ಮಾರುಕಟ್ಟೆಯಲ್ಲಿ ಎಣ್ಣೆ ಉತ್ಪನ್ನಗಳಾದ ಸೂರ್ಯಕಾಂತಿ, ಎಳ್ಳು ಮಾರುಕಟ್ಟೆಗೆ ಬಾರದಿರುವುದರಿಂದ ಎಪಿಎಂಸಿಯಲ್ಲಿ
ಯಾವುದೇ ಪರಿಣಾಮ ಈಗ ಕಂಡು ಬರುತ್ತಿಲ್ಲ. ಪ್ರಮುಖವಾಗಿ ಜಿಎಸ್‌ಟಿ ಸ್ವರೂಪ ಹಾಗೂ ಕಾರ್ಯರೂಪ ಕುರಿತಾಗಿ ಎಪಿಎಂಸಿಗೆ ಯಾವುದೇ ನಿಯಮಾವಳಿ ಬಂದಿಲ್ಲ. ಬರೀ ವಾಣಿಜ್ಯ ಜಂಟಿ ಆಯುಕ್ತರು ವ್ಯಾಪಾರಿಗಳನ್ನು ಕರೆಯಿಸಿ ಜಾಗೃತಿ ಮೂಡಿಸಿದ್ದಾರೆ. ಆದರೆ ವ್ಯಾಪಾರಿಗಳು ಇನ್ನೂ ಗೊಂದಲದಲ್ಲಿಯೇ ಇದ್ದಾರೆ.
Advertisement
ಇಲ್ಲಿನ ಪ್ರಮುಖ ವಾಣಿಜ್ಯ ಬೆಳೆ ತೊಗರಿ. ತೊಗರಿ ಜಿಎಸ್‌ಟಿ ಅಡಿ ಇಲ್ಲ. ಆದರೆ ತೊಗರಿ ಬೇಳೆ ಪ್ಯಾಕಿಂಗ್ ಗೆ ಜಿಎಸ್‌ಟಿ ಅಳವಡಿಸಲಾಗಿದೆ. ಆದರೆ ಯಾವ ತರಹದ ಪ್ಯಾಕಿಂಗ್ ಎಂಬುದು ಸ್ಪಷ್ಟಪಡಿಸಿಲ್ಲ. ರೈತರು ಚೀಲದಲ್ಲಿಯೇ ತೊಗರಿ ತುಂಬಿಕೊಂಡು ಮಾರಾಟ ಹಾಗೂ ಸರಬರಾಜು ಮಾಡುತ್ತಾರೆ. ಇದಕ್ಕೆ ಜಿಎಸ್‌ಟಿ ಅನ್ವಯಿಸುತ್ತದೆಯೋ ಇಲ್ಲವೋ, ಒಂದೆರಡು ಕೆಜಿಯುಳ್ಳ ಪ್ಯಾಕೆಟ್ ಮಾಡಿ ಮಾರಾಟ ಮಾಡಲಾಗುತ್ತದೆಯೋ, ಅಂತಹ ಪ್ಯಾಕೆಟ್‌ಗಳ ಮೇಲೆ ಜಿಎಸ್‌ಟಿ ಅನ್ವಯವಾಗುತ್ತದೆಯೇ ಎಂಬುದು ಇನ್ನೂ ಸ್ಪಷ್ಟತೆಯಿಲ್ಲ ಎನ್ನುತ್ತಾರೆ ಇಲ್ಲಿನ ದ್ವಿದಳ ಧಾನ್ಯ ವ್ಯಾಪಾರಿಗಳು.
ಎಪಿಎಂಸಿ ಜಿಎಸ್‌ಟಿ ಅಳವಡಿಕೆ ಕುರಿತಾಗಿ ಯಾವುದೇ ಸುತ್ತೋಲೆ ಬಂದಿಲ್ಲ. ಆದರೆ ಎಪಿಎಂಸಿಗೆ ವಹಿವಾಟು ಸಂಬಂಧಪಟ್ಟಂತೆ ಜಿಎಸ್‌ಟಿ ಕಾರ್ಯಸ್ವರೂಪ ಕುರಿತಾಗಿ ಸುತ್ತೋಲೆ ಕಳುಹಿಸುವಂತೆ ಎಪಿಎಂಸಿ ಮೇಲಧಿಕಾರಿಗಳಿಗೆ
ಹಾಗೂ ವಾಣಿಜ್ಯ ಜಂಟಿ ಆಯುಕ್ತರಿಗೆ ಪತ್ರ ಬರೆಯಲಾಗಿದೆ.
ಟಿ.ಸಿ.ಗಿರೀಶ, ಕಾರ್ಯದರ್ಶಿಗಳು, ಎಪಿಎಂಸಿ, ಕಲಬುರಗಿ
Related Articles
Advertisement