Advertisement

ಲೋಕಸಭೆ ಚುನಾವಣೆವರೆಗೆ ಮಾತ್ರ ಗ್ಯಾರಂಟಿ ಯೋಜನೆ: ಸಂಸದ ಡಾ. ಉಮೇಶ ಜಾಧವ್

07:01 PM Aug 06, 2023 | Team Udayavani |

ಕಲಬುರಗಿ: ಎಂಟು ತಿಂಗಳ ನಂತರ ನಡೆಯುವ ಲೋಕಸಭೆ ಚುನಾವಣೆವರೆಗೂ  ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ಐದು ಗ್ಯಾರಂಟಿ ಯೋಜನೆಗಳು ಜಾರಿಯಲ್ಲಿರಲಿದ್ದು, ನಂತರ ಅಂತ್ಯಗೊಳ್ಳಲಿವೆ ಎಂದು ಸಂಸದ ಡಾ. ಉಮೇಶ ಜಾಧವ್ ಭವಿಷ್ಯ ನುಡಿದರು.

Advertisement

ನಗರದ ರೈಲು ನಿಲ್ದಾಣದಲ್ಲಿ ನಡೆದ ರೈಲ್ವೆ ನಿಲ್ದಾಣದ ಪುನರ್ ವಿಕಾಸ‌ ಸಮಾರಂಭ ನಂತರ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳ ಬಗ್ಗೆ ಈಗಾಗಲೇ ಆರ್ಥಿಕ ಇಲಾಖೆ ಹಣ ನೀಡಲು ಹಿಂದೇಟು ಹಾಕಿದೆ. ಇದನ್ನು ನೋಡಿದರೆ ಯೋಜನೆಗಳ ಭವಿಷ್ಯ ಲೋಕಸಭಾ ಚುನಾವಣೆವರೆಗೂ ಎಂಬುದು ಗೊತ್ತಾಗುತ್ತದೆ ಎಂದರು.

ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳ ಬಗ್ಗೆ ತಮ್ಮದೇನು ತಕರಾರಿಲ್ಲ ಆದರೆ ಗ್ಯಾರಂಟಿ ಜತೆ ಅಭಿವೃದ್ಧಿ ಕೆಲಸವೂ ಆಗಲಿ ಎನ್ನುವ ಸದಾಶಯ ನಮ್ಮದು.‌ ಇದು ಎಲ್ಲರ ಆಶು ಕೂಡಾ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು ಸಹ ದೇಶದ ಜನತೆಗೆ ಯಾವುದೇ ಗ್ಯಾರಂಟಿ ನೀಡದೆ ಅಭಿವೃದ್ಧಿ ಕೆಲಸ ಮಾಡುತ್ತಿದ್ದು, ಸದ್ಯ ಜಾಗತಿಕ ಮಟ್ಟದಲ್ಲಿ ಭಾರತ ಐದನೇ ಆರ್ಥಿಕ ರಾಷ್ಟ್ರವಾಗಿ ಹೊರಹೊಮ್ಮಿದೆ. ಮುಂದಿನ ದಿನಗಳಲ್ಲಿ ಮೂರನೇ ಆರ್ಥಿಕ ಬಲಿಷ್ಠ ದೇಶವಾಗಲಿದ್ದು, ಇದರಲ್ಲಿ ಯಾವುದೇ ಅನುಮಾನ ಬೇಡ.‌ಪ್ರಮುಖವಾಗಿ ಪಿಎಂ ಕಿಸಾನ್ ಸಮ್ಮಾನ ಯೋಜನೆ ಅಡಿ ದೇಶದ ಅರ್ಹ ರೈತರಿಗೆ ವಾರ್ಷಿಕ ರೂ.6 ಸಾವಿರ ಪ್ರೋತ್ಸಾಹ ಧನ ಅವರ ಖಾತೆಗೆ ಜಮೆ ಮಾಡಲಾಗುತ್ತಿದೆ. ವಿವಿಧ ಯೋಜನೆಗಳಡಿ ಶೇ.75ರಷ್ಟು ಸಹಾಯಧನ, ಸೌಲಭ್ಯ ನೀಡಲಾಗುತ್ತಿದೆ. ಇದು ಗ್ಯಾರಂಟಿ ಆಗುವುದಿಲ್ಲವೇ? ಎಂದು ಸಂಸದ ಡಾ. ಉಮೇಶ ಜಾಧವ್ ಪ್ರಶ್ನಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಧಾನಿ ನರೇಂದ್ರ ಮೋದಿಗೆ ಹಾಕಿರುವ ಸವಾಲು ಹಾಸ್ಯಾಸ್ಪದದಿಂದ ಕೂಡಿದೆ ಎಂದು ತಿರುಗೇಟು ನೀಡಿದರು.

Advertisement

ಎರಡು ತಿಂಗಳಲ್ಲೇ ಕೆಲಸ ಆರಂಭ: ಲಕ್ಷಕ್ಕೂ ಅಧಿಕ ಉದ್ಯೋಗ ಸೃಷ್ಟಿಸುವ ಕಲಬುರಗಿ ತಾಲೂಕಿನ ಫಿರೋಜಾಬಾದ್, ಹೊನ್ನಕಿರಣಗಿ, ನದಿಸಿಣ್ಣೂರ ಗ್ರಾಮಗಳಲ್ಲಿನಿರ್ಮಾಣವಾಗುವ ಮೆಗಾ ಟೆಕ್ಸ್‌ಟೈಲ್ ಪಾರ್ಕ್ (ಮೆಗಾ ಜವಳಿ ಉದ್ಯಮ ಪಾರ್ಕ್) ಶಂಕುಸ್ಥಾಪನೆ ನೆರವೇರಿದ್ದು, ಮುಂದಿನ ಎರಡು ತಿಂಗಳಯೊಳಗೆ ಕೆಲಸ ಆರಂಭವಾಗಲಿದೆ. ಕೆಲ ತಾಂತ್ರಿಕ ಸಮಸ್ಯೆಗಳು ಹಂತ ಹಂತವಾಗಿ ಬಗೆಹರಿಯುತ್ತಿವೆ. ಎರಡು ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆ ನಿರೀಕ್ಷಿಸಲಾಗಿದೆ. ಈಗಾಗಲೇ ಜಾಗತಿಕ ಮಟ್ಟದ ಜವಳಿ ಕಂಪನಿಗಳಿಗೆ ಆಹ್ವಾನ ನೀಡಲಾಗಿದೆ ಎಂದು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.

ಶಹಾಬಾದ್ ರೈಲ್ವೆ ನಿಲ್ದಾಣಕ್ಕೆ ಕೊರೊನಾ ಕಾಲಘಟ್ಟದಲ್ಲಿ ನಿಲ್ಲುಗಡೆ ಸ್ಥಗಿತವಾಗಿದ್ದ ಎಲ್ಲ ರೈಲ್ವೆಗಳು ಪುನಃ ನಿಲ್ಲುಗಡೆಯಾಗಲಿವೆ. ಈ ಬಗ್ಗೆ ರೈಲ್ವೆ ಸಚಿವರು ಖಾತ್ರಿಪಡಿಸಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next