Advertisement
ಉಡುಪಿ ಜಿಲ್ಲೆಯ ಸೋಮೇಶ್ವರದ ಶ್ರೀ ವೆಂಕಟರಮಣ ಸ್ವಾಮಿ ದೇವ ಸ್ಥಾನದ ಸಭಾಂಗಣದಲ್ಲಿ ಜರಗಿದ ಜಿಎಸ್‌ಬಿ ಸಮಾಜದ “ವಿದ್ಯಾಕಲ್ಪಕ ವಿದ್ಯಾರ್ಥಿ ವೇತನ’ ಕಾರ್ಯಕ್ರಮದ ಐದನೇ ಆವೃತ್ತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸೋಮೇಶ್ವರದ ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನದ ಮೊಕ್ತೇಸರರಾಗಿ ಅನೇಕ ವರ್ಷ ಸೇವೆ ಸಲ್ಲಿಸಿದ ದಾನಿ ಹಾಗೂ ಸಮಾಜಸೇವಕ ಕೆ. ಮಂಜುನಾಥ ಕಾಮತ ಮುದ್ರಾಡಿ ಆವರನ್ನು ಸಮ್ಮಾನಿಸಲಾ ಯಿತು. ಕೊಂಕಣಿ ಕವಿತಾ ರಚನೆ ಸ್ಪರ್ಧೆಯ ವಿಜೇತರಿಗೆ ಸೋಮೇಶ್ವರದ ಶ್ರೀ ವೆಂಕಟರಮಣ ಸ್ವಾಮಿ ದೇವ ಸ್ಥಾನದ ಮೊಕ್ತೇಸರ ಕಾರ್ಯದರ್ಶಿ ಎಸ್. ರಾಘವೇಂದ್ರ ಭಕ್ತ ಅವರು ಬಹುಮಾನ ನೀಡಿ ಶುಭ ಕೋರಿದರು.
Related Articles
Advertisement
ಇದನ್ನೂ ಓದಿ:ಪ್ರತ್ಯೇಕ ಚುನಾವಣಾ ಪ್ರಚಾರದಿಂದ ಅನುಕೂಲ: ಯಡಿಯೂರಪ್ಪ
ವಿದ್ಯಾರ್ಥಿವೇತನ ಪಡೆದವರನ್ನು ಗೌರವಿಸಲಾಯಿತು. ಕುಂದಾಪುರದ ಕಾರ್ತಿಕ ಭಟ್ (ಕುಸ್ತಿ), ಪಾಣೆ ಮಂಗಳೂ ರಿನ ಆರಾಧನಾ ಶೆಣೈ (ಶೈಕ್ಷಣಿಕ ಸಾಧನೆ), ಬಂಟವಾಳದ ಧನ್ಯಶ್ರೀ ಬಾಳಿಗಾ (ಶೈಕ್ಷಣಿಕ ಸಾಧನೆ), ಕಾರ್ಕಳದ ರಚನಾ ಡಿ. ಭಟ್ (ಸಿ.ಎ. ಐಪಿಸಿಸಿ), ಕಾರ್ಕಳ ಮಾಳದ ನಿತಿನ್ ಶೆಣೈ (ಸಿಎ ಐಪಿಸಿಸಿ), ಕಾರ್ಕಳದ ಸಂಗೀತಾ ಕಾಮತ್ (ಹಳೆ ವಿದ್ಯಾರ್ಥಿ) ಅವರನ್ನು “ಕ್ಷಮತಾ’ ಕಾರ್ಯಕ್ರಮದ ಸಂಚಾಲಕ ಸಿಎ ಗಿರಿಧರ ಕಾಮತ್ ಮತ್ತು ವಿಶ್ವ ಕೊಂಕಣಿ ಭಾಶಾ ಸಂಸ್ಥಾನದ ನಿರ್ದೇಶಕ ಗುರುದತ್ತ ಬಂಟ್ವಾಳಕರ್ ಸಮ್ಮಾನಿಸಿದರು. ವಿದ್ಯಾರ್ಥಿ ವೇತನ ನಿಧಿಯ ಕಾರ್ಯಗಳಲ್ಲಿ ಸಹಕರಿಸಿದ ಜಗದೀಶ ಹೆಗ್ಡೆ ಹಾಗೂ ಪವನ ಭಟ್ ಅವರನ್ನು ಸಮ್ಮಾನಿಸಲಾಯಿತು.
ರಾಷ್ಟ್ರೀಯ ತರಬೇತುದಾರ ರಾಜೇಂದ್ರ ಭಟ್ ಕೆ. ಪ್ರಧಾನ ಭಾಷಣ ಮಾಡಿದರು. ದೇವಸ್ಥಾನದ ಆಡಳಿತ ಮೊಕ್ತೇಸರ ಎಚ್. ಯೋಗೀಶ ಭಟ್ ಸ್ವಾಗತಿಸಿದರು. ಜಗದೀಶ ಹೆಗ್ಡೆ ವಂದಿಸಿದರು. ಸ್ಮಿತಾ ಶೆಣೈ ಕಾರ್ಯಕ್ರಮ ನಿರೂಪಿಸಿದರು. ಕವಿತೆ ಸ್ಪರ್ಧೆ ವಿಜೇತರು
ಪ್ರಥಮ (25,000 ರೂ.): ಅಂಕಿತಾ ಶೆಣೈ ಪೆರ್ಮುದೆ, ಗೋಪಾಲಕೃಷ್ಣ ಭಟ್ ಕಣ್ಣೂರು, ಅನುಷಾ ವಿ. ಶೆಣೈ ಕಾಪು.ದ್ವಿತೀಯ (15,000 ರೂ.): ಸತ್ಯದೇವ ನಾಯಕ್ ಬಿದ್ಕಲ್ ಕಟ್ಟೆ, ದೀಕ್ಷಾ ವಿ. ಕಿಣಿ, ಮಂಗಳೂರು, ಸಂಜನಾ ಭಟ್ ಬೆಳ್ತಂಗಡಿ, ಸಾಯೀಶ್ ವಿ. ಕಿಣಿ ಮಂಗಳೂರು.ತೃತೀಯ (10,000 ರೂ.): ವಂದನಾ ಪ್ರಭು ಮುಂಡ್ಕೂರು, ತಾರಾ ಆರ್, ಕಿರಿಮಂಜೇಶ್ವರ, ರಮ್ಯಾ ಬೆಳ್ಮಣ್.