Advertisement

ಜಿಎಸ್‌ಟಿ ಐತಿಹಾಸಿಕ ನಿರ್ಧಾರ

11:18 AM Jul 07, 2017 | Team Udayavani |

ಮಸ್ಕಿ: ದೇಶಾದ್ಯಂತ ಏಕರೂಪ ತೆರಿಗೆ ವ್ಯವಸ್ಥೆಯಾದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೊಳಿಸಿರುವುದು
ಐತಿಹಾಸಿಕ ನಿರ್ಧಾರವಾಗಿದೆ. ಇದು ಪರೋಕ್ಷ ತೆರಿಗೆಯಾಗಿದೆ. ಸದ್ಯಕ್ಕೆ ಇದು ಗೊಂದಲಮಯ ಎನಿಸಿದರೂ ಮುಂದಿನ ದಿನಗಳಲ್ಲಿ ಇದರ ಸರಳತೆ ಅರಿವಾಗಲಿದೆ ಎಂದು ಶಿವಮೊಗ್ಗದ ಚಾರ್ಟರ್ಡ್‌ ಅಕೌಂಟೆಂಟ್‌ ರವೀಂದ್ರನಾಥ ಹೇಳಿದರು.

Advertisement

ಭ್ರಮರಾಂಬ ಚಾರಿಟೇಬಲ್‌ ಟ್ರಸ್ಟ್‌ ವತಿಯಿಂದ ಪಟ್ಟಣದ ಭ್ರಮರಾಂಬ ಮಲ್ಲಿಕಾರ್ಜುನ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಸರಕು ಮತ್ತು ಸೇವಾ ತೆರಿಗೆ ಹಾಗೂ ನಗದು ರಹಿತ ವ್ಯವಹಾರ ಕುರಿತು ಅರಿವು ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಈ ಹಿಂದೆ ದೇಶದಲ್ಲಿ ಅನೇಕ ಪರೋಕ್ಷ ತೆರಿಗೆಗಳು, ಪ್ರತಿ ರಾಜ್ಯದಲ್ಲೂ ಅನೇಕ ರೀತಿಯ ಪರೋಕ್ಷ ತೆರಿಗೆಗಳು ಇದ್ದವು. ಪ್ರತಿ ತೆರಿಗೆ
ಕಾಯ್ದೆಯಲ್ಲಿ ಜಟಿಲತೆ, ಗೊಂದಲಗಳು, ಬಹು ಹಂತದ ತೆರಿಗೆಯಿಂದಾಗಿ ತೆರಿಗೆಗಳ ಮೇಲೆ ತೆರಿಗೆ ಕೊಡುವ ಪದ್ಧತಿ ಇತ್ತು. ಇವೆಲ್ಲವನ್ನು ನಿವಾರಿಸಿ ದೇಶಾದ್ಯಂತ ಒಂದೇ ಏಕರೂಪ ತೆರಿಗೆ ವಿಧಿಸಲು ಜಿಎಸ್‌ಟಿ ಜಾರಿಗೆ ತರಲಾಗಿದೆ. ಈಗಿನ ಹಂತದಲ್ಲಿ
ಅನೇಕ ಗೊಂದಲಗಳಿದ್ದರೂ ಮುಂದಿನ ದಿನಗಳಲ್ಲಿ ಇದರ ಸರಳತೆ ಎಲ್ಲರಿಗೂ ಮನವರಿಕೆಯಾಗಲಿದೆ. ದೇಶದಲ್ಲಿ ಆರ್ಥಿಕ, ಸಾಮಾಜಿಕ, ಬದಲಾವಣೆಯ ವೇಗ ಪಡೆದುಕೊಂಡಿದೆ. ಈ ಬದಲಾವಣೆಗೆ, ವೇಗದೊಂದಿಗೆ ಸಾಗುವುದು ಅನಿವಾರ್ಯವಾಗಿದೆ.
ಇಲ್ಲದಿದ್ದರೆ ಹಿಂದೆ ಬೀಳುವ ಅಪಾಯವಿದೆ. ಹಣ ಚಲಾವಣೆ ದೃಷ್ಟಿಯಿಂದ ಬಂಗಾರ ಹಾಗೂ ಹಣವನ್ನು ಸಂಗ್ರಹಿಸಿ ಇಡುವ ಪರಂಪರೆ
ಕೆಲವರಲ್ಲಿದೆ. ಅದಕ್ಕೆ ಇನ್ನು ಮುಂದೆ ತೆರಿಗೆ ಬೀಳಲಿದೆ ಎಂದರು.

ಜಿಎಸ್‌ಟಿ ಕಾಯ್ದೆಯನ್ನು ಒಮ್ಮೆಲೇ ಜಾರಿಗೆ ತರಲಾಗಿಲ್ಲ. 2000ನೇ ಸಾಲಿನಲ್ಲಿ ಇದಕ್ಕೆ ಚಾಲನೆ ಸಿಕು. ಆರ್ಥಿಕ ತಜ್ಞರು ಹಾಗೂ ಜನಪ್ರತಿನಿಧಿ ಗಳು ವಿವಿಧ ಹಂತಗಳ ಚರ್ಚೆ ನಡೆಸಿ ಒಮ್ಮತದಿಂದ ಇದನ್ನು ಜಾರಿಗೆ ತರಲಾಗಿದೆ. ಸರಕು ಮತ್ತು ಸೇವಾ ತೆರಿಗೆ 14 ಪರೋಕ್ಷ ತೆರಿಗೆ ಕಾನೂನುಗಳನ್ನು ಒಂದುಗೂಡಿಸಿದೆ ಎಂದು ಹೇಳಿದರು. ಭ್ರಮರಾಂಬ ಆಡಳಿತ ಮಂಡಳಿ ಅಧ್ಯಕ್ಷ ಡಾ| ಶಿವಶರಣಪ್ಪ ಇತ್ಲಿ ಜಿಎಸ್‌ಟಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿ, ಚಾರಿಟೇಬಲ್‌ ಟ್ರಸ್ಟ್‌ ಇಲ್ಲಿನ ಅನೇಕ ಸಾಮಾಜಿಕ, ಶೈಕ್ಷಣಿಕ, ಕ್ರೀಡಾ
ಚಟುವಟಿಕೆಗಳಲ್ಲಿ ಸಕ್ರೀಯವಾಗಿ ತೊಡಗಿದೆ. ಈ ನಿಟ್ಟಿನಲ್ಲಿ ಇಲ್ಲಿನ ವರ್ತಕರಿಗೆ ನೂತನ ಸರಕು ಮತ್ತು ಸೇವಾ ತೆರಿಗೆ ಬಗ್ಗೆ ಸಮಗ್ರ ಮಾಹಿತಿ ತಿಳಿಯಲಿ ಉದ್ದೇಶದಿಂದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಭ್ರಮರಾಂಬ ಚಾರಿಟೇಬಲ್‌ ಟ್ರಸ್ಟ್‌ ಉಪಾಧ್ಯಕ್ಷ ಪಂಪಣ್ಣ ಗುಂಡಳ್ಳಿ, ಪ್ರಕಾಶ ದಾರಿವಾಲ, ಜಿ.ಡಿ. ಗುಂಡಪ್ಪ, ಸುರೇಶ ಬೆಂಗಳೂರು, ಇತರರು ಉಪಸ್ಥಿತರಿದ್ದರು. ಭ್ರಮಾರಂಬ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತ ಮಸ್ಕಿ ಮುಖ್ಯ ಶಾಖೆ ವ್ಯವಸ್ಥಾಪಕ ವೀರೇಶ ಹೀರೆಮಠ ನಿರೂಪಿಸಿದರು. ನೂರಾರು ವರ್ತಕರು, ಸಾರ್ವಜನಿಕರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next