ಈ ಬಗ್ಗೆ ಮಾಜಿ ವಿತ್ತ ಸಚಿವ ಅರುಣ್ ಜೇಟ್ಲಿ ಸುಳಿವು ನೀಡಿದ್ದಾರೆ. ಜಿಎಸ್‌ಟಿ ಜಾರಿಯಾಗಿ 2 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಈ ಎರಡು ಸ್ಲ್ಯಾಬ್‌ಗಳನ್ನು ವಿಲೀನಗೊಳಿಸಬಹುದು ಎಂದು ಸಲಹೆ ನೀಡಿದ್ದಾರೆ. ಅಷ್ಟೇ ಅಲ್ಲ, 20 ರಾಜ್ಯಗಳು ಜಿಎಸ್‌ಟಿ ಅಡಿಯಲ್ಲಿ ಶೇ. 14ರಷ್ಟು ಹೆಚ್ಚು ಆದಾಯವನ್ನು ಗಳಿಸುತ್ತಿದ್ದು, ಇನ್ನೂ ರಾಜ್ಯಗಳಿಗೆ ತೆರಿಗೆ ನಷ್ಟದ ಪರಿಹಾರವನ್ನು ನೀಡುವ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.
Advertisement
ಬಹುತೇಕ ಗೃಹ ಬಳಕೆಯ ಸಾಮಗ್ರಿಗಳನ್ನು ಶೇ.12., ಶೇ.18 ಹಾಗೂ ಶೇ.5ರ ತೆರಿಗೆ ವ್ಯಾಪ್ತಿಗೆ ಒಳಪಡಿಸಲಾಗಿದೆ. ಐಷಾರಾಮಿ ಹಾಗೂ ತಂಬಾಕು ಉತ್ಪನ್ನಗಳಿಗೆ ಮಾತ್ರ ಶೇ.28ರ ತೆರಿಗೆ ವಿಧಿಸಲಾಗಿದೆ. ಈ ಸ್ಲ್ಯಾಬ್‌ನಲ್ಲಿ ಉಳಿದ ಇತರೆಲ್ಲ ಸಾಮಗ್ರಿಗಳನ್ನೂ ಬೇರೆ ಸ್ಲ್ಯಾಬ್‌ಗಳಿಗೆ ವರ್ಗಾವಣೆ ಮಾvಲಾಗಿದೆ. ಆದಾಯದ ಪ್ರಮಾಣ ಹೆಚ್ಚುತ್ತಿದ್ದಂತೆ ಶೇ. 12 ಮತ್ತು ಶೇ. 18 ಅನ್ನು ವಿಲೀನಗೊಳಿಸಬಹುದು. ಶೂನ್ಯ ಹಾಗೂ ಶೇ.5ರ ಸ್ಲ್ಯಾಬ್‌ಗಳು ಎಂದಿಗೂ ಉಳಿದುಕೊಳ್ಳುತ್ತವೆ ಎಂದಿದ್ದಾರೆ.