ಈ ಮೊತ್ತವನ್ನು 20 ರಾಜ್ಯಗಳು ಮುಕ್ತ ಮಾರುಕಟ್ಟೆಯಿಂದ ಸಾಲದ ರೂಪದಲ್ಲಿ ಪಡೆಯಲಿವೆ. ಕೇಂದ್ರ ಹಣಕಾಸು ಸಚಿವಾಲಯ ಈ ಬಗ್ಗೆ ಅಧಿಕೃತವಾಗಿ ಪ್ರಕಟನೆ ಹೊರಡಿಸಿದೆ.
Advertisement
ಸೋಮವಾರ ಜಿಎಸ್‌ಟಿ ಮಂಡಳಿ ಸಭೆ ನಡೆದಿದ್ದು, ಬಿಜೆಪಿಯೇತರ ರಾಜ್ಯಗಳು ಸಾಲ ಪಡೆಯಲು ಅಸಮ್ಮತಿ ಸೂಚಿಸಿದ್ದವು. ಆದರೆ ಈಗಾಗಲೇ 20 ರಾಜ್ಯಗಳು ಕೇಂದ್ರ ಸರಕಾರ ನೀಡಿದ್ದ ಆಯ್ಕೆ 1ರಂತೆ ಸಾಲ ಪಡೆಯಲು ಒಪ್ಪಿಗೆ ನೀಡಿವೆ. ಬಿಜೆಪಿ ಸರಕಾರೇತರ ರಾಜ್ಯಗಳ ಪ್ರತಿರೋಧ ಇದ್ದರೂ ಕೇಂದ್ರ ಸರಕಾರವು ಬಿಜೆಪಿ ಮತ್ತು ಮಿತ್ರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಿಗೆ ಹಣ ಬಿಡುಗಡೆ ಮಾಡಿದೆ. ಅಚ್ಚರಿಯೆಂದರೆ ಬಿಜೆಪಿಯೇತರ ರಾಜ್ಯವಾದ ಮಹಾರಾಷ್ಟ್ರ ಕೂಡ ಆಯ್ಕೆ 1ಕ್ಕೆ ಒಪ್ಪಿಕೊಂಡು 15,394 ಕೋ.ರೂ. ಸಾಲ ಪಡೆದಿದೆ.
ಕರ್ನಾಟಕ, ಆಂಧ್ರ ಪ್ರದೇಶ, ಅರುಣಾಚಲ ಪ್ರದೇಶ, ಅಸ್ಸಾಂ, ಬಿಹಾರ, ಗೋವಾ, ಗುಜರಾತ್, ಹರಿಯಾಣ, ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಒಡಿಶಾ, ಸಿಕ್ಕಿಂ, ತ್ರಿಪುರಾ, ಉತ್ತರ ಪ್ರದೇಶ ಮತ್ತು ಉತ್ತರಾಖಂಡ. 8 ರಾಜ್ಯಗಳು ಒಪ್ಪಿಗೆ ಸೂಚಿಸಿಲ್ಲ. ಆಯ್ಕೆ 1ರ ಅಡಿ ಸಿಗುವ ಸವಲತ್ತುಗಳು
– ಕೇಂದ್ರ ಹಣಕಾಸು ಸಚಿವಾಲಯ ವಿಶೇಷ ಸಾಲ ಗವಾಕ್ಷಿಯನ್ನು ರೂಪಿಸಿದೆ. ಇದು ಆದಾಯ ಕೊರತೆಯನ್ನು ಸಾಲದ ರೂಪದಲ್ಲಿ ನೀಗಿಸಲಿದೆ. ರಾಜ್ಯಗಳ ಒಟ್ಟಾರೆ ಆದಾಯ ಕೊರತೆ 1.1 ಲಕ್ಷ ಕೋ.ರೂ.ಗಳಷ್ಟಾಗಲಿದೆ ಎಂದು ಅಂದಾಜಿಸಲಾಗಿದೆ.
– ಶೇ.2ರಷ್ಟು ಹೆಚ್ಚುವರಿ ಸಾಲಕ್ಕೂ ಕೇಂದ್ರ ಒಪ್ಪಿಗೆ ನೀಡಿದ್ದು, ಈ ಪೈಕಿ ಜಿಎಸ್‌ಡಿಪಿಯ ಶೇ.0.5ರಷ್ಟು ಅಂತಿಮ ಕಂತನ್ನು ಪಡೆಯಲು ಅವಕಾಶ ಇದೆ.