Advertisement

ಸೇವಾ ಮಂಡಲವು ವೈದ್ಯಕೀಯ ಕ್ಷೇತ್ರದಲ್ಲೂ ವಿಶ್ವಪ್ರಸಿದ್ಧಿ ಪಡೆಯಲಿ: ಸಂಯಮೀಂದ್ರ ಶ್ರೀ

07:48 PM Dec 13, 2020 | Suhan S |

ಮುಂಬಯಿ, ಡಿ. 12: ವಿಶ್ವವಿಖ್ಯಾತ ಗಣೇಶೋತ್ಸವ ಮಂಡಳಿ ಎಂದೇ ಬಿಂಬಿತ ವಾಗಿರುವ ಜಿಎಸ್‌ಬಿ ಸೇವಾ ಮಂಡಲ ಕಿಂಗ್‌ಸರ್ಕಲ್‌ ಇದರ ಬಹು ಕಾಲದ ನಿರೀಕ್ಷೆಯ ಸೇಜ್‌ (ಎಸ್‌ಎಜಿಇ) ಹಾಸ್ಪೆಟಲ್‌ ಪ್ರಾಜೆಕ್ಟ್‌ನ ಶಿಲಾನ್ಯಾಸ ಕಾರ್ಯ ಕ್ರಮವು ಶ್ರೀ ಕಾಶೀ ಮಠಾಧೀಶರಾದ ಶ್ರೀಮದ್‌ ಸಂಯಮೀಂದ್ರ ತೀರ್ಥ ಶ್ರೀಪಾ ದರ ದಿವ್ಯ ಹಸ್ತದಿಂದ ಅದ್ದೂರಿಯಾಗಿ ನಡೆಯಿತು.

Advertisement

ಮಂಡಲವು ಖರೀದಿಸಿರುವ 9.75 ಎಕ್ರೆ ಜಾಗದಲ್ಲಿ ಮೀರಾ-ಭಾಯಂದರ್‌ನ ವರ್ಸಾವೇಯಲ್ಲಿ ಡಿ. 10ರಂದು ಬೆಳಗ್ಗೆ 8ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶಿಲಾನ್ಯಾಸ ನೆರವೇರಿಸಲಾಯಿತು. ಡಿ. 8 ರಂದು ಗುರು ಸ್ಮರಣೆ, ಗಣಪತಿ ಪೂಜೆ, ಭೂವರಾಹ ಹವನ ನಡೆಯಿತು. ಡಿ. 9ರಂದು ಗಣಪತಿ ಹೋಮ, ನವಗ್ರಹ ಹವನ ಇನ್ನಿತರ ಪೂಜಾವಿಧಿಗಳು ನೆರವೇರಿದವು.

ಇದೇ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಸೇವಾ ಮಂಡಲದ ಅಧ್ಯಕ್ಷ ರಮೇಶ್‌ ಭಂಡಾರ್ಕರ್‌ ಮತ್ತು ಕಾರ್ಯದರ್ಶಿ ಶಿವಾನಂದ ಭಟ್‌ ಅವರಿಂದ ಪೂಜ್ಯ ಗುರುವರ್ಯರ ಪಾದ ಪೂಜೆ ನಡೆಯಿತು. ಮಂಡಳದ ಉಪಾಧ್ಯಕ್ಷ ಯಶವಂತ್‌ ಕಾಮತ್‌ ಸ್ವಾಗತಿಸಿದರು. ಬಳಿಕ ಮಂಡಳದ ಆರ್‌. ಜಿ. ಭಟ್‌ ಪ್ರಸ್ತಾವಿಸಿ, ಮಂಡಳದ ಆಸ್ಪತ್ರೆ ಸ್ಥಾಪನೆಯ ಆವಶ್ಯಕತೆಯನ್ನು ವಿವರಿಸಿದರು. ಈ ಬೃಹತ್‌ ಯೋಜನೆ ಶೀಘ್ರದಲ್ಲೇ ಪೂರ್ಣಗೊಂಡು ಕಾರ್ಯರೂಪಕ್ಕೆ ಬರಲು ಸರ್ವರ ಸಹಕಾರ ಅಗತ್ಯವಾಗಿದೆ ಎಂದರು.

ಬಳಿಕ ಶ್ರೀ ಕಾಶೀ ಮಠಾಧೀಶರಾದ ಶ್ರೀಮದ್‌ ಸಂಯಮೀಂದ್ರ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿ, ಜಿಎಸ್‌ಬಿ ಸಮಾಜದವರು ಕರ್ನಾಟಕ, ಕೇರಳದಿಂದ ಹಲವು ಶತಮಾನಗಳ ಹಿಂದೆ ಮುಂಬಯಿಗೆ ಆಗಮಿಸಿ ನೆಲೆಸಿದವರು. ನಮ್ಮ ಸಮಾಜದ ಉದ್ಧಾರದೊಂದಿಗೆ ಇತರರಿಗೂ ಒಳಿತಾಗಲು ಸಹಕರಿಸುತ್ತಿರುವವರು ನಾವು. ಅದೇ ರೀತಿ ಸದ್ಯದಲ್ಲೇ ಇಲ್ಲಿ ನಿರ್ಮಾಣಗೊಳ್ಳಲಿರುವ ಸುಸಜ್ಜಿತ ಆಸ್ಪತ್ರೆ ಜಿಎಸ್‌ಬಿ ಸಮಾಜ ಮಾತ್ರವಲ್ಲದೆ ಇತರ ಸಮಾಜದವರಿಗೂ ಉಪಯೋಗವಾಗಲಿ. ನಮ್ಮ ಕಾಶೀ ಮಠ ಪರಂಪರೆಯ ಹೆಚ್ಚಿನ ಗುರುವರ್ಯರು ಆಯುರ್ವೇದ ಪಂಡಿತರಾಗಿದ್ದರು. ವೈದ್ಯಕೀಯ ರಂಗಕ್ಕೂ ನಮ್ಮ ಸಮಾಜಕ್ಕೂ ಅವಿನಾಭಾವ ಸಂಬಂಧವಿದೆ. ಗಣೇಶೋ ತ್ಸವ ಪ್ರತಿ ವರ್ಷ ಐದು ದಿನಗಳ ಕಾಲ ಜರಗುತ್ತಿದೆ. ಆಸ್ಪತ್ರೆಯು ವರ್ಷದ 365 ದಿನಗಳು ತೆರೆದಿರುತ್ತದೆ ಎಂದು ನೆನಪಿ ಡಬೇಕು. ಇಲ್ಲಿನ ಆಸ್ಪತ್ರೆ ಯೋಜನೆ ಆದಷ್ಟು ಬೇಗ ಪೂರ್ಣಗೊಂಡು ಎಲ್ಲರಿಗೂ ಉಪಯೋಗ ವಾಗು ವಂತಾಗಲಿ. ಧಾರ್ಮಿಕ ಕಾರ್ಯಕ್ರಮ ಗಳೊಂದಿಗೆ ಸಮಾಜವು ವೈದ್ಯಕೀಯ ಕ್ಷೇತ್ರದಲ್ಲಿ ಆಸ್ಪತ್ರೆಯ ಮುಖಾಂತರ ವಿಶ್ವಪ್ರಸಿದ್ಧಿಯನ್ನು ಪಡೆಯಲಿ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಸುಧೀಂದ್ರ ಮಿಶನ್‌ ಆಸ್ಪತ್ರೆ ಎರ್ನಾಕುಲಂ ಇದರ ಟ್ರಸ್ಟಿ ಗಳಾದ ಟಿ. ಎಂ. ವಿ., ರಾಜೇಶ್‌ ಶೆಣೈ, ಮನೋಹರ ಪ್ರಭು, ನಿರ್ದೇಶಕ ಜುನಿಡ್‌ ರೆಹ ಮಾನ್‌, ಮಾಜಿ ಎಂಎಲ್‌ಎ ನರೇಂದ್ರ ಮೆಹ್ತ, ಶಾಸಕಿ ಮನಿಷಾ ಚೌಧರಿ, ಸಂಸದ ಗೋಪಾಲ್‌ ಶೆಟ್ಟಿ, ಎಂಬಿಎಂಸಿ ಇದರ ಟೌನ್‌ ಪ್ಲಾನರ್‌ ದಿಲೀಪ್‌ ಗೆವಾರೆ ಮೊದಲಾದವರು ಉಪಸ್ಥಿತರಿದ್ದರು.

Advertisement

ಆಸ್ಪತ್ರೆ ಸಮುಚ್ಚಯದ ಶಿಲಾನ್ಯಾಸ ಕಾರ್ಯಕ್ರಮದ ಸರ್ವ ಧಾರ್ಮಿಕ ಕಾರ್ಯಕ್ರಮಗಳನ್ನು ಪುರೋಹಿತ ವರ್ಗದವರು ವಿಧಿ ವತ್ತಾಗಿ ನೆರವೇರಿಸಿದರು. ಸೇವಾ ಮಂಡಲದ ಪದಾಧಿ ಕಾರಿಗಳು, ಸ್ವಯಂ ಸೇವಕರು, ಕಾರ್ಯ ಕಾರಿ ಸಮಿತಿಯ ಸದ ಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಕೋವಿಡ್ ಲಾಕ್‌ಡೌನ್‌ ಮಾರ್ಗ ಸೂಚಿಗಳಿಗೆ ಅನುಗುಣ ವಾಗಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next