ನವದೆಹಲಿ:ದೇಶದಲ್ಲಿ ಕೋವಿಡ್ ಎರಡನೇ ಅಲೆಯ ಸಾಂಕ್ರಾಮಿಕ ರೋಗದಿಂದ ತತ್ತರಿಸಿರುವ ನಡುವೆ ಶನಿವಾರ(ಜೂನ್ 12) ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) ಮಂಡಳಿಯ 44ನೇ ಸಭೆ ನಡೆಯಿತು.
ಇದನ್ನೂ ಓದಿ:ಅಂದು ರಸ್ತೆಯಲ್ಲಿ ಉರುಳಾಡಿದ ಶೋಭಾ ಕರಾಂದ್ಲಾಜೆ ಇಂದು ಎಲ್ಲಿದ್ದಾರೆ? ವಿನಯ್ ಕುಮಾರ್ ಸೊರಕೆ
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆದ ಜಿಎಸ್ ಟಿ ಮಂಡಳಿ ಸಭೆಯಲ್ಲಿ ಎಲ್ಲಾ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ವಿತ್ತ ಸಚಿವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಿರಿಯ ಅಧಿಕಾರಿಗಳು ಹಾಜರಿದ್ದರು.
ಕೋವಿಡ್ 19 ಪರಿಹಾರ ಸಾಮಗ್ರಿಗಳ ಮೇಲಿನ ಜಿಎಸ್ಟಿ ದರಗಳ ಕುರಿತು ಸರ್ಕಾರದ ಶಿಫಾರಸುಗಳನ್ನು ಜಿಎಸ್ ಟಿ ಮಂಡಳಿ ಈಗ ಅನುಮೋದನೆ ನೀಡಿದೆ. ಕೋವಿಡ್ 19 ಲಸಿಕೆ ಮೇಲಿನ ಶೇ.5ರಷ್ಟು ಜಿಎಸ್ ಟಿ ದರ ವಿಧಿಸಲು ಒಪ್ಪಿಗೆ ಸೂಚಿಸಿದೆ. ಕೋವಿಡ್ ಲಸಿಕೆಯ ಜಿಎಸ್ ಟಿ ದರಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಕೋವಿಡ್ ಸೋಂಕಿತರ ಮೇಳೆ ಪರಿಣಾಮ ಬೀರುವ ಮಾರಕ ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಬಳಸುವಂತಹ ಟುಸಿಲಿಝುಮಾಬ್ ಮತ್ತು ಆಂಫೋಟೆರಿಸಿನ್ ಬಿ ಔಷಧಗಳ ಮೇಳೆ ಯಾವುದೇ ತೆರಿಗೆ ವಿಧಿಸುವುದಿಲ್ಲ ಎಂದು ಹೇಳಿದೆ. ತೆರಿಗೆ ಕಡಿತ ಸೆಪ್ಟೆಂಬರ್ ವರೆಗೆ ಚಾಲ್ತಿಯಲ್ಲಿರುತ್ತದೆ ಎಂದು ತಿಳಿಸಿದೆ.
ಈಗಾಗಲೇ ಆರ್ ಟಿ ಪಿಸಿಆರ್ ಯಂತ್ರಗಳು, ಆರ್ ಎನ್ ಎ ಯಂತ್ರ ಮತ್ತು ಜಿನೋಮ್ ಸೀಕ್ವೆನ್ಸಿಂಗ್ ಯಂತ್ರಗಳ ಮೇಲೆ ವಿಧಿಸಿರುವ ಶೇ.18ರ ಜಿಎಸ್ ಟಿ ದರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ತಿಳಿಸಿದೆ. ಅಲ್ಲದೇ ಜಿನೋಮ್ ಸೀಕ್ವೆನ್ಸಿಂಗ್ ಕಿಟ್ಸ್ ಮೇಲೆ ವಿಧಿಸಿರುವ ಶೇ.12ರಷ್ಟು ಜಿಎಸ್ ಟಿ ಶುಲ್ಕ ಅದೇ ದರವನ್ನು ಮುಂದುವರಿಸಲಾಗಿದೆ ಎಂದು ವರದಿ ಹೇಳಿದೆ.