Advertisement

GST ರಿಟರ್ನ್ಸ್ ಫೈಲಿಂಗ್‌: ಶೇ.65 ಏರಿಕೆ

08:22 PM Dec 17, 2023 | Pranav MS |

ನವದೆಹಲಿ: ಕಳೆದ ಐದು ವರ್ಷಗಳಲ್ಲಿ ಜಿಎಸ್‌ಟಿ ರಿಟರ್ನ್ಸ್ ಫೈಲ್‌ ಮಾಡುವವರ ಸಂಖ್ಯೆ ಶೇ.65ರಷ್ಟು ಏರಿಕೆಯಾಗಿದೆ. ಈ ಸಂಖ್ಯೆ 2018ರ ಏಪ್ರಿಲ್‌ನಲ್ಲಿ 72.4 ಲಕ್ಷ ಇದ್ದದ್ದು, 2023ರ ಏಪ್ರಿಲ್‌ ವೇಳೆಗೆ 1 ಕೋಟಿ 13 ಲಕ್ಷಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ. ರಿಟರ್ನ್ಸ್‌ ಫೈಲಿಂಗ್‌ ಪ್ರಕ್ರಿಯೆ ಸರಳಗೊಳಿಸಿದ್ದೇ ಇದಕ್ಕೆ ಕಾರಣ ಎಂದಿದೆ. ಇದೇ ವೇಳೆ, ಜಿಎಸ್‌ಟಿ ಅಡಿ ನೋಂದಾಯಿತರಾಗಿರುವ ಸಕ್ರಿಯ ತೆರಿಗೆ ಪಾವತಿದಾರರ ಸಂಖ್ಯೆ 2018ರ ಏಪ್ರಿಲ್‌ನಲ್ಲಿ 1.06 ಕೋಟಿ ಇದ್ದದ್ದು, 2023ರ ಏಪ್ರಿಲ್‌ ವೇಳೆಗೆ 1.4 ಕೋಟಿಗೆ ಏರಿದೆ.

Advertisement

ಪ್ರಸಕ್ತ ಹಣಕಾಸು ವರ್ಷದಲ್ಲಿ ರಿಟರ್ನ್ಸ್ ಸಲ್ಲಿಕೆಗೆ ನಿಗದಿಪಡಿಸಿದ್ದ ದಿನಾಂಕಕ್ಕೂ ಮೊದಲು ಶೇ.90ರಷ್ಟು ಅರ್ಹ ತೆರಿಗೆದಾರರು ಜಿಎಸ್‌ಟಿಆರ್‌-3ಬಿ ರಿಟರ್ನ್ಸ್ ಸಲ್ಲಿಸಿದ್ದಾರೆ. 2017-18ರ ಹಣಕಾಸು ವರ್ಷದಲ್ಲಿ ಶೇ.68ರಷ್ಟು ತೆರಿಗೆದಾರರು ರಿಟರ್ನ್ಸ್ ಸಲ್ಲಿಸಿದ್ದರು ಎಂದು ಮಾಹಿತಿ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next