Advertisement

ಕುದುರೆ ರೇಸ್‌, ಆನ್‌ಲೈನ್‌ ಗೇಮ್‌ಗೆ ಜಿಎಸ್‌ಟಿ?

10:42 AM Jun 17, 2022 | Team Udayavani |

ನವದೆಹಲಿ: ಕ್ಯಾಸಿನೋ, ಕುದುರೆ ರೇಸ್‌ಗಳು, ಆನ್‌ಲೈನ್‌ ಗೇಮ್‌ಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವ ಬಗ್ಗೆ ಜೂ.28, 29ರಂದು ಶ್ರೀನಗರದಲ್ಲಿ ನಡೆಯಲಿರುವ ಜಿಸ್‌ಟಿ ಮಂಡಳಿ ಸಭೆಯಲ್ಲಿ ಚರ್ಚಿಸಲಾಗುತ್ತದೆ.

Advertisement

ಇದರ ಜತೆಗೆ ಸಚಿವರ ಸಮಿತಿ ತೆರಿಗೆ ಪರಿಷ್ಕರಣೆ ಬಗ್ಗೆ ಸಲ್ಲಿಸಿರುವ ವರದಿಯ ಬಗ್ಗೆಯೂ ಚರ್ಚೆ ನಡೆಸುವ ಸಾಧ್ಯತೆಗಳಿವೆ.

ಇದು ಮಂಡಳಿಯ 47ನೇ ಸಭೆಯಾಗಿದೆ ಮತ್ತು ಶ್ರೀನಗರದಲ್ಲಿ ನಡೆಯುತ್ತಿರುವುದು ಎರಡನೇ ಬಾರಿಗೆ. ಮೇ 18 ಮತ್ತು 19ರಂದು ಅಲ್ಲಿ ಮಂಡಳಿ ಸಭೆ ನಡೆದಿತ್ತು. ಆ ಸಭೆಯಲ್ಲಿ 1,211 ವಸ್ತುಗಳನ್ನು ತೆರಿಗೆ ವ್ಯಾಪ್ತಿ ಬಗ್ಗೆ ತರಲು ಸಮ್ಮತಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next