ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅಡಿಯಲ್ಲಿ ರಾಜ್ಯ ಸರ್ಕಾರಗಳಿಗೆ ಆದಾಯ ಹೆಚ್ಚಳ ವಾಗುವಂತೆ ಮಾಡಿ, ಅವುಗಳು ಜಿಎಸ್‌ಟಿ ಪರಿಹಾರಕ್ಕಾಗಿ ಕೇಂದ್ರ ಸರ್ಕಾರದ ಮೇಲೆ ಅವಲಂಬಿತವಾಗುವುದನ್ನು ತಡೆಯುವ ನಿಟ್ಟಿನಲ್ಲಿ ಶೇ.5ರ ತೆರಿಗೆ ಸ್ಲ್ಯಾಬ್ ರದ್ದುಗೊಳಿಸುವ ಪ್ರಸ್ತಾವನೆಯೊಂದನ್ನು ಜಿಎಸ್‌ಟಿ ಮಂಡಳಿ ಸಿದ್ಧಪಡಿಸಿದೆ.
ಅದರಂತೆ, ಶೇ.5ರ ಜಿಎಸ್‌ಟಿ ಸ್ಲ್ಯಾಬ್ ಅನ್ನು ಕೈಬಿಟ್ಟು, ಜನರು ಹೆಚ್ಚಾಗಿ ಬಳಸುವ ಸಾಮಗ್ರಿಗಳನ್ನು ಶೇ.3ರ ತೆರಿಗೆ ಸ್ಲ್ಯಾಬ್ ವ್ಯಾಪ್ತಿಗೆ ತರಬೇಕು. ಜತೆಗೆ, ಶೇ.8ರ ಹೊಸ ಸ್ಲ್ಯಾಬ್ ಸೃಷ್ಟಿಸಿ, ಮಿಕ್ಕೆಲ್ಲ ಸಾಮಗ್ರಿಗಳನ್ನು ಅದರ ವ್ಯಾಪ್ತಿಗೆ ತರಲು ಚಿಂತನೆ ನಡೆಸಲಾಗಿದೆ.
ಇದಲ್ಲದೆ, ಸದ್ಯದ ನಿಯಮಗಳ ಪ್ರಕಾರ ತೆರಿಗೆ ವಿನಾಯ್ತಿ ಸೌಲಭ್ಯ ಪಡೆದಿರುವ ಬ್ರಾಂಡ್‌ರಹಿತ ಮತ್ತು ಪ್ಯಾಕ್ ಆಗದೇ ಮಾರಾಟವಾಗುವ ಆಹಾರ ವಸ್ತುಗಳನ್ನು ಹೊರತುಪಡಿಸಿ ಮಿಕ್ಕೆಲ್ಲಾ “ಅನ್ ಬ್ರಾಂಡೆಡ್’ ಸಾಮಗ್ರಿಗಳನ್ನು ಶೇ.3ರ ತೆರಿಗೆ ವ್ಯಾಪ್ತಿಗೆ ತರಬೇಕೆಂದು ಪ್ರಸ್ತಾವನೆಯಲ್ಲಿ ಉಲ್ಲೇಖೀಸಲಾಗಿದೆ.
ಪ್ರಸ್ತುತ ಜಿಎಸ್‌ಟಿಯಲ್ಲಿ ಶೇ.5, ಶೇ.12, ಶೇ.18 ಮತ್ತು ಶೇ.28ರ ಸ್ಲಾéಬ್‌ಗಳಿವೆ.
ಮುಂದಿನ ತಿಂಗಳು ನಡೆಯುವ ಜಿಎಸ್‌ಟಿ ಸಭೆಯಲ್ಲಿ ಈ ಅಂಶಗಳು ಚರ್ಚೆಗೊಳಪಡುವ ಸಾಧ್ಯತೆಗಳಿವೆ.