Advertisement

GSTಯಿಂದ ಐಟಿ ಜಾಲಕ್ಕೆ 18 ಲಕ್ಷ ಹೊಸಬರ ಸೇರ್ಪಡೆ: UNಗೆ ಭಾರತ

03:40 PM Apr 27, 2018 | Team Udayavani |

ವಿಶ್ವಸಂಸ್ಥೆ : ನೋಟು ಅಪನಗದೀಕರಣ ಮತ್ತು ಸರಕು ಸೇವಾ ತೆರಿಗೆ ಅನುಷ್ಠಾನದಿಂದಾಗಿ ದೇಶದಲ್ಲಿನ ಆದಾಯ ತೆರಿಗೆ ಜಾಲಕ್ಕೆ ಹೊಸದಾಗಿ 18 ಲಕ್ಷ ಮಂದಿ ಸೇರಿದ್ದಾರೆ ಎಂದು ಭಾರತ, ವಿಶ್ವಸಂಸ್ಥೆಗೆ ತಿಳಿಸಿದೆ. 

Advertisement

ವಿದೇಶ ವ್ಯವಹಾರಗಳ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಎ ಗೀತೇಶ್‌ ಶರ್ಮಾ ಅವರು ಇಸಿಓಎಸ್‌ಓಸಿ ವೇದಿಕೆಯಲ್ಲಿ ಮಾತನಾಡುತ್ತಾ ಭಾರತ ಪ್ರಕೃತ ಒಂದರ ಬಳಿಕ ಒಂದರಂತೆ ಸುಧಾರಣೆಗಳನ್ನು ಜಾರಿಗೆ ತರುತ್ತಲೇ ಇದೆ ಎಂದು ಹೇಳಿದರು. 

ನಗದು ವ್ಯವಹಾರಗಳ ಬದಲು ಡಿಜಿಟಲ್‌ ವ್ಯವಹಾರಕ್ಕೆ ಅತ್ಯಧಿಕ ಮಹತ್ವಕೊಟ್ಟು ಜನರಲ್ಲಿ ಆ ಪ್ರವೃತ್ತಿಯನ್ನು ಪ್ರೋತ್ಸಾಹಿಸುತ್ತಿರುವಂತೆಯೇ ಭಾರತ, ಕ್ರಾಂತಿಕಾರ ಜಿಎಸ್‌ಟಿಯನ್ನು ಜಾರಿಗೆ ತಂದಿದೆ. ಪರೋಕ್ಷ ತೆರಿಗೆ ಪಾವತಿದಾರರ ಸಂಖ್ಯೆ ಶೇ.50ರಷ್ಟು ಏರಿದೆ ಎಂದು ಶರ್ಮಾ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next