Advertisement
ನಗರದಲ್ಲಿ ಶನಿವಾರ ತಂಡದ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ಟೋಬರ್ ತೆರಿಗೆ ಸಂಗ್ರಹದಲ್ಲಿ 9,000 ಕೋಟಿ ರೂ.ನಿಂದ 10,000 ಕೋಟಿ ರೂ. ಇಳಿಕೆಯಾಗಿದೆ.
Related Articles
Advertisement
ಸದ್ಯ ನಿತ್ಯ 1.20 ಲಕ್ಷ ಬಿಲ್‌ಗಳು ಸೃಷ್ಟಿಯಾಗುತ್ತಿವೆ. ರಾಷ್ಟ್ರಾದ್ಯಂತ ಈ ವ್ಯವಸ್ಥೆ ಜಾರಿಯಾದರೆ ರಾಜ್ಯ-ರಾಜ್ಯಗಳ ನಡುವೆ ವಹಿವಾಟು ಸಂಬಂಧ ನಿತ್ಯ 30 ಲಕ್ಷ ಹಾಗೂ ರಾಜ್ಯಗಳ ಗಡಿಯೊಳಗೆ 8ರಿಂದ 9 ಲಕ್ಷ ಬಿಲ್‌ಗಳು ಸೃಷ್ಟಿಯಾಗುವ ನಿರೀಕ್ಷೆ ಇದೆ ಎಂದು ಹೇಳಿದರು.
ಎನ್‌ಐಸಿಗೆ ಜವಾಬ್ದಾರಿ: ದೇಶಾದ್ಯಂತ “ಇ-ವೇ ಬಿಲ್’ ವ್ಯವಸ್ಥೆ ಜಾರಿಗೆ ಪೂರಕವಾದ ಸಾಫ್ಟ್ವೇರ್ ಅಭಿವೃದಿಟಛಿ ಹಾಗೂ ನಿರ್ವಹಣೆ ಜವಾಬ್ದಾರಿಯನ್ನು ನ್ಯಾಷನಲ್ ಇನ್‌ಫರ್ಮೇಟಿಕ್ಸ್ ಸೆಂಟರ್‌ಗೆ (ಎನ್ ಐಸಿ) ವಹಿಸಲಾಗಿದೆ. ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲು ಸಂಸ್ಥೆಗೆ ಈಗಾಗಲೇ 40 ಕೋಟಿ ರೂ. ಮುಂಗಡವಾಗಿ ನೀಡಲಾಗಿದೆ ಎಂದು ಹೇಳಿದರು.
ಜಿಎಸ್‌ಟಿ ಜಾರಿಗೊಳಿಸುವ ಸಂಬಂಧದಲ್ಲಿ “ಇ-ವೇ ಬಿಲ್’ ವ್ಯವಸ್ಥೆಯನ್ನು ಕಡ್ಡಾಯಗೊಳಿಸುವ ಚಿಂತನೆಯಿರಲಿಲ್ಲ. ನಂತರ ನಿರ್ಧಾರ ಕೈಗೊಂಡಿದ್ದ ರಿಂದ ಇನ್ಫೋಸಿಸ್ ಸಂಸ್ಥೆಗೆ ಬದಲಾಗಿ ಎನ್‌ಐಸಿಗೆ ವಹಿಸಲಾಗಿದೆ. ಅಲ್ಲದೇ ಎನ್‌ಐಸಿಗೆ ಕೆಲ ರಾಜ್ಯಗಳಲ್ಲಿ ಈ ವ್ಯವಸ್ಥೆ ಜಾರಿಗೊಳಿಸಿದ ಅನುಭವವಿರುವುದರಿಂದ ಜವಾಬ್ದಾರಿ ನೀಡಲಾಗಿದೆ ಎಂದು ಸ್ಪಷ್ಟನೆ ನೀಡಿದರು.
ಶೇ.80ರಷ್ಟು ದೂರು ಇಳಿಕೆ: ಇನ್ಫೋಸಿಸ್ ಸಂಸ್ಥೆಯು ಜಿಎಸ್‌ಟಿ ನೆಟ್‌ವರ್ಕ್‌ನಡಿ ನೀಡುತ್ತಿರುವ ಸೇವೆ ತೃಪ್ತಿಕರವಾಗಿದೆ. ಆರಂಭದ ದಿನಗಳಿಗೆ ಹೋಲಿಸಿದರೆ ಈಗ ಶೇ.80ರಷ್ಟು ದೂರುಗಳು ಕಡಿಮೆಯಾಗಿವೆ. ಈ ನೆಟ್‌ವರ್ಕ್ ಸೇವೆ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಈವರೆಗೆ 65 ಕೋಟಿ ಇನ್‌ವಾಯ್ಸ ಪ್ರಕ್ರಿಯೆ ಪೂರ್ಣಗೊಳಿಸಿದೆ. 1.40 ಕೋಟಿ ಹಣ ಪಾವತಿ/ ವಹಿವಾಟು ಕೂಡ ಯಶಸ್ವಿಯಾಗಿ ನಡೆದಿದೆ. ಜಿಎಸ್‌ಟಿ ಪ್ರಕ್ರಿಯೆಗಳನ್ನು ಸರಳಗೊಳಿಸುವ ಕಾರ್ಯಕ್ಕೂ ಒತ್ತು ನೀಡಿದೆ ಎಂದು ಹೇಳಿದರು.ಶೇ.30ರಷ್ಟು ಶೂನ್ಯ ತೆರಿಗೆದಾರರು: ಜಿಎಸ್‌ಟಿಯಡಿ ನೋಂದಣಿ ಮಾಡಿಕೊಂಡವರ ಪೈಕಿ ಶೂನ್ಯ ತೆರಿಗೆ ಪಾವತಿದಾರರ ಸಂಖ್ಯೆ ಗಣನೀಯವಾಗಿದೆ.
ಜುಲೈನಲ್ಲಿ ಶೇ.42, ಆಗಸ್ಟ್‌ನಲ್ಲಿ ಶೇ.32, ಸೆಪ್ಟೆಂಬರ್ ಹಾಗೂ ಆಕ್ಟೋಬರ್‌ನಲ್ಲಿ ತಲಾ ಶೇ.30ರಷ್ಟು ವ್ಯಾಪಾರ- ವಹಿವಾಟುದಾರರು ಶೂನ್ಯ ತೆರಿಗೆದಾರರಾಗಿದ್ದಾರೆ. ವಾರ್ಷಿಕ 1.5 ಕೋಟಿ ರೂ. ವರೆಗೆ ವಹಿವಾಟು ನಡೆಸುವವರಿಂದ ಶೇ.5.5ರಷ್ಟು ತೆರಿಗೆ ಆದಾಯ ಸಂಗ್ರಹವಾಗುತ್ತಿದೆ. ವಾರ್ಷಿಕ 100 ಕೋಟಿ ರೂ.ಗಿಂತ ಹೆಚ್ಚು ವಹಿವಾಟು ನಡೆಸುವವರಿಂದ ಶೇ.70ರಷ್ಟು ತೆರಿಗೆ ಸಂಗ್ರಹವಾಗುತ್ತಿದೆ ಎಂದು ಮಾಹಿತಿ ನೀಡಿದರು.
ರಫ್ತು ಪ್ರಮಾಣ ಹೆಚ್ಚಳ: ರಫ್ತು ವಹಿವಾಟುದಾರರಿಗೆ ಹುಟ್ಟುವಳಿ ತೆರಿಗೆ ಮರು ಪಾವತಿ ಶುರುವಾಗಿದ್ದು,ವಹಿವಾಟು ಪ್ರಮಾಣವೂ ವೃದಿಟಛಿಸುತ್ತಿದೆ. ನವೆಂಬರ್‌ನಲ್ಲಿ ರಫ್ತು ಪ್ರಮಾಣ ಶೇ.30.6ರಷ್ಟು ಹೆಚ್ಚಳ ಕಂಡಿದೆ. ನವೆಂಬರ್‌ನಲ್ಲಿ ಹರಳು, ಚಿನ್ನಾಭರಣ ರಫ್ತು ಪ್ರಮಾಣವೂ ಶೇ.32.7ರಷ್ಟು ಹೆಚ್ಚಾಗಿದೆ. ಒಟ್ಟಾರೆ ಜಿಎಸ್‌ಟಿಯಡಿ ವ್ಯವಹಾರ ಸುಗಮವಾಗುತ್ತಿದೆ ಎಂದು ಹೇಳಿದರು.
ಏನಿದು “ಇ-ವೇ ಬಿಲ್’?ಇಡೀ ದೇಶದಲ್ಲೇ ಕರ್ನಾಟಕದಲ್ಲಿ ಪ್ರಾಯೋಗಿಕವಾಗಿ ಸೆ.12ರಿಂದ ಇ-ವೇ ಬಿಲ್ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಹಾಗಾಗಿ ರಾಜ್ಯದಲ್ಲಿ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ. 50 ಸಾವಿರ ರೂ.ಗಿಂತ ಹೆಚ್ಚಿನ ಮೌಲ್ಯದ ಸರಕನ್ನು ಒಂದು ಕಡೆಯಿಂದ ಮತ್ತೂಂದು ಕಡೆಗೆ ಸಾಗಿಸುವಾಗ “ಎಲೆಕ್ಟ್ರಾನಿಕ್ ವೇ ಬಿಲ್’ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ. ಆನ್‌ಲೈನ್‌ನಲ್ಲಿ ಡಿಲಿವೆರಿ ನೋಟ್
ಡೌನ್‌ಲೋಡ್ ಮಾಡಿಕೊಳ್ಳಬೇಕು. ಅದರಲ್ಲಿ ಸರಕು ರವಾನಿಸುವವರು, ಸ್ವೀಕರಿಸುವವರ ವಿವರ, ಟ್ರಾನ್ಸ್ ಪೋರ್ಟರ್ ವಿವರ, ವಾಹನ ಸಂಖ್ಯೆ, ಸರಕಿನ ಪ್ರಮಾಣ, ಮೌಲ್ಯ, ಸಂಖ್ಯೆ ಇತರೆ ವಿವರವಿರುತ್ತದೆ. 10 ಕಿ.ಮೀ. ಅಂತರದೊಳಗಿನ ಸರಕು ಸಾಗಣೆಗೆ ವಾಹನ ನೋಂದಣಿ ಸಂಖ್ಯೆ ನಮೂದನೆಗೆ ವಿನಾಯ್ತಿ ನೀಡಲಾಗಿದೆ. ಈ ರಸೀದಿಯೊಂದಿಗೆ ಸರಕುಸಾಗಿಸುವುದು ಕಡ್ಡಾಯವಾಗಲಿದೆ.
ಇದರಿಂದ ಪ್ರತಿಯೊಂದು ವ್ಯವಹಾರವೂ ದಾಖಲಾಗಿದ್ದು,ನಿಗಾ ವಹಿಸಲು ಅನುಕೂಲವಾಗಲಿದೆ. ರಾಜ್ಯದಲ್ಲಿ ಈ ಹಿಂದೆ ಜಾರಿಯಲ್ಲಿದ್ದ “ಇ-ಸುಗಮ’ ವ್ಯವಸ್ಥೆಯನ್ನೇ “ಇ-ವೇ ಬಿಲ್’ವ್ಯವಸ್ಥೆಗೆ ಬದಲಾಯಿಸಲಾಗಿದೆ.