Advertisement
ಇಲ್ಲಿನ ಪುರಸಭೆಯ 18ನೇ ವಾರ್ಡಗೆ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ನೂರಅಹ್ಮದ್ ಶಿವಣಗಿವಕೀಲರ ಪುರ ಪ್ರಚಾರ ನಡೆಸಲು ಸೋಮವಾರ ಇಲ್ಲಿಗೆ ಆಗಮಿಸಿದ್ದ ಅವರು ಪ್ರಚಾರಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದರು. ಈಗ ಉಚಿತ ಯೋಜನೆ ಜಾರಿಗೊಳಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ 5 ವರ್ಷದ ಹಿಂದೆಯೂ ಮುಖ್ಯಮಂತ್ರಿಯಾಗಿದ್ದರು. ಆವಾಗ ನೀರು, ಅಕ್ಕಿ, ವಿದ್ಯುತ್ ಸಮಸ್ಯೆ ಇರುವುದು ಅವರಿಗೆ ಗೊತ್ತಿರಲಿಲ್ಲವೇ? 5
ವರ್ಷದ ಹಿಂದೆಯೇ ಇದನ್ನೇಕೆ ಜಾರಿಗೊಳಿಸಲಿಲ್ಲ. ಚುನಾವಣೆಗೋಸ್ಕರ ಇದನ್ನು ಮಾಡಿದ್ದಾರೆ ಎಂದು ಟೀಕಿಸಿದರು.
ಆದರೂ ಆಮ್ ಆದ್ಮಿ ಪಕ್ಷ ದೆಹಲಿ, ಪಂಜಾಬ್ ರಾಜ್ಯಗಳಲ್ಲಿ ಪಾರದರ್ಶಕ ಆಡಳಿತವನ್ನು ಯಶಸ್ವಿಯಾಗಿ ನೀಡುತ್ತಿದೆ ಎಂದರು. ಈಚೆಗೆ ನಡೆದ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವುದಕ್ಕೋಸ್ಕರ ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದೆವು. ಗೆಲ್ಲಲಾಗದಿದ್ದರೂ ಬಿಜೆಪಿಯನ್ನು
ಅಧಿಕಾರದಿಂದ ದೂರ ಇಡುವುದರಲ್ಲಿ ಮತ್ತು ಮತ ಗಳಿಸುವುದರಲ್ಲಿ ನಾವು ಯಶಸ್ವಿಯಾಗಿದ್ದೇವೆ ಎಂದರು.
Related Articles
Advertisement
ಕುಡಿಯುವ ನೀರಿನ ಸೌಕರ್ಯ, ಒಳ್ಳೆಯ ರಸ್ತೆ ಇಲ್ಲ. ಇದನ್ನೆಲ್ಲ ನೋಡಿ ಬೇಸತ್ತು ಇಂದು ನಾನು ಆಮ್ ಆದ್ಮಿ ಪಕ್ಷದಿಂದ ಸ್ಪರ್ಧೆ ಮಾಡಿದ್ದೇನೆ. ನಮ್ಮ ಬಡಾವಣೆಗೆ ಬೇಕಾದ ಎಲ್ಲಾ ಸೌಕರ್ಯಗಳನ್ನು ಆರಿಸಿ ಬಂದ ಕೆಲವೇ ದಿನಗಳಲ್ಲಿ ಈಡೇರಿಸುತ್ತೇನೆ. ಜನರು ನನ್ನನ್ನು ಆರಿಸಿ ತರುತ್ತಾರೆ ಎಂಬ ನಂಬಿಕೆ ನನಗಿದೆ ಎಂದರು.
ಇದೇ ವೇಳೆ 18ನೇ ವಾರ್ಡ್ ನ ಮನೆಮನೆಗೆ ತೆರಳಿ ಪಕ್ಷದ ಚಿಹ್ನೆ ಕಸಬರಿಗೆ ಪ್ರದರ್ಶಿಸಿ ತಮ್ಮ ಪಕ್ಷದ ಅಭ್ಯರ್ಥಿಗೇ ಮತ ಹಾಕಿ ಗೆಲ್ಲಿಸುವಂತೆ ಮನವಿ ಮಾಡಿದರು. ಪಕ್ಷದ ರಾಜ್ಯ ಉಪಾಧ್ಯಕ್ಷ ವಿಜಯ್ ಶರ್ಮಾ, ವಿಜಯಪುುರ ಜಿಲ್ಲಾಧ್ಯಕ್ಷ ಭೋಗೇಶ ಸೋಲಾಪೂರ, ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ಡಾ| ಗೀತಾ, ಜಿಲ್ಲಾ ಘಟಕದ ಅಧ್ಯಕ್ಷೆ ಅನ್ನಪೂರ್ಣ ಬೆಳ್ಳೆನ್ನವರ್,ತಾಲೂಕು ಉಸ್ತುವಾರಿ ಮಹಿಬೂಬ ಹಡಲಗೇರಿ, ಸಂಜು ಶೆಟಗಾರ, ವೀರೇಶ ಹಿರೇಮಠ, ಮಹ್ಮದ ರಫೀಕ ಗೊಳಸಂಗಿ,
ಕಾರ್ಯಕರ್ತರು ಇದ್ದರು. ಚಿತ್ರನಟರೊಬ್ಬರು ತಮ್ಮ ಮನೆಗೆ ಬಂದಿದ್ದನ್ನು ಕಂಡು ಹರ್ಷಗೊಂಡ ಅವರ ಅಭಿಮಾನಿಗಳು ಸೆಲ್ಪಿàಗೆ ಮುಗಿಬಿದ್ದ ದೃಶ್ಯ ಸಾಮಾನ್ಯವಾಗಿತ್ತು. ದೇಶದ 28 ರಾಷ್ಟ್ರೀಯ ಪಕ್ಷಗಳು ಒಗ್ಗೂಡಿ ಬಿಜೆಪಿ ಎದುರು ಸೆಡ್ಡು ಹೊಡೆದು ನಿಂತಿವೆ. ಬಂದಿದೆ ಎಂದರು. ಆಪ್ ಕೂಡಾ ಇವರ ಜೊತೆಗಿದೆ. ಇದು ಲೋಕಸಭೆ ಚುನಾವಣೆಗೆ ಮಾತ್ರ ಸೀಮಿತ. ಈಗ ನಡೆದಿರುವ ಸ್ಥಳೀಯ ಸಂಸ್ಥೆ, ಮುಂಬರುವ ತಾಪುಂ, ಜಿಪಂ, ಬಿಬಿಪಿಎಂಪಿ ಮತ್ತು ವಿಧಾನಸಭೆಯ ಸಾರ್ವತ್ರಿಕ ಚುನಾವಣೆಗಳಲ್ಲಿ ನಮ್ಮ ಪಕ್ಷ ಸ್ವತಂತ್ರ ಶಕ್ತಿಯ ಮೇಲೆ ಸ್ಪ ರ್ಧಿಸುತ್ತದೆ.
*ಮುಖ್ಯಮಂತ್ರಿ ಚಂದ್ರು, ರಾಜ್ಯಾಧ್ಯಕ್ಷ, ಆಮ್ ಆದ್ಮಿ ಪಾರ್ಟಿ, ಬೆಂಗಳೂರು ವಿಧಾನ ಸಭಾ ಚುನಾವಣೆಯ ನಂತರ ರಾಜ್ಯದಲ್ಲಿ ನಮ್ಮ ಪಕ್ಷದ ಖಾತೆ ತೆಗೆಯಬೇಕು ಅನ್ನೋ ಕಾರಣಕ್ಕೆ ಸ್ಥಳೀಯ ಸಂಸ್ಥೆಗಳ ಮರು ಚುನಾವಣೆಯಲ್ಲಿ ಮೈಸೂರು ಜಿಲ್ಲೆ ನಂಜನಗೂಡು, ತುಮಕೂರು ಜಿಲ್ಲೆ ಶಿರಾ ತಾಲೂಕು, ವಿಜಯಪುರ ಜಿಲ್ಲೆ ಮುದ್ದೇಬಿಹಾಳ ಮತ್ತು ಮಂಗಳೂರ ಹೀಗೆ 4 ಕಡೆ ಪಕ್ಷದ ಅಭ್ಯರ್ಥಿ ನಿಲ್ಲಿಸಿದ್ದೇವೆ. ನಮ್ಮದು ಸಿಕ್ಕಾಪಟ್ಟೆ ಹಣ ಖರ್ಚು ಮಾಡಿ ಚುನಾವಣೆ ನಡೆಸುವ ಪಕ್ಷವಲ್ಲ. ಎಲ್ಲ ಅನುಕೂಲ ಹೊಂದಿರುವ ರಾಜಕೀಯ ಪಕ್ಷಗಳು, ವ್ಯಕ್ತಿಗಳೊಂದಿಗೆ ಹೋರಾಡಬೇಕಿದೆ. ಸಿರಾ ಮತ್ತು ಮುದ್ದೇಬಿಹಾಳದಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಗೆಲ್ಲುವ ಸಾಧ್ಯತೆ ಕಂಡು ಬಂದಿದೆ ಎಂದರು.