Advertisement
ಗಣೇಶೋತ್ಸವವು ಶ್ರೀ ಕಾಶೀ ಮಠಾಧೀಶ ವೃಂದಾವನಸ್ಥ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿ ಹಾಗೂ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಅವರ ಅನುಗ್ರಹ ಮತ್ತು ಮಾರ್ಗದರ್ಶನದಲ್ಲಿ ನಡೆಯಲಿದ್ದು, ಪೂರ್ವ ಭಾವಿ ಸಭೆಯ ಪ್ರಾರಂಭದಲ್ಲಿ ಪ್ರಧಾನ ವೈಧಿಕರಾದ ವಿಜಯ ಭಟ್ ಪ್ರಾರ್ಥನೆಗೈದರು. ಗಣೇಶೋತ್ಸವ ಆಯೋಜನ ಸಮಿತಿಯ ಸಂಚಾಲಕ ಡಾ| ಭುಜಂಗ ಪೈ ಅಧ್ಯಕ್ಷತೆ ವಹಿಸಿ ಸ್ವಾಗತಿಸಿ, ಈ ವರ್ಷದ ಗಣೇಶೋತ್ಸವಕ್ಕೆ ಭಕ್ತರು ಈ ವರೆಗೆ ಸಲ್ಲಿಸಿದ ಪೂಜಾ ಸೇವೆಯ ವಿವರ ನೀಡಿ, ಧನ ಸಂಗ್ರಹದ ಬಗ್ಗೆ ವಿವರಿಸಿದರು.
Related Articles
Advertisement
ಐದು ದಿನಗಳ ಕಾಲ ನಡೆಯಲಿರುವ ಗಣೇಶೋತ್ಸವದಲ್ಲಿ ಏಕೋತ್ತರ ಸಹಸ್ರ ಮಹಾಗಣಪತಿಯಾಗ, ಉದಯಾಸ್ತಮಾನ ಮಹಾ ಭೋಗ ಸೇವೆ, ಅತಿ ವಿಶೇಷ ಸೇವೆ, ಮಹಾ ಮೂಡುಗಣಪತಿ ಪೂಜೆ, ಸಹಸ್ರ ಮೋದಕ ಹವನ, ಪೂರ್ಣ ದಿನದ ಸೇವೆ, ಬ್ರಾಹ್ಮಣ ಸುಹಾಸಿನಿ ಸಂತರ್ಪಣೆ, ಮಧ್ಯಾಹ್ನ ಪೂಜೆ, ಭಾಗೀರಥಿ ಅಭಿಷೇಕ, ರಾತ್ರಿಪೂಜೆ, ಮೂಡುಗಣಪತಿ ಪೂಜೆ, ಕ್ಷೀರಾಭಿಷೇಕ, ಪೂರ್ಣ ದಿನದ ಹೂವಿನ ಪೂಜೆ, ಪಾನಕ ಸೇವೆ, 1001 ಮೋದಕ ನೈವೇದ್ಯ, ರಂಗಪೂಜೆ, ಉಷಾಪೂಜೆ, ಗಣಪತಿಹೋಮ, ಮೋದಕ ನೈವೇದ್ಯ, ಪ್ರಸಾದ ವಿತರಣೆ ಸೇವೆ ಸಲ್ಲಿಸಬಹುದು ಎಂದು ಸಭೆಯಲ್ಲಿ ತಿಳಿಸಲಾಯಿತು. ಸರಕಾರಿ ಮಾರ್ಗಸೂಚಿಗಳಿಗೆ ಅನುಗುಣವಾಗಿ ಗಣೇಶೋತ್ಸವ ಆಚರಣೆ ಜರಗುವುದರಿಂದ ಭಕ್ತರು ಪೂಜೆ, ಸೇವೆಯನ್ನು ವಿವಿಧ ಪ್ರಸಾರ ಮಾಧ್ಯಮದ ಮೂಲಕ ವೀಕ್ಷಿಸಬಹುದು. ಹೆಚ್ಚಿನ ವಿವರಗಳಿಗಾಗಿ ಸೇವಾ ಮಂಡಲದ (022-24078147, 022-24078 226) ಕಚೇರಿಯನ್ನು ಸಂಪರ್ಕಿಸಬಹುದು.