Advertisement

ಆಹಾರ್‌ನ ಕಾರ್ಯಕಾರಿ ಸಮಿತಿಯ 10ನೇ ಮಾಸಿಕ ಸಭೆ

02:02 PM Nov 07, 2017 | |

ಮುಂಬಯಿ: ಆಹಾರ್‌ನ ಕಾರ್ಯಕಾರಿ ಸಮಿತಿಯ 10ನೇ ಮಾಸಿಕ ಸಭೆಯು ಅ. 26 ರಂದು ಕಾಂದಿವಲಿ ಪೂರ್ವದ ಹೊಟೇಲ್‌ ಅವೆನ್ಯೂ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ವಲಯ ಹತ್ತರ ಪ್ರಾಯೋಜಕತ್ವದಲ್ಲಿ, ಉಪಾಧ್ಯಕ್ಷ ಪ್ರಭಾಕರ ಶೆಟ್ಟಿ ಅವರ ತಂಡದ ಆಯೋಜನೆಯಲ್ಲಿ ನಡೆಯಿತು.

Advertisement

ವಲಯ-10ರ ಉಪಾಧ್ಯಕ್ಷ ಪ್ರಭಾಕರ ಶೆಟ್ಟಿ ಅವರು ಸ್ವಾಗತಿಸಿ, ಸಭೆಯ ಉದ್ದೇಶವನ್ನು ವಿವರಿಸಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಆಹಾರ್‌ನ ಅಧ್ಯಕ್ಷ ಆದರ್ಶ್‌ ಶೆಟ್ಟಿ ಅವರು ಅಕ್ಟೋಬರ್‌ನಲ್ಲಿ ಸಂಸ್ಥೆಯು ಕೈಗೊಂಡಿರುವ ಅನೇಕ ಅಭಿವೃದ್ಧಿಪರ ಕಾರ್ಯಗಳ ಬಗ್ಗೆ ವಿವರಿಸಿ ಮಾತನಾಡಿ, ಜಿಎಸ್‌ಟಿ ದರದಲ್ಲಿ ಶೇ. 18 ರಿಂದ ಶೇ. 12ಕ್ಕೆ ತಿದ್ದುಪಡಿ ಶೀಘ್ರದಲ್ಲೇ ಜಾರಿಯಾಗಲಿದೆ. ಈಗಾಗಲೇ ಜಿಎಸ್‌ಟಿ ಕೌನ್ಸಿಲ್‌ ಅಧ್ಯಕ್ಷ ಸುಶೀಲ್‌ ಕುಮಾರ್‌ ಮೋದಿ ಅವರ 5 ಮಂದಿಯ ಮಂಡಳಿಯಲ್ಲಿದ್ದು, ಶೀಘ್ರದಲ್ಲೇ ಜಾರಿಯಾಗಲಿದೆ. ಅದರಲ್ಲೂ 4 ಸಭಾ ಸದಸ್ಯರ ಸಹಕಾರ ತಮ್ಮೊಂದಿಗಿದ್ದು, ಆಹಾರ್‌ ನಿಯೋಗವು ಪ್ರತಿಯೋರ್ವರನ್ನು ಭೇಟಿಯಾಗಿ ವಿನಂತಿಸಿದೆ. ಒಣ ಮತ್ತು ಹಸಿ ತ್ಯಾಜ್ಯಗಳ ವಿಂಗಡಣೆ ಮತ್ತು ವಿಲೇವಾರಿಯ ಬಗ್ಗೆ ಮಾಹಿತಿ ನೀಡಿದ ಅವರು, ಈಗಾಗಲೇ ಒಣ ಮತ್ತು ಹಸಿ ತ್ಯಾಜ್ಯಗಳ ಬೇರ್ಪಡಿಸುವಿಕೆ ಮಾಡದಿರುವುದು ಬೇಸರದ ಸಂಗತಿ. ಇದರಿಂದಾಗಿ ನಮ್ಮ ನಿಯೋಗಕ್ಕೆ ನಗರ ಪಾಲಿಕೆಯಲ್ಲಿ ಹಿನ್ನಡೆಯಾಗಿದೆ. ಆದ್ದರಿಂದ ಪ್ರತಿಯೋರ್ವ ಹೊಟೇಲಿಗರೂ ಇದರಲ್ಲಿ ಕೈಜೋಡಿಸಬೇಕು. ಮಹಾನಗರ ಪಾಲಿಕೆಯ ಆಯುಕ್ತ ಅಜೋಯ್‌ ಮೆಹ್ತಾ ಹಾಗೂ ಉಪಾಯುಕ್ತ ರಮೇಶ್‌ ಪವಾರ್‌ ಜತೆ ನಮ್ಮ ಭೇಟಿಯು ಫಲಪ್ರದವಾಗಿದ್ದು, ನಮ್ಮ ಭೇಟಿಯ ಅನಂತರ ಅವರು ನಗರದ ಎಲ್ಲಾ ವಾರ್ಡ್‌ ಅಧಿಕಾರಿಗಳಿಗೆ ತ್ಯಾಜ್ಯ ವಿಲೇವಾರಿ ವಿಷಯದಲ್ಲಿ ಯಾವುದೇ ಹೊಟೇಲಿಗರಿಗೆ ತೊಂದರೆ ನೀಡದೆ ಅದನ್ನು ವಿಲೇವಾರಿ ಮಾಡುವಂತೆ ಸಂದೇಶ ರವಾನಿಸಿದ್ದಾರೆ. ಸಂಸತ್‌ ಸದಸ್ಯ ರಾಹುಲ್‌ 

ಶೆವಾಲೆ ಅವರು ನಮಗೆ ತ್ಯಾಜ್ಯ ವಿಲೇವಾರಿಹಾಗೂ ರೂಫ್‌ಟಾಪ್‌ ರೆಸ್ಟೋರೆಂಟ್‌ ವಿಷಯದಲ್ಲಿ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ. ಎಫ್‌ಎಸ್‌ಎಸ್‌ಐ ಸಮಿತಿಯ ಉಪಾಧ್ಯಕ್ಷ ಪ್ರಮೋದ್‌ ನಾಯಕ್‌ ಹಾಗೂ ನಂದು ಶೆಟ್ಟಿ ಅವರ ಅವಿರತ ಪ್ರಯತ್ನದಿಂದ ಎಫ್‌ಒಎಸ್‌ಟಿಸಿ ಕಾರ್ಯಕ್ರಮವು ಹೊಟೇಲ್‌ ಮಾಲಕರು ಮತ್ತು ಕಾರ್ಮಿಕರು ಭಾಗಿಯಾಗುವುದರೊಂದಿಗೆ ತುಂಬಾ ಯಶಸ್ಸು ಕಂಡಿದೆ. ಸುಮಾರು 1412 ಮಂದಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಇದರ ಲಾಭವನ್ನು ಗಳಿಸಿದ್ದಾರೆ. ಆಹಾರ್‌ ನಿಯೋಗವು ವೆಸ್ಟರ್ನ್ ಇಂಡಿಯಾ ಸಂಸ್ಥೆ ಮತ್ತು ವೈನ್‌ಶಾಪ್‌ ಸಂಘಟನೆಗಳ ಜೊತೆಗೂಡಿ ಸಾಂತಾಕ್ರೂಜ್‌ ಪೊಲೀಸ್‌ ಠಾಣೆಯ ಅಧಿಕಾರ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಹೊಟೇಲ್‌ಗ‌ಳ ಡ್ರೈಡೇಯದ್ದು ರದ್ದು ಮಾಡುವಲ್ಲಿ ಯಶಸ್ವಿಯಾಗಿದೆ. ಆದರೆ ಛs…ಪೂಜೆ ಪ್ರಯುಕ್ತ ಡ್ರೈಡೇಯನ್ನು ಜಿಲ್ಲಾಧಿಕಾರಿ ಘೋಷಿಸಿದ್ದರು ಎಂದು ನುಡಿದರು.

ಆಹಾರ್‌ನ ಚುನಾವಣಾಧಿಕಾರಿ ಡಿ. ಕೆ. ಶೆಟ್ಟಿ ಅವರು ಮುಂಬರುವ ಅಸೋಸಿಯೇಶನ್‌ನಚುನಾವಣೆ  ದಿನಾಂಕ, ಸಿದ್ಧತೆಗಳ ಬಗ್ಗೆ ವಿವರಿಸಿದರು. ಸಂಸದ ಗೋಪಾಲ್‌ ಶೆಟ್ಟಿ ಅವರು ಆಗಮಿಸಿ,  ಹೊಟೇಲ್‌ ಉದ್ಯಮದ ಮುಂದಿರುವ ಸಮಸ್ಯೆಗಳನ್ನು ಆಹಾರ್‌ ಉತ್ತಮವಾಗಿ ನಿವಾರಿಸುವಲ್ಲಿ ಯಶಸ್ಸನ್ನು ಕಾಣುತ್ತಿದೆ. ಹೊಟೇಲಿಗರ ಸಮಸ್ಯೆಗಳಿಗೆ ಹಗಲಿರುಳು ಶ್ರಮಿಸುತ್ತಿರುವ ಆಹಾರ್‌ನ ಪದಾಧಿಕಾರಿಗಳ ಕಾರ್ಯವೈಖರಿ ಅಭಿನಂದನೀಯವಾಗಿದೆ. ಜಿಎಸ್‌ಟಿ ದೇಶದ ಪ್ರಗತಿಗೆ ಇಟ್ಟ ಒಂದು ಹೆಜ್ಜೆಯಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಸಂಸ್ಥೆಯ ವತಿಯಿಂದ ಸಂಸದ ಗೋಪಾಲ್‌ ಶೆಟ್ಟಿ ಅವರನ್ನು ಗೌರವಿಸಲಾಯಿತು. ಮಾಜಿ ಅಧ್ಯಕ್ಷರು ಹಾಗೂ ಸಲಹೆಗಾರರಾದ ಚಂದ್ರಹಾಸ್‌ ಕೆ. ಶೆಟ್ಟಿ ಸಲಹೆ ಸೂಚನೆಗಳನ್ನು ನೀಡಿದರು. ವಲಯ ಒಂದರ ಉಪಾಧ್ಯಕ್ಷ ಮಹೇಂದ್ರ ಕರ್ಕೇರ, ವಲಯ ಎರಡರ ಉಪಾಧ್ಯಕ್ಷ ಕೆ. ವಿ. ಶೆಟ್ಟಿ, ವಲಯ ಮೂರರ ಉಪಾಧ್ಯಕ್ಷ ವಿಜಯ ಶೆಟ್ಟಿ, ವಲಯ 4ರ ಉಪಾಧ್ಯಕ್ಷ ಸುನೀಲ್‌ ಶೆಟ್ಟಿ, ವಲಯ 5ರ ಉಪಾಧ್ಯಕ್ಷ ರವೀಂದ್ರನಾಥ ನೀರೆ, ವಲಯ 6ರ ಉಪಾಧ್ಯಕ್ಷ ಅಮರ್‌ ಶೆಟ್ಟಿ, ವಲಯ 7 ರಉಪಾಧ್ಯಕ್ಷ ರಾಜನ್‌ ಶೆಟ್ಟಿ, ವಲಯ 8ರ ಉಪಾಧ್ಯಕ್ಷ ಜಗದೀಶ್‌ ಶೆಟ್ಟಿ, ವಲಯ 9ರ ಉಪಾಧ್ಯಕ್ಷ ಕರುಣಾಕರ ಶೆಟ್ಟಿ, ವಲಯ ಹತ್ತರ ಉಪಾಧ್ಯಕ್ಷ ಪ್ರಭಾಕರ ಶೆಟ್ಟಿ ಅವರು ನೂತನ ಸದಸ್ಯರ ಸೇರ್ಪಡೆ ಮತ್ತು ಆಯಾಯ ವಲಯಗಳ ಸಾಧನೆಗಳನ್ನು ವಿವರಿಸಿದರು.

Advertisement

ವಿಶ್ವಪಾಲ್‌ ಶೆಟ್ಟಿ ಅವರು ಸಭೆಯಲ್ಲಿ ಆಯೋಜಿಸಲಾಗಿದ್ದ ವಿವಿಧ ಕಂಪೆನಿಗಳ ಸ್ಟಾಲ್‌ಗ‌ಳ ಮುಖ್ಯಸ್ಥರನ್ನು ಪರಿಚಯಿಸಿದರು. ವಲಯ 10ರ ಉಪಾಧ್ಯಕ್ಷ ಪ್ರಭಾಕರ ಶೆಟ್ಟಿ ಸ್ವಾಗತಿಸಿದರು. ಸಂತೋಷ್‌ ಶೆಟ್ಟಿ ವಂದಿಸಿದರು. ಸದಸ್ಯ ಬಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next