Advertisement

ಜಿಎಸ್‌ಟಿ ದೇಶದ ಪ್ರಗತಿಗೆ ಪೂರಕ

11:32 AM Jul 05, 2017 | Team Udayavani |

ರಾಯಚೂರು: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನೂತನ ತೆರಿಗೆ ನೀತಿ ಜಿಎಸ್‌ಟಿ ದೇಶದ ಅಭಿವೃದ್ಧಿಗೆ
ತುಂಬಾ ಅನುಕೂಲಕರವಾಗಿದೆ. ಇದರಿಂದ ಗ್ರಾಹಕರಾಗಲಿ, ವ್ಯಾಪಾರಿಗಳಾಗಲಿ ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ವಾಣಿಜ್ಯ ತೆರಿಗೆ ಇಲಾಖೆ ಕಲಬುರಗಿ ವಿಭಾಗೀಯ ಜಂಟಿ ಆಯುಕ್ತ ಪದ್ಮಾಕರ ಕುಲಕರ್ಣಿ ಹೇಳಿದರು.

Advertisement

ವಾಣಿಜ್ಯ ತೆರಿಗೆಗಳ ಇಲಾಖೆ, ವಾಣಿಜ್ಯೋದ್ಯಮಗಳ ಸಂಘ ಹಾಗೂ ಟ್ಯಾಕ್ಸ್‌ ಬಾರ್‌ ಅಸೋಸಿಯೇಶನ್‌ ಸಹಯೋಗದಲ್ಲಿ ಮಂಗಳವಾರ ಸಮೀಪದ ಕೃಷಿ ವಿವಿಯ ಪ್ರೇಕ್ಷಾಗೃಹದಲ್ಲಿ ಹಮ್ಮಿಕೊಂಡಿದ್ದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪ್ರಾತ್ಯಕ್ಷಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಹೊಸ ತೆರಿಗೆ ನೀತಿಯಾದ ಜಿಎಸ್‌ಟಿಯಿಂದ ದೇಶ ಅಭಿವೃದ್ಧಿಯತ್ತ ಸಾಗಲಿದೆ. 20 ಲಕ್ಷಕ್ಕೂ ಹೆಚ್ಚು ವ್ಯವಹಾರ ನಡೆಸುವವರು ಶೇ.5ರಷ್ಟು ತೆರಿಗೆ ಕಟ್ಟಬೇಕಾಗುತ್ತದೆ. ಈ ಮೊದಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಪ್ರತ್ಯೇಕ ತೆರಿಗೆ ಪಾವತಿ ಮಾಡಬೇಕಿತ್ತು. ಆದರೆ, ಈಗ ಇದು ಏಕರೂಪದ್ದಾಗಿದ್ದು, ಒಮ್ಮೆ ಪಾವತಿಸಿದರೆ ಸಾಕು.
ಅಂತಾರಾಜ್ಯದಲ್ಲಿ ವಸ್ತುಗಳನ್ನು ಖರೀದಿಸಿದರೆ ಮಾತ್ರ ಇನ್‌ಫುಟ್‌ ಟ್ಯಾಕ್ಸ್‌ ಭರಿಸಬೇಕಾಗುತ್ತದೆ ಎಂದು ವಿವರಿಸಿದರು.

ಇಂದು ಸಾಕಷ್ಟು ವರ್ತಕರು ಗೊಂದಲಕ್ಕೆ ಸಿಲುಕಿದ್ದಾರೆ. ಜಿಎಸ್‌ಟಿಯಿಂದ ನಷ್ಟಕ್ಕೆ ತುತ್ತಾಗಲಿದ್ದೇವೆ ಎಂಬ ಆತಂಕ ಮನೆ ಮಾಡಿದೆ. ಆದರೆ, ಅಂಥ ಯಾವುದೇ ಗೊಂದಲಗಳು ಬೇಡ. ಜನರು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಹೆಚ್ಚುವರಿಯಾಗಿ ಪಾವತಿಸುತ್ತಿದ್ದ ತೆರಿಗೆಗೆ ಕಡಿವಾಣ ಹಾಕಲು ಕೇಂದ್ರ ಇಂಥ ನೀತಿ ಜಾರಿಗೊಳಿಸಿದೆ ಎಂದು ಹೇಳಿದರು.

ಮೊದಲು ನಾನಾ ಹಂತದಲ್ಲಿ ತೆರಿಗೆ ನೀಡಬೇಕಿತ್ತು. ಅಲ್ಲದೇ, ಒಂದೇ ವಸ್ತುವಿಗೆ ಒಂದೊಂದು ಕಡೆ ಒಂದೊಂದು ದರವಿತ್ತು. ಉತ್ಪಾದಕರು, ಖರೀದಿದಾರರು ಹಾಗೂ ಪೂರೈಕೆದಾರರಿಗೆ ವಿವಿಧ ತೆರಿಗೆಗಳನ್ನು ವಿ ಧಿಸಲಾಗುತ್ತಿತ್ತು. ಆದರೆ, ಜಿಎಸ್‌ಟಿಯಿಂದ ದೇಶದ ಯಾವುದೇ ಭಾಗದಲ್ಲಿ ವಸ್ತು ಖರೀದಿಸಿದರೂ ಒಂದೇ ದರ ಇರುತ್ತದೆ. ಜನರಲ್ಲಿದ್ದ ದರ ಗೊಂದಲ ಜಿಎಸ್‌ಟಿ ಜಾರಿಯಿಂದ ಪರಿಹಾರವಾಗಲಿದೆ. ವಸ್ತುಗಳ ಮೌಲ್ಯಗಳ ಆಧಾರದ ಮೇಲೆ ನಾಲ್ಕು ವಿಭಾಗಗಳಲ್ಲಿ ತೆರಿಗೆ ನಿಗದಿ ಮಾಡಲಾಗಿದೆ. ನೀವು ಯಾವ ವಿಭಾಗಕ್ಕೆ ಒಳಪಡುತ್ತೀರಿ ಎಂಬುದನ್ನು ಅರಿತು ತೆರಿಗೆ ಪಾವತಿಗೆ
ಮುಂದಾಗಬೇಕು ಎಂದು ಹೇಳಿದರು.

ವಾಣಿಜ್ಯೋದ್ಯಮಿಗಳ ಸಂಘದ ಅಧ್ಯಕ್ಷ ತ್ರಿವಿಕ್ರಮ ಜೋಶಿ ಪ್ರಾಸ್ತಾವಿಕ ಮಾತನಾಡಿ, ಕೇಂದ್ರ ಸರ್ಕಾರ ಈ ಹೊಸ ಮಸೂದೆ ಜಾರಿ ಮುನ್ನ ಸಾಕಷ್ಟು ಪೂರ್ವ ತಯಾರಿ ಮಾಡಿಕೊಂಡಿದೆ. ವಾಣಿಜ್ಯ ತೆರಿಗೆ ಇಲಾಖೆ ಅ ಧಿಕಾರಿಗಳಿಂದ ಯಾವುದೇ ಮಾಹಿತಿ ಬೇಕಾದರೂ ಕೇಳಿ ತಿಳಿದುಕೊಳ್ಳಬಹುದಾಗಿದೆ ಎಂದರು. ಟ್ಯಾಕ್ಸ್‌ ಬಾರ್‌ ಅಸೋಸಿಯೇಶನ್‌ ಅಧ್ಯಕ್ಷ ಮಹಾವೀರ ಸಿಂಘಿ, ರಾಮಚಂದ್ರ ಪ್ರಭು, ಕಮಲಕುಮಾರ ಜೈನ, ಜಂಬಣ್ಣ ಯಕ್ಲಾಸಪುರ, ಅಮರೇಶ್ವರ, ಮಹ್ಮದ್‌ ಇರ್ಫಾನ್‌ , ಉದ್ಯಮಿಗಳು, ವರ್ತಕರು ಭಾಗವಹಿಸಿದ್ದರು. 

Advertisement

ಆರಂಭದಲ್ಲಿ ಎಲ್ಲರಲ್ಲೂ ಈ ಬಗ್ಗೆ ಗೊಂದಲಗಳು ಸೃಷ್ಟಿಯಾಗಿವೆ. ಕೆಲ ದಿನಗಳಲ್ಲೇ ನಿಮ್ಮೆಲ್ಲ ಸಮಸ್ಯೆಗಳು ಪರಿಹಾರವಾಗಲಿದೆ. ಆದರೆ, ಈ ಮುಂಚೆ ತೆರಿಗೆ ವಂಚನೆ ಮಾಡುತ್ತಿದ್ದವರೂ ಈಗ ತಪ್ಪಿಸಿಕೊಳ್ಳುವಂತಿಲ್ಲ. ಮೊದಲನೇ ಹಂತದಲ್ಲಿ ಜಿಎಸ್‌ಟಿ ನೋಂದಣಿಗೆ ಮಹತ್ವ ನೀಡಲಾಗುತ್ತಿದೆ. ತೆರಿಗೆ ಅನುಷ್ಠಾನಕ್ಕೆ ಬೇಕಾಗಿರುವ ಪೂರ್ವ ಸಿದ್ಧತೆಗಳನ್ನು ಇಲಾಖೆ ಮಾಡಿಕೊಂಡಿದೆ.

ಪದ್ಮಾಕರ ಕುಲಕರ್ಣಿ, ವಿಭಾಗೀಯ ಜಂಟಿ ಆಯುಕ್ತರು, ವಾಣಿಜ್ಯ ತೆರಿಗೆ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next