Advertisement
ಕೇಂದ್ರೀಯ ತೆರಿಗೆಗಳ ಇಲಾಖೆಯ ಬೆಂಗಳೂರು ದಕ್ಷಿಣ ಜಿಎಸ್‌ಟಿ ಆಯುಕ್ತಾಲಯದ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿ ಉದ್ಯಮಿಯನ್ನು ಬಂಧಿಸಿದರು. ಜಿಎಸ್‌ಟಿಯಡಿ ಗ್ರಾಹಕರಿಂದ ಸಂಗ್ರಹಿಸಿದ್ದ ತೆರಿಗೆಯನ್ನು ಪಾವತಿಸದ ಬೆಂಗಳೂರಿನ ಬೊಮ್ಮಸಂದ್ರದಲ್ಲಿನ ಆಟೋಮೊಬೈಲ್ ಕೈಗಾರಿಕೆಯೊಂದರ ವ್ಯವಸ್ಥಾಪಕ ನಿರ್ದೇಶಕರೇ ಬಂಧನ ಕ್ಕೊಳಗಾದ ವ್ಯಕ್ತಿ. ಬಳಿಕ ಮ್ಯಾಜಿಸ್ಟ್ರೇಟರ್ ಮುಂದೆ ಹಾಜರುಪಡಿಸಿದಾಗ ಎರಡು ವಾರದೊಳಗೆ 15 ಕೋಟಿ ರೂ. ಪಾವತಿಸುವಾಗಿ ಉದ್ಯಮಿ ಮುಚ್ಚಳಿಕೆ ನೀಡಿದ ಹಿನ್ನೆ ಲೆಯಲ್ಲಿ ಅವರು ಮಧ್ಯಂತರ ಜಾಮೀನು ಪಡೆದುಕೊಂಡಿದ್ದಾ ರೆ.
Related Articles
Advertisement
ದೊಡ್ಡ ತೆರಿಗೆದಾರರ ಮೇಲೆ ಕಣ್ಣುಜಿಎಸ್ಟಿ ಜಾರಿಯಾಗಿ ಒಂದು ವರ್ಷ ಕಳೆದಿದ್ದು, ಪ್ರತಿ ತೆರಿಗೆದಾರರು ನಿಯಮಾನುಸಾರ ಸೂಕ್ತ ತೆರಿಗೆ ಪಾವತಿಸುತ್ತಿದ್ದಾರೆ ಎಂಬ ಬಗ್ಗೆ ನಿರಂತರ ಮೇಲ್ವಿಚಾರಣೆ ನಡೆದಿದೆ. ಅದರಲ್ಲೂ ಒಂದು ಕೋಟಿ ರೂ., ಐದು ಕೋಟಿ ರೂ. ಮೊತ್ತದ ತೆರಿಗೆ ಪಾವತಿದಾರರ ಮೇಲೆ ವಿಶೇಷ ನಿಗಾ ಇರಿಸಲಾಗಿದೆ. ಅವರ ವಹಿವಾಟು, ವಿಧಿಸುತ್ತಿರುವ ಜಿಎಸ್‌ಟಿ, ಪಾವತಿಯ ಬಗ್ಗೆ ಸಲ್ಲಿಸುವ ವಿವರಗಳನ್ನು ಪರಿಶೀಲಿಸಲಾಗುತ್ತಿದೆ. ತೆರಿಗೆ ವಂಚನೆದಾರರ ವಿರುದ್ಧ ನಿದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ. ಕೇಂದ್ರೀಯ ತೆರಿಗೆಗಳ ಇಲಾಖೆಯ ಬೆಂಗಳೂರು ದಕ್ಷಿಣ ಜಿಎಸ್‌ಟಿ ಆಯುಕ್ತಾಲಯದ ತಡೆ ಘಟಕವು (ಪ್ರಿವೆನÒನ್ ಯುನಿಟ್) ಕಾರ್ಯಾಚರಣೆ ನಡೆಸಿ 15 ಕೋಟಿ ರೂ. ತೆರಿಗೆ ಪಾವತಿಸದ ಆಟೋಮೊಬೈಲ್ ಕಂಪೆನಿಯೊಂದರ ವ್ಯವಸ್ಥಾಪಕ ನಿರ್ದೇಶಕರನ್ನು ಬಂಧಿಸಲಾಗಿದೆ. ತೆರಿಗೆ ವಂಚಿಸಿರುವುದನ್ನು ಉದ್ಯಮಿ ಒಪ್ಪಿಕೊಂಡಿದ್ದಾರೆ. ಮುಂದಿನ ತನಿಖೆ ಪ್ರಗತಿಯಲ್ಲಿದೆ.
– ಜಿ.ನಾರಾಯಣಸ್ವಾಮಿ, ಕೇಂದ್ರೀಯ ತೆರಿಗೆ ಆಯುಕ್ತ, ಬೆಂಗಳೂರು ದಕ್ಷಿಣ ಆಯುಕ್ತಾಲಯ