Advertisement

“ಜಿಎಸ್‌ಟಿ ಹೊಸ ಕಾಯ್ದೆ  ಪೂರ್ಣ ಹೊಸತಲ್ಲ’

03:35 AM Jun 29, 2017 | Team Udayavani |

ಉಡುಪಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಭಾರತದ ಮಟ್ಟಿಗೆ ಹೊಸ ಕಾಯ್ದೆ ಆಗಿದ್ದರೂ, ಕೆಲವೊಂದು ನಿಯಮಗಳು, ಷರತ್ತುಗಳು ವ್ಯಾಟ್‌ನಂತಹ ತೆರಿಗೆ ಪದ್ಧತಿಯಲ್ಲಿಯೂ ಇದ್ದುದರಿಂದ ಸಂಪೂರ್ಣ ಹೊಸತಲ್ಲ. ಇಂತಹ ಕಾರ್ಯಾಗಾರದಿಂದ ಜನರು, ವರ್ತಕರು, ಉದ್ದಿಮೆದಾರರಿಗೆ ಸಮರ್ಪಕ ಮಾಹಿತಿ ಸಿಗಲು ಸಾಧ್ಯ. ಏಕ ರೀತಿಯ ತೆರಿಗೆ ಪದ್ಧತಿಯನ್ನು ಸ್ವಾಗತಿಸಿ, ಸಮರ್ಪಕ ಅನುಷ್ಠಾನಕ್ಕೆ ಸಹಕರಿಸಿ ಎಂದು ಉಡುಪಿ ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತ ಆರ್‌. ಬಿ. ನಾಯಕ್‌ ಹೇಳಿದರು. 

Advertisement

ಅವರು ಉಡುಪಿ ಜಿಲ್ಲಾ ಟ್ಯಾಕ್ಸ್‌ ಬಾರ್‌ ಅಸೋಸಿಯೇಶನ್‌ ವತಿಯಿಂದ ಜು. 1 ರಿಂದ ದೇಶದಾದ್ಯಂತ ಜಾರಿಗೆ ಬರಲಿರುವ ಜಿಎಸ್‌ಟಿ ತೆರಿಗೆ ಕುರಿತು ಕಿದಿಯೂರು ಹೋಟೆಲ್‌ನ ಅನಂತ ಶಯನ ಸಭಾಂಗಣದಲ್ಲಿ ಬುಧವಾರ ನಡೆದ ಮಾಹಿತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು. ಜಿಲ್ಲಾ ಟ್ಯಾಕ್ಸ್‌ ಬಾರ್‌ ಅಸೋಸಿಯೇಶನ್‌ ಅಧ್ಯಕ್ಷ ಪ್ರಸಾದ್‌ ಉಪಾಧ್ಯಾಯ ಪ್ರಾಸ್ತವಿಕವಾಗಿ ಮಾತನಾಡಿ ರಾಜ್ಯದಲ್ಲಿ ಸುಮಾರು 50 ಸಾವಿರ ಕೋ. ರೂ. ವ್ಯಾಟ್‌ (ಮೌಲ್ಯವರ್ಧಿತ) ತೆರಿಗೆ ಸಂಗ್ರಹ ವಾಗುತ್ತಿದ್ದು, ಮುಂಚೂಣಿ ಯಲ್ಲಿದೆ. ಅದೇ ರೀತಿ ಈಗ ಶೇ. 100 ರಷ್ಟು ತೆರಿಗೆ ಪಾವತಿದಾರರು ಜಿಎಸ್‌ಟಿ ವ್ಯವಸ್ಥೆಯನ್ನು ನೊಂದಾವಣಿ ಮಾಡಿಸಿಕೊಳ್ಳುವ ಮೂಲಕ ಉತ್ತಮ ಸ್ಪಂದನೆ ವ್ಯಕ್ತವಾಗಿದೆ ಎಂದರು. ಸಭಾ ಕಾರ್ಯಕ್ರಮದ ಬಳಿಕ ನೋಂದಾವಣಿ, ಬಿಲ್ಲಿಂಗ್‌, ಟ್ರಾನ್ಸ್‌ ಮಿಶನ್‌, ಕಂಪೋಶಿನ್‌ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ಕಾರ್ಯಾಗಾರ ನಡೆಯಿತು.  ಮಂಗಳೂರು ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತ ಡಿ. ಶಂಭು ಭಟ್‌, ಸಹಾಯಕ ಆಯುಕ್ತೆ ಹೇಮಲತಾ ಎನ್‌. ಉಪಸ್ಥಿತರಿದ್ದರು.  ಜತೀಂದ್ರ ಮರವಂತೆ ಸ್ವಾಗತಿಸಿದರು. ಕಾರ್ಯದರ್ಶಿ ದಿವಾಕರ್‌ ಶೆಟ್ಟಿ ವಂದಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next