ಬಂಗಾರಪೇಟೆ: ದೇಶದಲ್ಲಿ ಆಹಾರ ಭದ್ರತಾ ಕಾಯ್ದೆ ಜಾರಿಯಲ್ಲಿದೆ ಎಲ್ಲರಿಗೂ ಪೌಷ್ಟಿಕ ಆಹಾರ ಸಿಗಬೇಕೆಂದು ಕಾಯ್ದೆ ಹೇಳುತ್ತದೆ. ಹಾಲು ಮೊಸರು ಮೊದಲಾದ ಪೌಷ್ಟಿಕ ಆಹಾರಗಳೇ ಒಂದಡೆ ಆಹಾರ ಭದ್ರತಾ ಕಾಯ್ದೆಯ ಮುಂದಿಟ್ಟುಕೊಂಡು ಪೌಷ್ಟಿಕ ಆಹಾರ ಪೂರೈಸುವ ಬಗ್ಗೆಮಾತನಾಡುವ ಸರ್ಕಾರ ಮತ್ತೂಂದಡೆ ಪೌಷ್ಟಿಕ ಆಹಾರಗಳ ಮೇಲೆ ಜಿಎಸ್‌ಟಿ ಹಾಕುತ್ತಿದೆ ಎಂದು ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ರೈಲ್ವೆ ನಿಲ್ದಾಣದ ಬಳಿ ರೈತ ಸಂಘದಿಂದ ಪ್ರತಿಭಟನೆ ಮಾಡಿ, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಬೆಂದಿರುವ ಜನ ಸಾಮಾನ್ಯರಿಗೆ ಜಿಎಸ್‌ಟಿ ಮೂಲಕಆಹಾರ ಅಭದ್ರತೆ ಸೃಷ್ಟಿಸುತ್ತಿರುವ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಬೇಕು ರೈತ ಸಂಘದಿಂದ ಅಗತ್ಯ ವಸ್ತುಗಳಾದ ಹಾಲು, ಮೊಸರು, ಅಕ್ಕಿ ಸಮೇತ ರೈಲ್ವೆ ನಿಲ್ದಾಣ ಮುತ್ತಿಗೆ ಹಾಕಿ ರೈಲ್ವೆ ಅಧಿಕಾರಿಗಳಿಗೆ ಮನವಿ ನೀಡಿ ಮಾತನಾಡಿದರು.
24 ಗಂಟೆಯಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಣ ಜತೆಗೆ ಪೌಷ್ಟಿಕ ಆಹಾರಗಳ ಮೇಲೆ ವಿಧಿಸಿರುವ ಜಿಎಸ್‌ಟಿ ಆದೇಶ ವಾಪಸ್ ಪಡೆದು ಜನ ಸಾಮಾನ್ಯರರಕ್ಷಣೆ ಮಾಡಬೇಕು. ಮುಂಗಾರು ಕೃಷಿಗೆ ಅವಶ್ಯಕತೆ ಇರುವರಸಗೊಬ್ಬರ ಬಿತ್ತನೆ ಬೀಜ ಅಭಾವ ಸೃಷ್ಟಿಯಾಗದಂತೆ ರೈತರಮನೆ ಬಾಗಿಲಿಗೆ ತಲುಪಿಸುವ ಯೋಜನೆ ರೂಪಿಸಬೇಕುಇಲ್ಲವಾದರೆ ಕೂಲಿ ಕಾರ್ಮಿಕರು ಕೂಲಿ ಬಿಟ್ಟು ರೈತರು ಕೃಬಿಟ್ಟು ಜಾನುವಾರುಗಳ ಸಮೇತ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡುವ ಎಚ್ಚರಿಕೆ ನೀಡಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್ ಮಾತನಾಡಿದರು. ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ, ಹಸಿರುಸೇನೆ ತಾಲೂಕು ಅಧ್ಯಕ್ಷ ಚಲಪತಿ,ತಾಲೂಕು ಅಧ್ಯಕ್ಷ ಐತಾಂಡಹಳ್ಳಿ ಮುನ್ನಾ, ಜಿಲ್ಲಾ ಉಪಾಧ್ಯಕ್ಷಚಾಂದ್‌ಪಾಷ, ಸುರೇಶ್‌ಬಾಬು, ಮಂಗಸಂದ್ರ ತಿಮ್ಮಣ್ಣ,ಈಕಂಬಳ್ಳಿ ಮಂಜುನಾಥ, ಕಾಮಸಮುದ್ರ ಮುನಿಕೃಷ್ಣ,ರಾಮಸಾಗರ ವೇಣು, ಸಂದೀಪ್‌ರೆಡ್ಡಿ, ಸಂದೀಪಗೌಡ,ಕಿರಣ್, ಅನಿಲ್, ಹರೀಶ್, ಸುಪ್ರಿಂ ಚಲ, ಫಾರುಕ್‌ಪಾಷ ಬಂಗಾರಿ ಮಂಜು, ರಾಜೇಶ್ ಇತರರಿದ್ದರು.