Advertisement

ಕ್ರೆಡಿಟ್‌ ಕಾರ್ಡ್‌ ಬಿಲ್‌, ವಿಮೆ ಕಂತಿಗೆ ಜಿಎಸ್‌ಟಿ ಬರೆ

07:42 AM Jun 21, 2017 | Karthik A |

ಹೊಸದಿಲ್ಲಿ: ಜುಲೈ1ರಿಂದ ಜಾರಿಯಾಗಲಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕೆಲವು ವಿಷಯಗಳಲ್ಲಿ ನಿಮ್ಮ ಜೇಬಿಗೆ ಕತ್ತರಿ ಹಾಕುವುದು ಖಚಿತ. ಆ ಪಟ್ಟಿಗೆ ಈಗ ಕ್ರೆಡಿಟ್‌ ಕಾರ್ಡ್‌ ಬಿಲ್‌ ಹಾಗೂ ವಿಮೆಯ ಕಂತು ಕೂಡ ಸೇರ್ಪಡೆಯಾಗಿವೆ. ಸದ್ಯ ಗ್ರಾಹಕರು ಕ್ರೆಡಿಟ್‌ ಕಾರ್ಡ್‌ ಬಿಲ್‌ ಹಾಗೂ ವಿಮೆ ಕಂತಿಗೆ ಶೇ.15ರಷ್ಟು ಸೇವಾ ತೆರಿಗೆ ಪಾವತಿಸುತ್ತಿದ್ದಾರೆ. ಜಿಎಸ್‌ಟಿ ಜಾರಿ ಬಳಿಕ ಇದು ಶೇ.18 ಆಗಲಿದೆ. ಏಕೆಂದರೆ ಹಣಕಾಸು ಸೇವೆಗಳು ಮತ್ತು ದೂರಸಂಪರ್ಕವನ್ನು ಜಿಎಸ್‌ಟಿ ಮಂಡಳಿ ಶೇ.18ರ ತೆರಿಗೆ ವ್ಯಾಪ್ತಿಗೆ ತಂದಿದೆ. ಈ ಸಂಬಂಧ ಈಗಾಗಲೇ ವಿಮೆ ಕಂಪೆನಿಗಳು, ಬ್ಯಾಂಕ್‌ಗಳು ಗ್ರಾಹಕರಿಗೆ ಸಂದೇಶಗಳನ್ನು ಕಳುಹಿಸಲು ಆರಂಭಿಸಿವೆ. ಸ್ಟಾಂಡರ್ಡ್‌ ಚಾರ್ಟರ್ಡ್‌ ಮತ್ತು ಎಚ್‌ಡಿಎಫ್ಸಿ ಬ್ಯಾಂಕ್‌ಗಳು, ಐಸಿಐಸಿಐ ಪ್ರುಡೆನ್ಶಿಯಲ್‌ ಲೈಫ್ ಇನ್ಶೂರೆನ್ಸ್‌ ಕಂಪೆನಿ ಸಹಿತ ಕೆಲವು ಕಂಪೆನಿಗಳು ತಮ್ಮ ಗ್ರಾಹಕರಿಗೆ ಸಂದೇಶ ಕಳುಹಿಸುತ್ತಿರುವುದಾಗಿ ಹೇಳಿವೆ.

Advertisement

ಅಧಿಸೂಚನೆ ಪ್ರಕಟ: ಏತನ್ಮಧ್ಯೆ ಜಿಎಸ್‌ಟಿ ಜಾರಿ ದಿನ ಸಮೀಪಿಸುತ್ತಿರುವಂತೆಯೇ ಕೇಂದ್ರ ಸರಕಾರವು ಮಂಗಳವಾರ ಜಿಎಸ್‌ಟಿ ಕಾಯ್ದೆಯ 18 ಸೆಕ್ಷನ್‌ಗಳಿಗೆ ಸಂಬಂಧಿಸಿದ ಅಧಿಸೂಚನೆ ಪ್ರಕಟಿಸಿದೆ. ಹಾಲಿ ಇರುವಂಥ ಕೇಂದ್ರ ಅಬಕಾರಿ, ಸೇವಾ ತೆರಿಗೆ ಮತ್ತು ವ್ಯಾಟ್‌ ಅನ್ನು ಜಿಎಸ್‌ಟಿ ಜಾಲದಲ್ಲಿ ನೋಂದಣಿ ಮಾಡುವುದಕ್ಕೆ ಸಂಬಂಧಿಸಿದ ಸೆಕ್ಷನ್‌ಗಳಿವು.

Advertisement

Udayavani is now on Telegram. Click here to join our channel and stay updated with the latest news.

Next