Advertisement
ಬಾಡಿಗೆ ಮನೆಗಳ ಮೇಲಿನ ಹೊಸ ಜಿಎಸ್‌ಟಿ ನಿಯಮ ಜುಲೈ 18 ರಿಂದ ಜಾರಿಗೆ ಬಂದಿದೆ. ಆ ನಂತರ ಬಾಡಿಗೆದಾರರು ಮನೆ ಬಾಡಿಗೆಗೆ 18% ಜಿಎಸ್‌ಟಿ ಪಾವತಿಸಬೇಕಾಗುತ್ತದೆ ಎಂಬ ಸುದ್ದಿಗಳು ಜನರಲ್ಲಿ ಗೊಂದಲ ಮೂಡಿಸಿದ್ದವು.
Related Articles
Advertisement
ಬಾಡಿಗೆ ಮೇಲಿನ ಜಿಎಸ್‌ಟಿಗೆ ಸಂಬಂಧಿಸಿದಂತೆ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ ಮೂರು ಪ್ರಮುಖ ವಿಷಯಗಳನ್ನು ಪಟ್ಟಿ ಮಾಡಿದೆ. ಅವುಗಳೆಂದರೆ,
— ವ್ಯಾಪಾರ ಘಟಕವಾಗಿ ಬಾಡಿಗೆ ನೀಡಿದಾಗ ಮಾತ್ರ ವಸತಿ ಘಟಕದ ಬಾಡಿಗೆಗೆ ತೆರಿಗೆ ವಿಧಿಸಲಾಗುತ್ತದೆ.
— ವೈಯಕ್ತಿಕ ಬಳಕೆಗಾಗಿ ಖಾಸಗಿ ವ್ಯಕ್ತಿಗೆ ಬಾಡಿಗೆಗೆ ನೀಡಿದಾಗ ಜಿ ಎಸ್ ಟಿ ವಿಧಿಸಲಾಗುವುದಿಲ್ಲ.
— ಸಂಸ್ಥೆಯ ಮಾಲೀಕರು ಅಥವಾ ಪಾಲುದಾರರು ವೈಯಕ್ತಿಕ ಬಳಕೆಗಾಗಿ ನಿವಾಸವನ್ನು ಬಾಡಿಗೆಗೆ ಪಡೆದಿದ್ದರೂ ಸಹ ಯಾವುದೇ ಜಿ ಎಸ್ ಟಿ ಇಲ್ಲ.
ಇದರ ಜೊತೆಗೆ ವೈರಲ್ ಸಂದೇಶವಾಗಿ ಕಳುಹಿಸಲಾದ ಯಾವುದೇ ಅನುಮಾನಾಸ್ಪದ ಲಿಂಕ್‌ಗಳನ್ನು ಜನರು ಕ್ಲಿಕ್ ಮಾಡಬಾರದು ಎಂದು ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ ನಾಗರಿಕರಿಗೆ ಸಲಹೆ ನೀಡಿದೆ.