Advertisement
ಎಪ್ರಿಲ್ ತಿಂಗಳಲ್ಲಿ 1,03,458 ಕೋಟಿ ರೂ. ಜಿ.ಎಸ್.ಟಿ. ಸಂಗ್ರಹಿಸಲಾಗಿದ್ದು, ಇದೊಂದು ಐತಿಹಾಸಿಕ ಬೆಳವಣಿಗೆ ಎಂದಿದ್ದಾರೆ ಜೇಟ್ಲಿ. ಈ ಪೈಕಿ ಎಸ್.ಜಿಎಸ್.ಟಿ. 25,704 ಕೋಟಿ ರೂ., ಸಿ.ಜಿ.ಎಸ್.ಟಿ. 18,652 ಕೋಟಿ ರೂ. ಮತ್ತು ಐ.ಜಿ.ಎಸ್.ಟಿ. 50,548 ಕೋಟಿ ರೂ. ಎಂದು ಅವರು ತಿಳಿಸಿದ್ದಾರೆ. 2017-18ನೇ ವರ್ಷದಲ್ಲಿ ಒಟ್ಟಾರೆ ಹೊಸ ತೆರಿಗೆ ಸಂಗ್ರಹ 7.41 ಲಕ್ಷ ಕೋಟಿ ರೂ. ಆಗಿದೆ. ಮಾರ್ಚ್‌ನಲ್ಲಿ 89,264 ಕೋ. ರೂ. ಜಮೆಯಾಗಿದೆ ಎಂದಿದ್ದಾರೆ ಜೇಟ್ಲಿ.
ಸಲ್ಲಿಕೆ ಮಾಡಲಾಗಿದೆ. 87.12 ಲಕ್ಷ ಮಂದಿಯ ಪೈಕಿ 60.47 ಲಕ್ಷ ಮಂದಿ ಮಾರ್ಚ್ ಅಂತ್ಯಕ್ಕೆ ತೆರಿಗೆ ಸಲ್ಲಿಕೆ ಮಾಡಿದ್ದಾರೆ ಎಂದೂ ಅವರು ಮಾಹಿತಿ ನೀಡಿದ್ದಾರೆ. – ಇದೇ ಮೊದಲ ಬಾರಿ 1.03 ಲಕ್ಷ ಕೋಟಿ ರೂ. ತೆರಿಗೆ ಸಂಗ್ರಹ
– ಎಪ್ರಿಲ್ ತಿಂಗಳ ತೆರಿಗೆಯ ಮಾಹಿತಿ ನೀಡಿದ ಸಚಿವ ಜೇಟ್ಲಿ