ರಾಧಾಕೃಷ್ಣ, ಪ್ರಾವಿಷನ್ ಸ್ಟೋರ್, ಹಾಸನ ಯಾವುದೇ ವ್ಯಾಪಾರದ ವಹಿವಾಟಿನ ವಾರ್ಷಿಕ ಮೊತ್ತ 20 ಲಕ್ಷ ರೂ. ಒಳಗಿದ್ದರೆ ಜಿಎಸ್‌ಟಿ ಅಡಿ ನೋಂದಣಿ ಅಗತ್ಯವಿಲ್ಲ. ಸ್ವಇಚ್ಛೆಯಿಂದ ಬಯಸಿದರೆ ನೋಂದಣಿ ಮಾಡಿಕೊಳ್ಳಬಹುದು. 200 ರೂ.ವರೆಗಿನ ಖರೀದಿಗೆ ಕಡ್ಡಾಯವಾಗಿ ಬಿಲ್ ಹಾಕುವಂತಿಲ್ಲ. ಚಿಲ್ಲರೆ ವ್ಯಾಪಾರದಲ್ಲಿ 200 ರೂ. ಮೀರಿದರೆ ಕಡ್ಡಾಯವಾಗಿ ಬಿಲ್ ಮಾಡಬೇಕು.ಇದು ವ್ಯಾಪಾರಿಗೂ ಅನ್ವಯವಾಗಲಿದ್ದು, ವ್ಯಾಪಾರಿ ಕೂಡ ಡೀಲರ್‌ಗೆ ಗ್ರಾಹಕರಾಗಿರುವುದರಿಂದ ಅವರು ಸಹ 200 ರೂ.ಗಿಂತ ಹೆಚ್ಚಿನ ಮೊತ್ತದ ಖರೀದಿಗೆ ಬಿಲ್ ಪಡೆಯುವುದು ಕಡ್ಡಾಯವಾಗಲಿದೆ.
Advertisement
ಕ್ರೆಡಿಟ್ ಕಾರ್ಡ್ ಬಳಸಿದರೆ ಎರಡು ಬಾರಿ ತೆರಿಗೆ ಕಡಿತವಾಗಲಿದ್ದು, ಬಳಕೆದಾರರಿಗೆ ಹೊರೆಯಾಗುತ್ತದೆ ಎಂಬ ಮಾತಿದೆಯೆಲ್ಲಾ?ಸುಜಿತ್, ಖಾಸಗಿ ಕಂಪನಿ ಉದ್ಯೋಗಿ, ಬೆಂಗಳೂರು ಇದು ಸಂಪೂರ್ಣ ಸುಳ್ಳು. ಜಿಎಸ್‌ಟಿ ಜಾರಿ ಬಳಿಕ
ಕ್ರೆಡಿಟ್ ಇಲ್ಲವೇ ಡೆಬಿಟ್ ಕಾರ್ಡ್ ಬಳಸಿದರೆ ಎರಡು ಬಾರಿ ತೆರಿಗೆ ಕಡಿತವಾಗಲಿದೆ ಎಂಬ ಮಾತು ಸತ್ಯಕ್ಕೆ ದೂರವಾದುದು. ಹೊಸ ವ್ಯವಸ್ಥೆಯ ಯಾವ ಹಂತದಲ್ಲೂ ಎರಡು ಬಾರಿ ತೆರಿಗೆ ಕಡಿತಗೊಳಿಸಲು ಅವಕಾಶವಿಲ್ಲ. ಬ್ಯಾಂಕ್‌ನ ನಿಯಮಾವಳಿಯಂತೆ ನಿರ್ದಿಷ್ಟ ವ್ಯವಹಾರಕ್ಕೆ ನಿಗದಿತ ಪ್ರಮಾಣದ ತೆರಿಗೆ ಯಷ್ಟೇ ಕಡಿತವಾಗಲಿದೆ. ಈ ಬಗ್ಗೆ ಗೊಂದಲ ಬೇಡ .