Advertisement

ಶೇ.28ರ ಸ್ಲಾಬ್ನಲ್ಲಿ 35 ಸರಕುಗಳು

11:19 AM Jul 23, 2018 | |

ಹೊಸದಿಲ್ಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಯ ಅತ್ಯಂತ ಹೆಚ್ಚಿನ ಪ್ರಮಾಣದ ತೆರಿಗೆ ಸ್ಲಾಬ್‌ ಶೇ.28ರ ವ್ಯಾಪ್ತಿಯಲ್ಲಿ ಇನ್ನು ಕೇವಲ 35 ವಸ್ತುಗಳು ಮಾತ್ರ ಉಳಿದಿವೆ. ಅದರಲ್ಲಿ ಡಿಜಿಟಲ್‌ ಕೆಮರಾ, ವೀಡಿಯೋ ರೆಕಾರ್ಡರ್‌, ಡಿಶ್‌ ವಾಷಿಂಗ್‌ ಮೆಷಿನ್‌ ಇತ್ಯಾದಿ ಸೇರಿವೆ. 2017ರ ಜು.1ರಂದು ಜಿಎಸ್‌ಟಿ ಜಾರಿಗೊಳಿಸಿದ ವೇಳೆ 226 ಸರಕುಗಳು ಶೇ.28ರ ತೆರಿಗೆ ವ್ಯಾಪ್ತಿಯಲ್ಲಿದ್ದವು. ಆದರೆ ಒಂದು ವರ್ಷದ ಅವಧಿಯಲ್ಲಿ 191 ವಸ್ತುಗಳು ಮತ್ತು ಸೇವೆಗಳ ಮೇಲಿನ ಶೇ.28ರ ಪ್ರಮಾಣದ ತೆರಿಗೆ ಕಡಿಮೆ ಮಾಡುತ್ತಾ ಬರಲಾಗಿದೆ. ಆದಾಯ ಸಂಗ್ರಹಣೆ ಸುಧಾರಿಸುತ್ತಿದ್ದಂತೆ ಶೇ.28ರ ತೆರಿಗೆ ವ್ಯವಸ್ಥೆಯಲ್ಲಿನ ವಸ್ತುಗಳನ್ನು ಕಡಿಮೆ ಮಾಡಬೇಕಾಗಬಹುದು ಎಂದು ತಜ್ಞರು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next