Advertisement

ಜಿಎಸ್‌ಬಿ ಕಿಂಗ್‌ಸರ್ಕಲ್‌ ಗಣೇಶೋತ್ಸವ: ಪೂರ್ವಭಾವಿ ಸಭೆ

04:35 PM Aug 18, 2017 | |

ಮುಂಬಯಿ: ಜಿಎಸ್‌ಬಿ ಸೇವಾ ಮಂಡಳ  ಕಿಂಗ್‌ಸರ್ಕಲ್‌ ಗಣೇಶೋತ್ಸವವು ಆ. 25ರಂದು ಸುಕೃತೀಂದ್ರ ನಗರದಲ್ಲಿ ನಡೆಯಲಿದ್ದು, ಇದರ ಪೂರ್ವಭಾವಿ ಸಭೆಯು ಆ. 12ರಂದು ಸಂಜೆ ಸಯಾನ್‌ನ ಮಂಡಳದ ಶ್ರೀ ಗುರುಗಣೇಶ ಪ್ರಸಾದ ಸಭಾಗೃಹದಲ್ಲಿ ನಡೆಯಿತು. ಪ್ರಾರಂಭದಲ್ಲಿ ವೇದಮೂರ್ತಿ ಬಂಟ್ವಾಳ ಕೃಷ್ಣ ಭಟ್‌ ಅವರಿಂದ ದೇವತಾ ಪ್ರಾರ್ಥನೆ ನಡೆಯಿತು.

Advertisement

ಪ್ರಧಾನ ಸಂಚಾಲಕ ಡಾ| ಭುಜಂಗ ಪೈ ಅವರು ಸ್ವಾಗತಿಸಿ ಕಳೆದ ಬಾರಿಯ ಸಭೆಯ ವರದಿ ಮಂಡಿಸಿ, ಪ್ರಸಕ್ತ ಧನ ಸಂಗ್ರಹದ ವಿವರ ನೀಡಿದರು. ಸಹ ಸಂಚಾಲಕ ಜಿ. ಡಿ. ರಾವ್‌ ಅವರು ಮಾತನಾಡಿ, ಸ್ವಯಂ ಸೇವಕರು ಬಹಳ ಉತ್ಸಾಹದಿಂದ ಧನ ಸಂಗ್ರಹ ಮಾಡುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸಹ ಸಂಚಾಲಕ ಎಂ. ವಿ. ಕಿಣಿ ಅವರು ಮಾತನಾಡಿ, ನಮ್ಮ ಪೂರ್ವಜರು ಗಣೇಶೋತ್ಸವ ಪ್ರಾರಂಭಿಸುವ ಮೂಲಕ ಭದ್ರ ತಳಪಾಯ ಹಾಕಿದ್ದಾರೆ. ಅದನ್ನು  ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ನುಡಿದರು.

ಪೆಂಡಾಲ್‌ ಸಮಿತಿಯ ದಿಲೀಪ್‌ ಪೈ ಅವರು ಮಾತನಾಡಿ, ನಮ್ಮ ಗಣೇಶೋತ್ಸವಕ್ಕೆ ಬೇಕಾಗಿರುವ ಸರ್ವ ಪರವಾನಿಗೆ ಕ್ಲಪ್ತ ಸಮಯದಲ್ಲಿ ಸಿಗಲಿದೆ ಎಂದರು. ಮಾಜಿ ಸಂಚಾಲಕ ಜಿ. ಜಿ. ಪ್ರಭು ಅವರು ಮಾತನಾಡಿ, ನಮ್ಮ ಗುರುವರ್ಯರಾದ ಶ್ರೀ ಕಾಶೀ ಮಠಾಧೀಶ ಶ್ರೀಮದ್‌ ಸುಧೀಂದ್ರ ತೀರ್ಥ ಸ್ವಾಮೀಜಿ ಹಾಗೂ ಶ್ರೀನಮದ್‌ ಸಮ್ಯಮೀಂದ್ರ ತೀರ್ಥ ಸ್ವಾಮೀಜಿ ಅವರ ಸಾಧನೆಗಳನ್ನು ವಿವರಿಸಿ, ಸೇವಾ ಮಂಡಳದ ಗಣೇಶೋತ್ಸವವು ವಿಶ್ವಖ್ಯಾತಿ ಪಡೆದಿರುವ ಬಗ್ಗೆ ವಿವರವಾಗಿ ತಿಳಿಸಿ ಎಲ್ಲರ ಸಹಕಾರ ಬಯಸಿದರು.

ಸೇವಾ ಮಂಡಳದ ಮಾಜಿ ಅಧ್ಯಕ್ಷ ಆರ್‌. ಜಿ. ಭಟ್‌ ಮಾತನಾಡಿ, ಕಳೆದ ವರ್ಷ ಗಣೇಶೋತ್ಸವದ ಸಂದರ್ಭದಲ್ಲಿ 66 ಸಾವಿರ ಪೂಜೆ ಹಾಗೂ ಸೇವೆಗಳು ನೆರವೇರಿದೆ. ಈ ವರ್ಷ ಇದಕ್ಕಿಂತಲೂ ಹೆಚ್ಚು ಪೂಜೆ ಹಾಗೂ ಸೇವೆಗಳು ಸಂದಾಯ ವಾಗುವ ವಿಶ್ವಾಸ ವ್ಯಕ್ತಪಡಿಸಿದರು.

Advertisement

ಸೇವಾ ಮಂಡಳದ ಪ್ರಧಾನ ಅರ್ಚಕ ಸ್ವಯಂ ಸೇವಕರ ಮುಖಂಡ ವೇದಮೂರ್ತಿ ಬಂಟ್ವಾಳ ಕೃಷ್ಣ ಭಟ್‌ ಮಾತನಾಡಿ, ಭಕ್ತರು ನಮ್ಮ ಗಣಪತಿಯಲ್ಲಿ ಪ್ರಾರ್ಥಿಸಿದ ಬಳಿಕ ಪ್ರತಿಫಲ ಸಿಕ್ಕಿದ ಕಾರಣ ಹೆಚ್ಚು ಪೂಜೆ ಸಲ್ಲಿಸಿದ ಬಗ್ಗೆ ಹೇಳಿದರು. ಮಂಡಳದ ಕಾರ್ಯಕಾರಿ ಸಮಿತಿಯ ಸದಸ್ಯ ಪ್ರಶಾಂತ ಮಲ್ಯ ಅವರು ಮಾತನಾಡಿ, ಸ್ವಯಂ ಸೇವಕರು ಆ. 23 ರ ಒಳಗೆ ಪರಿಚಯ ಪತ್ರವನ್ನು ಪಡೆಯುವಂತೆ ವಿನಂತಿಸಿದರು.

ಸೇವಾ ಮಂಡಳದ ಕಾರ್ಯದರ್ಶಿ ರಾಮನಾಥ ಕಿಣಿ ಅವರು ವಂದಿಸಿದರು. ಮುಂದಿನ ಪೂರ್ವಭಾವಿ ಸಭೆಯು ಆ. 19 ರಂದು ಸಂಜೆ 7.35 ರಿಂದ ಸುಕೃತೀಂದ್ರ ನಗರ ಗಣೇಶೋತ್ಸವ ಮಂಟಪ, ಕಿಂಗ್‌ಸರ್ಕಲ್‌ ಇಲ್ಲಿ ಜರಗಲಿದೆ ಎಂದು ಇದೇ  ಸಂದರ್ಭದಲ್ಲಿ ತಿಳಿಸಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next