Advertisement
“ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣ ಕಾಯ್ದೆ- 2021ರ ನಿಯಮ 3ಕ್ಕೆ ತಿದ್ದುಪಡಿ ತರಲಾಗಿದ್ದು, ಅದರ ಕರಡನ್ನು ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದೆ. ಆಕ್ಷೇಪಣೆ ಸಲ್ಲಿಸಲು 15 ದಿನ ಕಾಲಾವಕಾಶ ನೀಡಲಾಗಿದೆ.
ಕಾಯ್ದೆಯ ನಿಯಮ 3ರ ಉಪ ನಿಯಮ (1)ರ ತಿದ್ದುಪಡಿಯಂತೆ ಕೃಷಿ ಮತ್ತು ಪಶುಸಂಗೋಪನೆ ಉದ್ದೇಶಗಳಿಗೆ ಜಾನುವಾರು ಸಾಗಾಣಿಕೆಗೆ ಲಘು ವಾಣಿಜ್ಯ ವಾಹನಗಳು (ಎಲ್‌ಸಿವಿ)ಗಳ ಪಾಸ್‌ಗೆ 25 ರೂ. ಶುಲ್ಕ ಹಾಗೂ ಜಿಎಸ್‌ಟಿ ಅನ್ವಯವಾಗಲಿದೆ. ಅದೇ ರೀತಿ ಬಾರಿ ವಾಣಿಜ್ಯ ವಾಹನಗಳಿಗೆ (ಎಚ್‌ಸಿವಿ) ಪಾಸ್‌ಗೆ 50 ರೂ. ಶುಲ್ಕ ಹಾಗೂ ಜಿಎಸ್‌ಟಿ ಅನ್ವಯವಾಗಲಿದೆ ಎಂದು ಕರಡು ನಿಯಮಗಳಲ್ಲಿ ಹೇಳಲಾಗಿದೆ. ಆದರೆ, ಜಿಎಸ್‌ಟಿ ಎಷ್ಟು ಇರಲಿದೆ ಎಂಬ ಬಗ್ಗೆ ಉಲ್ಲೇಖೀಸಿಲ್ಲ.