Advertisement
ಮಂಗಳೂರಿನ ಗುಜರಿ ವ್ಯಾಪಾರಿ ಮೆ| ತೌಹೀದ್ ಸ್ಕ್ರಾಪ್ ಡೀಲರ್‌ನ ಪಿ.ಕೆ. ಅಬ್ದುಲ್ ರಹೀಂ ಮತ್ತು ಮೆ| ಎಂ.ಕೆ. ಟ್ರೇಡರ್ನ ಮಾಲಕ ಅಬ್ದುಲ್ ಖಾದರ್ ಕೂಳೂರು ಚಾಯಬ್ಬ ಬಂಧಿತರು. ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇವರಿಬ್ಬರೂ 2018ನೇ ಇಸವಿಯಿಂದ ನಕಲಿ ಬಿಲ್ ತಯಾರಿಸಿ ಸರಕಾರಕ್ಕೆ ಜಿಎಸ್‌ಟಿ ಪಾವತಿಸದೆ ವಂಚನೆ ಎಸಗುತ್ತಿದ್ದರು ಎಂಬುದನ್ನು ಜಿಎಸ್‌ಟಿ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
Related Articles
ಮೆ| ತೌಹೀದ್ ಸ್ಕ್ರಾಪ್ ಡೀಲರ್ ಮತ್ತು ಮೆ| ಎಂ.ಕೆ. ಟ್ರೇಡರ್ ಸಂಸ್ಥೆಗಳು ಬೇರೆ ಬೇರೆ ಸಂಸ್ಥೆಗಳಿಂದ ಸರಕು ಸಾಗಾಟಕ್ಕೆ ಸಂಬಂಧಿಸಿ ನಕಲಿ ಬಿಲ್ (ಇನ್‌ವಾಯ್ಸ) ತಯಾರಿಸಿ ಅದರ ಆಧಾರದಲ್ಲಿ ನಕಲಿ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ಪಡೆದು ಸರಕಾರಕ್ಕೆ ವಂಚಿಸುತ್ತಿದ್ದವು. ಇಲ್ಲಿ ನಿಜವಾಗಿಯೂ ಸರಕು ಸಾಗಾಟ ಆಗುತ್ತಿರಲಿಲ್ಲ.
Advertisement
ಈ ಸಂಸ್ಥೆಗಳ ಮಾಲಕರು ನೋಂದಣಿ ರಹಿತ ವ್ಯಾಪಾರಿಗಳಿಂದ ಖರೀದಿಸಿದ ಲೋಹದ ಗುಜರಿ ಸಾಮಗ್ರಿಗಳನ್ನು ಅಲ್ಯೂಮಿನಿಯಂ ಎಂಎಸ್ ಕಾಪರ್ ರಾಡ್ಸ್ ಇಂಗೊಟ್ಸ್ ಕಾಸ್ಟಿಂಗ್ಸ್ ಮತ್ತಿತರ ಸಾಮಗ್ರಿಗಳ ತಯಾರಿಕ ಸಂಸ್ಥೆಗಳಿಗೆ ಪೂರೈಕೆ ಮಾಡುವ ಸಂದರ್ಭದಲ್ಲಿ ಜಿಎಸ್‌ಟಿ ಪಾವತಿಯಿಂದ ತಪ್ಪಿಸಿಕೊಳ್ಳಲು ಈ ನಕಲಿ ಐಟಿಸಿಗಳನ್ನು ಉಪಯೋಗಿಸುತ್ತಿದ್ದರು ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ.
ಅಲ್ಲದೆ ಅವರು ನಕಲಿ ಬಿಲ್ ಹೊಂದಿದವರಿಗೆ ನಕಲಿ ಐಟಿಸಿ ಕ್ರೆಡಿಟ್ ವರ್ಗಾವಣೆ ಮಾಡಲು ಕೂಡ ಈ ನಕಲಿ ಬಿಲ್‌ಗಳನ್ನು ಉಪಯೋಗಿಸುತಿದ್ದರು ಎಂದು ಗೊತ್ತಾಗಿದೆ. ಆರೋಪಿಗಳು ನಕಲಿ ಬಿಲ್ ತಯಾರಿಸುವ ವ್ಯಕ್ತಿಗೆ ಶೇ. 3ರಷ್ಟು ಕಮಿಷನ್ ಪಾವತಿ ಮಾಡುತ್ತಿದ್ದರು ಎಂಬ ಸಂಗತಿ ಬೆಳಕಿಗೆ ಬಂದಿದೆ. ಇಂತಹ ನಕಲಿ ಬಿಲ್ ತಯಾರಿಸಿ ಕೊಡುವ ಜಾಲವೇ ಇದೆ ಎನ್ನಲಾಗಿದೆ.