ಹೊಸದಿಲ್ಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಯಾದ ಬಳಿಕ ದೇಶದಲ್ಲಿರುವುದು 4 ಹಂತಗಳ ತೆರಿಗೆ ವ್ಯವಸ್ಥೆ. ಅದನ್ನು ಮೂರಕ್ಕೆ ಇಳಿಸುವ ಪ್ರಸ್ತಾವ ಈಗ ಕೇಂದ್ರದ ಮುಂದಿದೆ. ಅದರಂತೆ, ವಿಶೇಷವಾಗಿ ಶೇ.12 ಮತ್ತು ಶೇ.18ರ ಟ್ಯಾಕ್ಸ್ ಸ್ಲಾéಬ್ ಅನ್ನು ವಿಲೀನಗೊಳಿಸುವ ಸುಳಿವನ್ನು ಸರಕಾರದ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಹ್ಮಣ್ಯಂ ನೀಡಿದ್ದಾರೆ.
ಹಲವು ಹಂತಗಳಲ್ಲಿ ಜಿಎಸ್‌ಟಿ ಜಾರಿಯ ಬಗ್ಗೆ ಇನ್ನೂ ಆಕ್ಷೇಪಗಳು ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಪಿಎಂ ಮೋದಿ ನೇತೃತ್ವದ ಸರಕಾರ ಈ ಚಿಂತನೆ ನಡೆಸಿದೆ. ವಿತ್ತ ಸಚಿವ ಅರುಣ್ ಜೇಟಿÉ ಕೂಡ ಜು.1ರಂದು ಇದೇ ಮಾತನ್ನಾಡಿದ್ದರು.
“ಸೊನ್ನೆಯಿಂದ ಶೇ.5ರಷ್ಟು, ಶೇ.12 ಮತ್ತು ಶೇ.18ನ್ನು ವಿಲೀನಗೊಳಿಸುವುದು ಮತ್ತು ಶೇ.28ರ ತೆರಿಗೆ ವ್ಯವಸ್ಥೆ ಜಾರಿ ಮಾಡಲು ಸರಕಾರ ಮುಂದಾಗಿದೆ. ಐಷಾರಾಮಿ ವಸ್ತುಗಳ ಮೇಲೆ (ಡಿಮೆರಿಟ್ ಗೂಡ್ಸ್) ಶೇ.28 ತೆರಿಗೆ ವಿಧಿಸುವ ಪ್ರಸ್ತಾವ ಇದೆ’ ಎಂದಿದ್ದಾರೆ. ಸದ್ಯ ಸಿಮೆಂಟ್ ಮತ್ತು ಇತರ ವಸ್ತುಗಳು ಇದೇ ತೆರಿಗೆ ವ್ಯವಸ್ಥೆಯಲ್ಲಿವೆ. ಹೆಚ್ಚಿನ ಪ್ರಮಾಣದ ಸಂಪನ್ಮೂಲ ಕ್ರೋಡೀಕರಣ ಹಿನ್ನೆಲೆಯಲ್ಲಿ ಉದ್ದೇಶಪೂರ್ವಕವಾಗಿಯೇ ಅವುಗಳ ಮೇಲೆ ಇರುವ ತೆರಿಗೆ ಪ್ರಮಾಣ ತಗ್ಗಿಸಿಲ್ಲ’ ಎಂದು ಸುಬ್ರಹ್ಮಣ್ಯಂ ಹೇಳಿದ್ದಾರೆ.
ತೆರಿಗೆ ವ್ಯಾಪ್ತಿ ವಿಸ್ತಾರಗೊಳ್ಳುತ್ತಿದೆ ಎಂದು ಹೇಳಿರುವ ಅವರು, ಐಷಾರಾಮಿ ವಸ್ತುಗಳ (ಡಿಮೆರಿಟ್ ಗೂಡ್ಸ್ ) ಮೇಲೆ ಮಾತ್ರ ಮುಂದಿನ ದಿನಗಳಲ್ಲಿ ಶೇ.28ರ ತೆರಿಗೆ ವಿಧಿಸಲು ಯೋಚನೆ ಇದೆ. ಸೊನ್ನೆಯಿಂದ ಶೇ. 5ರ ವರೆಗೆ ಇರುವ ತೆರಿಗೆ ಹಂತಕ್ಕೆ ಹೆಚ್ಚಿನ ಮಂದಿ ಸೇರ್ಪಡೆ ಗೊಳ್ಳುತ್ತಾರೆ. ಬಡವರ ಹಿತಾಸಕ್ತಿ ಕಾಪಾಡು ವುದೂ ಅಗತ್ಯ ಎಂದಿದ್ದಾರೆ.
ದರ ಇಳಿಕೆ ಮಾಡಿ: ಇದೇ ವೇಳೆ ತೆರಿಗೆ ಪ್ರಮಾಣ ಇಳಿಕೆ ಮಾಡಿರುವುದರಿಂದ ಹೊಟೇಲ್ ಮತ್ತು ರೆಸ್ಟಾರೆಂಟ್‌ಗಳಲ್ಲಿ ಊಟ ಮತ್ತು ಇತರ ವಸ್ತುಗಳ ಮೇಲಿನ ತೆರಿಗೆ ಪ್ರಮಾಣ ತಗ್ಗಿಸಬೇಕು ಎಂದು ಕೇಂದ್ರ ಅಬಕಾರಿ ಮತ್ತು ಸುಂಕ ಮಂಡಳಿ (ಸಿಬಿಇಸಿ) ಹೇಳಿದೆ.