜನಾಭಿಪ್ರಾಯದಂತೆ ಸಂಸತ್ತಿನಲ್ಲಿ ಕಾರ್ಯನಿರ್ವಹಿಸುತ್ತೇನೆ ಎಂದವರು ಭರವಸೆ ನೀಡಿದರು.
Related Articles
Advertisement
ಅಮೃತ್ ಶೆಣೈ ಅಭಿಮಾನಿಗಳಾದ ಚಲನಚಿತ್ರ ನಿರ್ದೇಶಕ ಕೃಷ್ಣಪ್ಪ ಉಪ್ಪೂರು, ಚುನಾವಣಾ ಏಜೆಂಟ್ ಯಜ್ಞೆàಶ್ ಆಚಾರ್ಯ, ಅಂಗನವಾಡಿ ಶಿಕ್ಷಕಿ ಸರೋಜಾ, ಶಾಹಿದ್ ಅಲಿ, ವರದರಾಜ್ ಚಿಕ್ಕಮಗಳೂರು, ಎಲನ್ ರೋಹನ್ ವಾಜ್, ಯೋಗೀಶ್ ಭಟ್, ಅನ್ಸರ್ ಅಹಮ್ಮದ್ ಉಪಸ್ಥಿತರಿದ್ದರು.ಮನಃಶಾಸ್ತ್ರಜ್ಞೆ ಜಯಶ್ರೀ ಭಟ್ ಸ್ವಾಗತಿಸಿ, ಪ್ರಸ್ತಾವನೆಗೈದರು.