Advertisement

ಜಿಎಸ್‌ಟಿ ಸಂಗ್ರಹ ಮತ್ತೆ 1 ಲಕ್ಷ ಕೋಟಿ ರೂ.ಗಳಿಗೇರಿಕೆ

10:05 AM Dec 02, 2019 | Team Udayavani |

ಹೊಸದಿಲ್ಲಿ: ಎರಡು ತಿಂಗಳ ಆರ್ಥಿಕ “ಗ್ರಹಣ’ದ ಬಳಿಕ ಜಿಎಸ್‌ಟಿ ಸಂಗ್ರಹ ಮತ್ತೆ ಜಿಗಿತುಕೊಂಡಿದ್ದು, 1 ಲಕ್ಷ ಕೋಟಿ ರೂ. ಗಡಿ ದಾಟಿ ಏರಿಕೆ ಕಂಡಿದೆ.
ಆರ್ಥಿಕ ಪರಿಸ್ಥಿತಿ ಉತ್ತೇಜನಕ್ಕಾಗಿ ಕೇಂದ್ರ ಸರಕಾರ ಕೈಗೊಂಡ ಕೆಲ ಕ್ರಮಗಳಿಂದಾಗಿ ಜಿಎಸ್‌ಟಿ ಸಂಗ್ರಹ ನವೆಂಬರ್‌ನಲ್ಲಿ ಏರಿಕೆ ದಾಖಲಿಸಲು ಕಾರಣವಾಗಿದೆ ಎಂದು ಹೇಳಲಾಗಿದೆ.

Advertisement

ನವೆಂಬರ್‌ನ ಜಿಎಸ್‌ಟಿ ಸಂಗ್ರಹ 1,03,492 ಕೋಟಿ ಆಗಿದ್ದರೆ ಇದರಲ್ಲಿ ಕೇಂದ್ರೀಯ ಜಿಎಸ್‌ಟಿ 19,592 ಕೋಟಿ ರೂ. ಆಗಿದೆ. ಇನ್ನು ರಾಜ್ಯ ಜಿಎಸ್‌ಟಿ 27,144 ಕೋಟಿ ರೂ. ಆಗಿದೆ. ಐಜಿಎಸ್‌ಟಿ ಸಂಗ್ರಹ 49,028 ಕೋಟಿ ರೂ. ಗಿದೆ. (ಜತೆಗೆ ಆಮದಿನಿಂದ 20,948 ಕೋಟಿ ರೂ.) ಸೆಸ್‌ 7,727 ಕೋಟಿ ರೂ. (869 ಕೋಟಿ ರೂ. ಆಮದಿನಿಂದ) ಸಂಗ್ರಹಿಸಲಾಗಿದೆ ಎಂದು ಕೇಂದ್ರ ಹಣಕಾಸು ಇಲಾಖೆ ಹೇಳಿದೆ.

ಈ ಸಂಗ್ರಹದೊಂದಿಗೆ ನವೆಂಬರ್‌ನಲ್ಲಿ ಶೇ.6ರಷ್ಟು ಏರಿಕೆಯಾಗಿದೆ. ಜಿಎಸ್‌ಟಿ ಸಂಗ್ರಹ ಏರಿಕೆಯಿಂದ ಕೇಂದ್ರದ ಕ್ರಮಗಳಿಗೆ ಇನ್ನಷ್ಟು ಉತ್ತೇಜನ ಸಿಗಬಹುದು ಎನ್ನಲಾಗಿದೆ. ಜಿಎಸ್‌ಟಿ ಅಕ್ಟೋಬರ್‌ ಸಂಗ್ರಹ 95,380 ಕೋಟಿ ರೂ. ಆಗಿತ್ತು. ಆಗಸ್ಟ್‌ನಲ್ಲೂ ಸಂಗ್ರಹ 1 ಲಕ್ಷ ಕೋಟಿ ರೂ.ಗಳಿಗೆ ಕಡಿಮೆ ಇತ್ತು.

ಜಿಎಸ್‌ಟಿ ಜಾರಿಗೊಂಡ ಸಮಯ 2017 ಜುಲೈ ಬಳಿಕ 1 ಲಕ್ಷ ಕೋಟಿ ರೂ.ಗಳ ಗಡಿ ದಾಟುತ್ತಿರುವುದು ಇದು ಎಂಟನೇ ಬಾರಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next