ಚಾಮರಾಜನಗರ: ಕೇಂದ್ರದ ಬಿಜೆಪಿ ಸರ್ಕಾರ ಎಲ್ಲ ವಸ್ತುಗಳಿಗೂ ಜಿಎಸ್‌ಟಿ ವಿಧಿಸುವ ಮೂಲಕಜನ ಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದೆ. ಇದುರೈತರು ಮತ್ತು ಬಡವರ ರಕ್ತ ಹೀರುವ ಕೆಟ್ಟ ಸರ್ಕಾರ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆರೆಹಳ್ಳಿ ನವೀನ್ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಶವಕ್ಕೆ ಇನ್ನೂ ಜಿಎಸ್‌ಟಿ ಹಾಕಿಲ್ಲ. ಅದನ್ನು ಹೊರತುಪಡಿಸಿದರೆ ಇನ್ನು ಎಲ್ಲದಕ್ಕೂ ಜಿಎಸ್‌ಟಿ ವಿಧಿಸಿದೆ. ಅವಶ್ಯಕ ಸೇವೆಗಳು, ಬಡವರು ಬಳಸುವ ವಸ್ತುಗಳು ಎಂದು ಜಿಎಸ್‌ಟಿ ವಿಧಿಸದೇಬಿಡಲಾಗಿದ್ದಕ್ಕೆಲ್ಲ ಈ ಸರ್ಕಾರ ಜಿಎಸ್‌ಟಿ ವಿಧಿಸುತ್ತದೆ.ಈ ಮೂಲಕ ದುರಾಡಳಿತ ನಡೆಸುತ್ತಿದ್ದು, ತುಘಲಕ್ ದರ್ಬಾರ್ ನಡೆಸುತ್ತಿದೆ ಎಂದು ಟೀಕಿಸಿದರು.
ಕಳೆದ ಎಂಟು ವರ್ಷಗಳ ಬಿಜೆಪಿ ಆಡಳಿತದಿಂದ ಜನರು ಬೇಸತ್ತು ಹೋಗಿದ್ದಾರೆ. ಪ್ರಧಾನಿ ನರೇಂದ್ರಮೋದಿ ಅವರು ಆಚ್ಚೆ ದಿನ್ ಬರುತ್ತದೆ ಎಂದು ಜನರು ವಂಚಿಸುತ್ತಾ. ಕೆಲವೇ ಕೆಲವು ಮಂದಿ ಬಂಡವಾಳ ಶಾಹಿಗಳಿಗೆ ಅಚ್ಛೇ ದಿನ್ ನೀಡಿದ್ದಾರೆ. ದೇಶ ಜನರು ಜಿಎಸ್‌ಟಿ ತೆರಿಗೆ ಭಾರವನ್ನು ಹೊರಲು ಸಾಧ್ಯವಾಗದೆ ಕಂಗಾಲಾಗಿದ್ದಾರೆ. ಜಿಎಸ್‌ಟಿ ಜಾರಿ ಮಾಡಿ, ಸರ್ಕಾರ ಬೊಕ್ಕಸಕ್ಕೆಸೋರಿಕೆಯಾಗುವ ಹಣವನ್ನು ತಡೆದು, ಜನರು ನೀಡುವ ತೆರಿಗೆಯಿಂದ ದೇಶದ ಅಭಿವೃದ್ದಿಪಡಿಸುತ್ತೇವೆ ಎಂದು ಸುಳ್ಳು ಹೇಳುತ್ತಿರುವ ಮೋದಿ ಹಾಗು ಸಹೋದ್ಯೋಗಿಗಳು ಜಿಎಸ್‌ಟಿಮೂಲಕ ಜನರು ಪಾವತಿಸುತ್ತಿರುವ ತೆರಿಗೆಹಣವನ್ನು ವಿವಿಧ ರಾಜ್ಯಗಳಲ್ಲಿ ಆಪರೇಷನ್ ಕಮಲ ಮಾಡಲು ಬಳಕೆ ಮಾಡುತ್ತಿದೆ. ಜನರು ತೆರಿಗೆ ಕಟ್ಟಿ ಮತ್ತಷ್ಟು ಬಡವರಾಗುತ್ತಿದೆ. ಜಿಎಸ್‌ಟಿಜಾರಿ ಪರಿಣಾಮ ಲಕ್ಷಾಂತರ ಸಣ್ಣ ಸಣ್ಣ ಕಂಪನಿಗಳು ಮುಚ್ಚಿವೆ. ಕೋಟ್ಯಂತರ ಮಂದಿ ನಿರುದ್ಯೋಗಿ ಗಳಾಗಿದ್ದಾರೆ ಎಂದು ಆರೋಪಿಸಿದರು.
ಮೊಸರು, ಪನೀರ್, ಲಸ್ಸಿ ಸೇರಿದಂತೆ ವಿವಿಧ ರೈತರ ಉತ್ಪನ್ನಗಳಿಗೆ ಶೇ. 5 ರಷ್ಟು ಜಿಎಸ್‌ಟಿಹಾಕಿರುವುದು ಬಿಜೆಪಿ ಸರ್ಕಾರದ ಅವೈಜ್ಞಾನಿಕತೆರಿಗೆ ನೀತಿಯಾಗಿದೆ. ಅಲ್ಲದೇ ಜನರನ್ನು ಜಿಎಸ್‌ಟಿತೆರಿಗೆಯ ಮೂಲಕ ಶೋಷಣೆ ಮಾಡಲಾಗುತ್ತಿದೆ.ಪ್ರತಿ ಹಂತದಲ್ಲಿಯೂ ಸಹ ತೆರಿಗೆಯನ್ನು ಕಟ್ಟುವಜನಸಾಮಾನ್ಯರು ಜೀವನ ನಡೆಸುವುದುಕಷ್ಟಸಾಧ್ಯವಾಗಿದೆ. ಇದು ಪ್ರಧಾನಿ ಮೋದಿಗೆಅರ್ಥವಾಗುತ್ತಿಲ್ಲ. ಕೇವಲ ಜನರನ್ನು ಭಾವನಾತ್ಮಕವಾಗಿ ಕೆರಳಿಸಿ, ದೇಶದ ಭದ್ರತೆ ಬಿಜೆಪಿಯಿಂದ ಮಾತ್ರಎಂಬ ಸುಳ್ಳು ಆಶ್ವಾಸನೆಯನ್ನು ನೀಡುತ್ತಾ ಜನರನ್ನುಮರಳುಮಾಡುತ್ತಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಸಮಿತಿ ರಾಜ್ಯ ಎಸ್‌ಟಿ ಘಟಕದ ಪ್ರಧಾನ ಕಾರ್ಯದರ್ಶಿ ಪು. ಶ್ರೀನಿವಾಸನಾಯಕ ಮಾತನಾಡಿ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಬಳಿಕ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ. ತೆರಿಗೆಗಳು ಹೆಚ್ಚಾಗಿ ಜನರ ಜೀವನ ದುಸ್ತರವಾಗಿದೆ. ಆದರೆ ಚುನಾವಣೆ ಸಂದರ್ಭದಲ್ಲಿ ಯಾವುದಾದರೂ ಯುದ್ಧವನ್ನು ಸೃಷ್ಟಿ ಮಾಡಿ, ಜನರನ್ನುಭಾವನಾತ್ಮಕವಾಗಿ ಕೆರಳಿಸಿ ಮತ ಪಡೆಯಲಾಗುತ್ತಿದೆಎಂದು ಆರೋಪಿಸಿದರು.
ಜಿಪಂ ಮಾಜಿ ಸದಸ್ಯಶಿವಕುಮಾರ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಅಜೀಜ್ ಇತರರು ಇದ್ದರು.