ಬೆಂಗಳೂರು: ರಾಜ್ಯಕ್ಕೆ ಬರಬೇಕಾದ ಜಿಎಸ್‌ಟಿ ತೆರಿಗೆ ಹಣವು ಈ ಮಾಸಾಂತ್ಯ ದೊಳಗೆ ಬರಲಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕರ್ನಾ ಟಕ ಮಾತ್ರವಲ್ಲದೇ ಗುಜರಾತ್, ಮಹಾರಾಷ್ಟ್ರ ಸೇರಿ ವಿವಿಧ ರಾಜ್ಯಗಳಿಗೆ ನೀಡ ಬೇಕಾದ ಜಿಎಸ್‌ಟಿ ತೆರಿಗೆ ಹಣವನ್ನು ಮಾಸಾಂತ್ಯದೊಳಗೆ ನೀಡಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಅದರಂತೆ ರಾಜ್ಯಕ್ಕೆ ಜಿಎಸ್‌ಟಿ ಹಣ ಬರಲಿದೆ ಎಂದರು.
15ನೇ ಹಣಕಾಸು ಆಯೋಗವು ರಾಜ್ಯಕ್ಕೆ 5,400 ಕೋಟಿ ರೂ. ನೀಡಲು ನಿರ್ಧರಿಸಿದ್ದು, ಇದಕ್ಕೆ ಸಂಬಂಧಿಸಿದ ಫೈಲು ಹಣಕಾಸು ಸಚಿವಾಲಯದಲ್ಲಿದೆ. ಈ ಬಗ್ಗೆ ಗಮನಿಸುವಂತೆ ಸಿಎಂ ಯಡಿ ಯೂರಪ್ಪ ತಿಳಿಸಿದ್ದಾರೆ. ಈ ಸಂಬಂಧ ಹಣಕಾಸು ಸಚಿವರ ಜತೆ ಚರ್ಚಿಸಲಾಗುವುದು ಎಂದರು.
ವಿಧಾನಸೌಧಕ್ಕೆ ಮಾಧ್ಯಮಗಳ ಪ್ರವೇಶ ನಿರ್ಬಂಧ ಹೇರಿಕೆ ಎಷ್ಟರ ಮಟ್ಟಿಗೆ ಸರಿ ಎಂದು ಪತ್ರಕರ್ತರ ಪ್ರಶ್ನೆಗೆ, ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ದಂತೆ ಮಾಧ್ಯಮ ಕೂಡ ಒಂದು ಅಂಗ. ಮಾಧ್ಯಮಗಳಿಗೆ ಆದ್ಯತೆ ನೀಡಲೇಬೇಕು. ಯಾವುದೇ ಸರ್ಕಾರದಿಂದಲೂ ಹತ್ತಿಕ್ಕುವ ಕೆಲಸವಾಗಬಾರದು. ಒಂದು ವೇಳೆ ಹತ್ತಿಕ್ಕಿದರೆ ಇದರ ನೇರ ಪರಿಣಾಮ ಪ್ರಜಾಪ್ರಭುತ್ವದ ವ್ಯವಸ್ಥೆ ಮೇಲೆ ಬೀಳಲಿದೆ ಎಂದು ತಿಳಿಸಿದರು.
ಸಂವಿಧಾನ ಕುರಿತು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಗೌರವ ಹೊಂದಿದ್ದಾರೆ. ಆದರೆ, ಅವರು ವಿಧಾನಸೌಧ ಕುರಿತು ತೆಗೆದುಕೊಳ್ಳುವ ನಿರ್ಧಾರಕ್ಕೆ ಅವರೇ ಸುಪ್ರೀಂ. ಅವರ ನಿರ್ದೇಶ ನಗಳೇ ಅಂತಿಮ. ಈ ಬಗ್ಗೆ ಅವರನ್ನು ಟೀಕಿಸಲು ಆಗುವುದಿಲ್ಲ. ಶಿಷ್ಟಾಚಾರವೂ ಅಲ್ಲ ಎಂದರು.
3 ತಿಂಗಳಿಗಾಗುವಷ್ಟು ಎಪಿಐ ಸಂಗ್ರಹ: ಮುಂದಿನ 3 ತಿಂಗಳಿಗಾಗುವಷ್ಟು ಔಷಧಗಳ ತಯಾರಿಕೆಗೆ ಬಳಸುವ ಮೂಲ ರಾಸಾಯನಿಕ ಎಪಿಐ (ಆ್ಯಕ್ಟೀವ್ ಫಾರ್ಮಾಸುಟಿಕಲ್ ಇನ್‌ಗಿಡಿಯೆಂಟ್ಸ್) ಸಂಗ್ರಹಿಸಿಡಲಾಗಿದೆ. ಚೀನಾದಲ್ಲಿ ಕೊರೊನಾ ಹರಡಿದೆ ಎಂಬ ಮಾಹಿತಿ ಬರುತ್ತಲೇ ಔಷಧ ತಯಾರಿಕಾ ಕ್ಷೇತ್ರದ ಉದ್ಯಮಿಗಳ ಜತೆ ಸಭೆ ನಡೆಸಿ ಎಪಿಐ ಲಭ್ಯತೆ ಬಗ್ಗೆ ಖಚಿಪಡಿಸಿಕೊಳ್ಳಲಾಗಿದೆ ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ. ದೇಶದ ವಿವಿಧ ಕಡೆ 6 ಫಾರ್ಮಾ ಪಾರ್ಕ್‌ಗಳನ್ನು ಸ್ಥಾಪಿಸಲು ಸಿದ್ಧತೆ ನಡೆದಿದ್ದು, ರಾಯಚೂರಿನಲ್ಲೂ ಒಂದು ಪಾರ್ಕ್ ನಿರ್ಮಿಸಲಾಗುವುದು ಎಂದರು.