Advertisement

GST impact: ಅಪಾರ್ಟ್‌ಮೆಂಟ್‌ ದರ ಶೇ.20ರಷ್ಟು ಕಡಿಮೆಯಾಗಲಿದೆ

11:11 AM Jul 05, 2017 | |

ಮುಂಬಯಿ : ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಅನುಷ್ಠಾನಗೊಂಡಿರುವುದರಿಂದ  ರಿಯಲ್‌ ಎಸ್ಟೇಟ್‌ ಉದ್ಯಮದಲ್ಲಿ ಕಪ್ಪು ಹಣದ ಬಳಕೆ ಗಮನಾರ್ಹ ಪ್ರಮಾಣದಲ್ಲಿ ಕಡಿಮೆಯಾಗಲಿದ್ದು  ಡೆವಲಪರ್‌ಗಳಿಗೆ ಸಿಗುವ ತೆರಿಗೆ ಲಾಭದಿಂದಾಗಿ ಈಗಿನ್ನು ದೇಶದಲ್ಲಿ  ಅಪಾರ್ಟ್‌ಮೆಂಟ್‌ ಬೆಲೆ ಶೇ.20ರಷ್ಟು ಇಳಿಯುವ ಸಾಧ್ಯತೆ ಇದೆ ಎಂದು ‘ಲಯಸಸ್‌ ಫೋರಾಸ್‌’ ಸಿದ್ಧಪಡಿಸಿರುವ ‘ಗೂಡ್ಸ್‌ ಆ್ಯಂಡ್‌ ಸರ್ವಿಸಸ್‌ ಟ್ಯಾಕ್ಸ್‌ – ಹಿಸ್ಟರಿ ಇನ್‌ ದಿ ಮೇಕಿಂಗ್‌’ ಎಂಬ ಶೀರ್ಷಿಕೆಯ ವರದಿಯು ತಿಳಿಸಿದೆ. 

Advertisement

ಜಿಎಸ್‌ಟಿಯಿಂದಾಗಿ ರಿಯಲ್‌ ಎಸ್ಟೇಟ್‌ ಡೆವಲಪರ್‌ಗಳು ತಮ್ಮ ತೆರಿಗೆ ಪಾವತಿಯ ಮೇಲಿನ ‘ಪೂರ್ತಿ ಕ್ರೆಡಿಟ್‌’ ಪಡೆದುಕೊಳ್ಳುವುದಕ್ಕೆ ಅವಕಾಶವಿರುವುದರಿಂದ ವಸತಿ ಘಟಕಗಳ ನಿರ್ಮಾಣ ವೆಚ್ಚವು ಕನಿಷ್ಠ ಶೇ.20ರಷ್ಟು ಕಡಿಮೆಯಾಗುತ್ತದೆ. ಇದರ ಪರಿಣಾಮವಾಗಿ ಅಪಾರ್ಟ್‌ಮೆಂಟ್‌ ಬೆಲೆಗಳಲ್ಲಿ ಕೂಡ ಶೇ.20ರಷ್ಟು ಕಡಿತ ಉಂಟಾಗುತ್ತದೆ ಎಂದು ವರದಿ ಹೇಳಿದೆ. 

ಜಿಎಸ್‌ಟಿ ಕ್ರಮದಿಂದಾಗಿ ಖರೀದಿದಾರನಿಗೆ ಮಾರುವ ಉದ್ದೇಶದಿಂದ ನಿರ್ಮಾಣವಾಗುವ ವಸತಿ ಕಟ್ಟಡ ಅಥವಾ ಅದರ ಭಾಗದ ವೆಚ್ಚಕ್ಕೆ ಶೇ.12ರ ತೆರಿಗೆ ಲಗಾವಾಗುತ್ತದೆ. ಇದು ಮುದ್ರಾಂಕ ವಚ್ಚವನ್ನು ಹೊರತುಪಡಿಸುವ ಪೂರ್ತಿ ‘ಇನ್‌ಪುಟ್‌ ಟ್ಯಾಕ್ಸ್‌  ಕ್ರೆಡಿಟ್‌’ ಅನ್ನು ಒಳಪಡುತ್ತದೆ. ಜಿಎಸ್‌ಟಿ ಅಡಿ ಡೆವಲಪರ್‌ಗಳಿಗೆ ಇನ್‌ಪುಟ್‌ ಕ್ರೆಡಿಟ್‌ ಟ್ಯಾಕ್ಸ್‌ ಲಾಭವನ್ನು ಪಡೆಯಲು ಅವಕಾಶವಿದೆ. ಇದರ ಪರಿಣಾಮವಾಗಿ ವಸತಿ ಕಟ್ಟಡಗಳ ನಿರ್ಮಾಣ ವೆಚ್ಚವು ಶೇ.20ರಷ್ಟು ಕಡಿಮೆಯಾಗುತ್ತದೆ ಎಂದು ವರದಿ ತಿಳಿಸಿದೆ. 

ವಸತಿ ಕಟ್ಟಡ ನಿರ್ಮಾಣಕ್ಕೆ ಬಳಸಲ್ಪಡುವ ವಸ್ತುಗಳು ಮತು ಸಲಕರಣೆಗಳ ಮೇಲೆ ಡೆವಲಪರ್‌ಗಳು ಪಾವತಿಸುವ ತೆರಿಗೆಯ ಮೇಲೆ ಅವರಿಗೆ ಐಟಿಸಿ (ಇನ್‌ಪುಟ್‌ ಟ್ಯಾಕ್ಸ್‌  ಕ್ರೆಡಿಟ್‌)ಸವಲತ್ತು ಸಿಗುತ್ತದೆ. ಡೆವಲಪರ್‌ ಸಮುದಾಯದವರು ನೀಡಿರುವ ಅಂದಾಜಿನ ಪ್ರಕಾರ ಈ ತೆರಿಗೆಯು ವಸತಿ ಕಟ್ಟಡ ನಿರ್ಮಾಣ ವೆಚ್ಚದ ಶೇ.20ರಿಂದ ಶೇ.25ರಷ್ಟು ಆಗುತ್ತದೆ.

ಐಟಿಸಿ (ಇನ್‌ಪುಟ್‌ ಟ್ಯಾಕ್ಸ್‌  ಕ್ರೆಡಿಟ್‌) ಯಿಂದಾಗಿ ಡೆವಲಪರ್‌ಗಳಿಗೆ ಈ ಪ್ರಮಾಣದ ಲಾಭವಾಗುವುದರಿಂದ ನಿರ್ಮಾಣ  ವೆಚ್ಚವು ಕಡಿಮೆಯಾಗಿ ಗ್ರಾಹಕರಿಗೆ ಶೇ.20ರಷ್ಟು ಕಡಿಮೆ ವೆಚ್ಚದಲ್ಲಿ ಅಪಾರ್ಟ್‌ಮೆಂಟ್‌ಗಳು ಸಿಗುವಂತಾಗುತ್ತದೆ ಎಂದು ವರದಿ ತಿಳಿಸಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next