Advertisement

ಜುಲೈ 1 ರಿಂದ GST ಯುಗಾರಂಭ; ಕೆಲವು ಸೇವೆ ತುಟ್ಟಿ: ಅರುಣ್ ಜೇಟ್ಲಿ

12:16 PM May 08, 2017 | udayavani editorial |

ಟೋಕಿಯೋ : ಸರಕು ಮತ್ತು ಸೇವಾ ತೆರಿಗೆ – ಜಿಎಸ್‌ಟಿ – ಇದೇ ವರ್ಷ ಜುಲೈ 1ರಿಂದ ಜಾರಿಗೆ ಬರಲಿದೆ. ಇದರಿಂದ ಸರಕುಗಳ ದರದಲ್ಲಿ ಯಾವುದೇ ಗಮನಾರ್ಹ ಹೆಚ್ಚಳ ಉಂಟಾಗುವುದಿಲ್ಲ; ಕೆಲವೊಂದು ಸೇವೆಗಳು ಸ್ವಲ್ಪಮಟ್ಟಿಗೆ ತುಟ್ಟಿಯಾಗಲಿವೆ ಎಂದು ಹಣಕಾಸು ಚಿವ ಅರುಣ್‌ ಜೇಟ್ಲಿ ಹೇಳಿದ್ದಾರೆ. 

Advertisement

ಜಿಎಸ್‌ಟಿ ಭಾರತದ ಸ್ವಾತಂತ್ರ್ಯಾನಂತರದ ಅತೀ ದೊಡ್ಡ ತೆರಿಗೆ ಸುಧಾರಣಾ ಕ್ರಮವಾಗಿದೆ. ಜಿಎಸ್‌ಟಿ ಜಾರಿಗೆ ಬರುವ ಮೂಲಕ ಹತ್ತು ಹಲವು ಕೇಂದ್ರ ಮತ್ತು ರಾಜ್ಯ ಸುಂಕಗಳು ಕೊನೆಗೊಳ್ಳಲಿವೆ. ಅವುಗಳ ಬದಲಾಗಿ ಏಕ ರೂಪದ ರಾಷ್ಟ್ರೀಯ ಮಾರಾಟ ತೆರಿಗೆ ಜಾರಿಗೆ ಬರಲಿದೆ. ಅದರಿಂದ ದೇಶದಲ್ಲಿ ಏಕ ಮಾರುಕಟ್ಟೆ ಏರ್ಪಡಲಿದೆ ಮತ್ತು ದೇಶಾದ್ಯಂತ ಉದ್ಯಮ, ವ್ಯವಹಾರ, ವಹಿವಾಟು ಕೈಗೊಳ್ಳುವುದು ಸುಲಭವಾಗಲಿದೆ ಎಂದು ಜೇಟ್ಲಿ ಹೇಳಿದರು. 

ಇಲ್ಲಿ ಸಿಐಐ – ಕೋಟಕ್‌ ಹೂಡಿಕೆದಾರರ ದುಂಡು ಮೇಜಿನ ಸಮಾವೇಶದಲ್ಲಿ ಮಾತನಾಡುತ್ತಿದ್ದ ಜೇತ್ಲಿ ಅವರು “ನನ್ನ ನೇತೃತ್ವ ಹಾಗೂ ಎಲ್ಲ ರಾಜ್ಯಗಳ ಪ್ರತಿನಿಧಿಗಳನ್ನು ಒಳಗೊಂಡ ಜಿಎಸ್‌ಟಿ ಮಂಡಳಿಯು ಇನ್ನು ಕೇಲವೇ ದಿನಗಳಲ್ಲಿ ವಿವಿಧ ಸರಕು ಹಾಗೂ ಸೇವೆಗಳ ತೆರಿಗೆ ದರಗಳನ್ನು ಅಂತಿಮಗೊಳಿಸಲಿದೆ; ಅಂತೆಯೇ ಇದೇ ವರ್ಷ ಜುಲೈ 1ರಿಂದ ದೇಶಾದ್ಯಂತ ಅತ್ಯಂತ ಸರಳೀಕೃತ ನೇರ ತೆರಿಗೆ ಯುಗವು ಆರಂಭಗೊಳ್ಳಲಿದೆ’ ಎಂದು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next