Advertisement

ಲಾಕ್‌ಡೌನ್‌ ಅವಧಿಯಲ್ಲಿ ರದ್ದಾದ ವ್ಯವಹಾರಗಳಿಗೆ ಕೇಂದ್ರದ ಅಭಯ: GST ವಿನಾಯಿತಿಗೆ ಸುತ್ತೋಲೆ

08:05 PM Apr 15, 2020 | Hari Prasad |

ನವದೆಹಲಿ: ಲಾಕ್‌ಡೌನ್‌ ಅವಧಿಯಲ್ಲಿ ದೇಶದ ಉದ್ಯಮ ರಂಗಕ್ಕೆ ಜಿಎಸ್‌ಟಿ ವಿಚಾರದಲ್ಲಿ ಆಗಿರುವ ಕೆಲವು ತೊಂದರೆಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಕ್ರಮ ಕೈಗೊಂಡಿದೆ. ಕೆಲವು ಕಂಪನಿಗಳು ನೀಡಿದ್ದ ಕಚ್ಚಾ ವಸ್ತುಗಳು, ಇತರೆ ಸಾಮಗ್ರಿಗಳು ಅಥವಾ ಸೇವೆಗಳ ಆರ್ಡರ್‌ಗಳು ಲಾಕ್‌ಡೌನ್‌ನಿಂದಾಗಿ ರದ್ದಾಗಿದ್ದರೆ ಅಂಥ ವ್ಯವಹಾರಗಳಿಗೆ ಮುಂಗಡ ಪಾವತಿಸಲಾಗಿರುವ ಜಿಎಸ್‌ಟಿ ತೆರಿಗೆಯನ್ನು ತೆರಿಗೆ ರಿಟರ್ನ್ಸ್ ವೇಳೆ ವಿನಾಯಿತಿ ನೀಡಲಾಗುತ್ತದೆ ಎಂದು ಕೇಂದ್ರೀಯ ಪರೋಕ್ಷ ತೆರಿಗೆಗಳು, ಕಸ್ಟಮ್ಸ್‌ ಸುತ್ತೋಲೆ ಹೊರಡಿಸಿದೆ.

Advertisement

ಹೊಂದಾಣಿಕೆ ಹೇಗೆ?: ಮುಂಗಡ ಪೇಮೆಂಟ್‌ಗಳಿಗೆ ಸಂಬಂಧಿಸಿದಂತೆ ಲಾಕ್‌ಡೌನ್‌ ಅವಧಿಯಲ್ಲಿ ತಯಾರಾಗಿರುವ ರಸೀದಿಗಳಿಗೆ ಅನುಗುಣವಾಗಿ, ಸಂಬಂಧಪಟ್ಟ ಸರಬರಾಜು ಕಂಪನಿಗಳು, ಕ್ರೆಡಿಟ್‌ ನೋಟ್‌ಗಳನ್ನು ನೀಡಬೇಕು. ಅವುಗಳ ವಿವರಣೆಯನ್ನು ಜಿಎಸ್‌ಟಿ ರಿಟರ್ನ್ಸ್ ವೇಳೆ ಸಲ್ಲಿಕೆ ಮಾಡಬೇಕು. ಆಗ, ರದ್ದಾದ ವ್ಯವಹಾರಗಳ ಮೇಲಿನ ತೆರಿಗೆ ಮೊತ್ತವನ್ನು ರಿಟರ್ನ್ಸ್ ನಲ್ಲಿ ಹೊಂದಾಣಿಕೆ ಮಾಡಲಾಗುತ್ತದೆ.

ಕುಸಿಯಲಿದೆ ಜಿಡಿಪಿ ದರ: ಐಎಂಎಫ್
ಕೊರೊನಾ ಹಿನ್ನೆಲೆಯಲ್ಲಿ ಭಾರತದ ಆರ್ಥಿಕ ಪ್ರಗತಿ ಕುಂಠಿತವಾಗಿದ್ದು, 2020ರಲ್ಲಿ ದೇಶದ ಜಿಡಿಪಿ ಶೇ.1.9ಕ್ಕೆ ಕುಸಿಯಲಿದೆ ಎಂದು ಐಎಂಎಫ್ ಅಂದಾಜಿಸಿದೆ. ಇದು 1991ರ ಆರ್ಥಿಕ ಉದಾರೀಕರಣದ ನಂತರ ಭಾರತ ಕಂಡ ಅತಿ ಕನಿಷ್ಠ ಜಿಡಿಪಿ ದರ ಎಂದು ಅಭಿಪ್ರಾಯಪಟ್ಟಿದೆ.

ಆದರೆ, ಇತ್ತೀಚೆಗೆ ಬಿಡುಗಡೆಗೊಳಿಸಿದ ವಿಶ್ವ ಆರ್ಥಿಕತೆ ಕುರಿತಾಗಿನ ವರದಿಯಲ್ಲಿ ಐಎಂಎಫ್, ಭಾರತದ ಆರ್ಥಿಕತೆ ವಿಶ್ವದಲ್ಲೇ ಅತಿ ಶೀಘ್ರಗತಿಯಲ್ಲಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ ಎಂದಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಐಎಂಎಫ್ನ ಮುಖ್ಯ ಹಣಕಾಸು ಆಡಳಿತಗಾರ್ತಿ ಗೀತಾ ಗೋಪಿನಾಥ, 2020ರಲ್ಲಿ ಧನಾತ್ಮಕ ಆರ್ಥಿಕ ಬೆಳವಣಿಗೆ ದಾಖಲಿಸುವ ವಿಶ್ವದ ಎರಡು ಪ್ರಮುಖ ರಾಷ್ಟ್ರಗಳಲ್ಲಿ ಭಾರತ ಒಂದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next