Advertisement

ತಿರುಪತಿ ಪ್ರಸಾದ, ಭಕ್ತರು ಒಪ್ಪಿಸುವ ತಲೆಕೂದಲಿಗೆ ಜಿಎಸ್‌ಟಿ ವಿನಾಯಿತಿ

12:21 PM Jun 20, 2017 | Team Udayavani |

ಹೊಸದಿಲ್ಲಿ : ಆಂಧ್ರ ಪ್ರದೇಶ ಸರಕಾರದ ಮನವಿಯನ್ನು ಪರಿಗಣಿಸಿರುವ ಸರಕು ಮತ್ತು ಸೇವಾ ತೆರಿಗೆ ಮಂಡಳಿಯು (ಜಿಎಸ್‌ಟಿ0 ವಿಶ್ವ ವಿಖ್ಯಾತ ತಿರುಪತಿ ದೇವಸ್ಥಾನದ ಪ್ರಸಾದ ಮತ್ತು ಭಕ್ತರು ಮುಡಿ ರೂಪದಲ್ಲಿ ಒಪ್ಪಿಸಿದ ತಲೆ ಕೂದಲನ್ನು ತೆರಿಗೆಯಿಂದ ವಿನಾಯಿತಿಗೊಳಿಸಿದೆ.

Advertisement

ಆಂಧ್ರ ಪ್ರದೇಶ ಸಚಿವ ವೈ ರಾಮಕೃಷ್ಣುಡು ಅವರು ದಿಲ್ಲಿಯಲ್ಲಿ ನಡೆದಿದ್ದ 17ನೇ ಜಿಎಸ್‌ಟಿ ಮಂಡಲಿ ಸಭೆಯಲ್ಲಿ ಈ ಪ್ರಸ್ತಾವವನ್ನು ಮಂಡಿಸಿದ್ದರು. ಜಿಎಸ್‌ಟಿ ಮಂಡಳಿಯು ಅವರ ಪ್ರಸ್ತಾವವನ್ನು ಪರಿಗಣಿಸಿ ತಿರುಪತಿ ಪ್ರಸಾದ ಮತ್ತು ಭಕ್ತರು ಒಪ್ಪಿಸುವ ತಲೆ ಕೂದಲನ್ನು ತೆರಿಗೆಯಿಂದ ವಿನಾಯಿತಿಗೊಳಿಸಿತು.

ತಿರುಪತಿ ದೇವಳವನ್ನು ನಡೆಸುತ್ತಿರುವ ತಿರುಪತಿ ಟ್ರಸ್ಟ್‌ ಅತ್ಯಂತ ಘನವೆತ್ತ ಧಾರ್ಮಿಕ ಟ್ರಸ್ಟ್‌ ಆಗಿದ್ದು ದಿನಂಪ್ರತಿ ಲಕ್ಷಾಂತರ ಭಕ್ತರಿಗೆ ಅದು ಸೇವೆ ನೀಡುತ್ತಿದೆ ಎಂದು ಮಂಡಳಿಯ ಮುಂದೆ ಹೇಳಿ ತೆರಿಗೆ ವಿನಾಯಿತಿಯನ್ನು ಕೋರಿದ್ದರು. 

ತಿರುಪತಿ ಪ್ರಸಾದ ಮತ್ತು ಭಕ್ತರ ತಲೆಕೂದಲಿಗೆ ತೆರಿಗೆ ವಿನಾಯಿತಿ ನೀಡಿರುವ ಸುಲಲಿತವಾಗಿ ವಹಿವಾಟು ನಡೆಸುವುದಕ್ಕೆ ಅನುಕೂಲಿಸಿರುವ ಜಿಎಸ್‌ಟಿ ಮಂಡಳಿಯ ಕ್ರಮವನ್ನು ಆಂಧ್ರ ಪ್ರದೇಶ ಸರಕಾರ ಸ್ವಾಗತಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next