Advertisement

ಜಿಎಸ್‌ಬಿ ಸ್ಕಾಲರ್‌ಶಿಪ್‌ ಲೀಗ್‌: ದಾನಿಗಳ ವಿಶೇಷ ಸಭೆ

04:26 PM Apr 22, 2018 | |

ಮುಂಬಯಿ: ಗೌಡ ಸಾರಸ್ವತ ಬ್ರಾಹ್ಮಣ್‌ ಸ್ಕಾಲರ್‌ಶಿಪ್‌ ಲೀಗ್‌ ಮುಂಬಯಿ ಇದರ ವತಿಯಿಂದ ದಾನಿಗಳ ವಿಶೇಷ ಸಭೆಯ ಇತ್ತೀಚೆಗೆ ಮಂಗಳೂರಿನ ಕೆನರಾ ಹೈಸ್ಕೂಲ್‌ನ ಭುವನೇಂದ್ರ  ಸಭಾಗೃಹದಲ್ಲಿ ನಡೆಯಿತು.

Advertisement

ದಕ್ಷಿಣ ಕನ್ನಡದ ನೂರಾರು ವಿದ್ಯಾರ್ಥಿಗಳಿಗೆ ದಾನಿಗಳ ಸಹಕಾರದಿಂದ ವಿದ್ಯಾರ್ಥಿ ವೇತನವನ್ನು ನೀಡಿ ಸಹಕರಿಸಲಾಯಿತು. ಮೆರಿಟ್‌ ಸ್ಟೂಡೆಂಟ್ಸ್‌ ಗಳನ್ನು ಈ ಸಂದರ್ಭದಲ್ಲಿ ಆಹ್ವಾನಿಸಿ ಗೌರವಿಸಲಾಯಿತು.

ಗೌಡ ಸಾರಸ್ವತ ಬ್ರಾಹ್ಮಣ್‌ ಸ್ಕಾಲರ್‌ಶಿಪ್‌ ಲೀಗ್‌ ಮುಂಬಯಿ ಇದರ ಕಾರ್ಯಾಧ್ಯಕ್ಷೆ ಗೀತಾ ಆರ್‌. ಪೈ ಇವರು ದಾನಿಗಳನ್ನು ಸ್ವಾಗತಿಸಿದರು. ಪ್ರಭು ಚಾರಿಟೆಬಲ್‌ ಟ್ರಸ್ಟ್‌ ಇದರ ಸಿಎಫ್‌ಒ ಸುರೇಶ್‌ ಇವರು ಪ್ರಭು ಚಾರಿಟೆಬಲ್‌ ಟ್ರಸ್ಟ್‌ನ

ಸಂಸ್ಥಾಪಕರಾದ ಅಜಿತ್‌ ಪ್ರಭು ದಂಪತಿಯನ್ನು ಪರಿಚಯಿಸಿ, ಸಂಸ್ಥೆಯ ಸಿದ್ದಿ-ಸಾಧನೆಗಳನ್ನು ವಿವರಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಅಜಿತ್‌ ಪ್ರಭು ಅವರು, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ಕೊಡುವುದು ನಮ್ಮ ಟ್ರಸ್ಟ್‌ನ ಉದ್ದೇಶವಾಗಿದೆ. ಕಲಿಯುವ ತುಡಿತವಿದ್ದು, ಶಿಕ್ಷಣದಿಂದ ವಂಚಿತರಾದ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡುವುದು ನಮ್ಮ ಕರ್ತವ್ಯವಾಗಿದೆ. ಎಲ್ಲರು ಸುಶಿಕ್ಷಿತರಾದಾಗ ಮಾತ್ರ ಸಮಾಜ, ದೇಶ ಅಭಿವೃದ್ಧಿಯತ್ತ ಸಾಗಲು ಸಾಧ್ಯ. ವಿದ್ಯಾರ್ಥಿಗಳು ಉತ್ತಮ ಶಿಕ್ಷಣವನ್ನು ಪಡೆದು ಆದರ್ಶ ಪ್ರಜೆಗಳಾಗಿ ಬಾಳಬೇಕು ಎಂದು ಕರೆನೀಡಿದರು.

Advertisement

ವೇದಿಕೆಯಲ್ಲಿ ಬಮಿತಾ ಎ. ಪ್ರಭು, ಶೈನಿ ಪ್ರಭು ಇವರು ಉಪಸ್ಥಿತರಿದ್ದರು. ಸಂಸ್ಥೆಯ ಕಾರ್ಯದರ್ಶಿ ಗಣೇಶ್‌ ಶ್ಯಾನ್‌ಭಾಗ್‌ ಇವರು ವಂದಿಸಿದರು. ಜಿಎಸ್‌ಬಿ ಸ್ಕಾಲ್‌ಶಿಪ್‌ ಲೀಗ್‌ ಸಂಸ್ಥೆಯ 100 ವರ್ಷಗಳ ಇತಿಹಾಸವನ್ನು ಹೊಂದಿದ್ದು, ಪ್ರಾರಂಭದ ದಿನಗಳಿಂದಲೂ ಸಂಸ್ಥೆಯು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು ನೀಡುತ್ತಾ ಬರುತ್ತಿದೆ.

ಯಾವುದೇ ರೀತಿಯ ಭೇದ-ಭಾವವನ್ನು ಮಾಡದೆ ಇಲ್ಲಿ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನವನ್ನು ಪಡೆದಿದ್ದಾರೆ. ಕಾರ್ಮಿಕರು, ಟೈಲರ್‌ಗಳು, ಹೊಟೇಲ್‌ ಕಾರ್ಮಿಕರು, ರಿಕ್ಷಾ ಡ್ರೈವರ್‌ಗಳು, ಸಣ್ಣ ಮಂದಿರದ ಅರ್ಚಕರು, ರಸ್ತೆಬದಿಯಲ್ಲಿ ಟೀ ಮಾರುವರು, ರೈತರು ಸೇರಿದಂತೆ ಇನ್ನಿತರ ಆರ್ಥಿಕವಾಗಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಸಂಸ್ಥೆಯು ವಿದ್ಯಾರ್ಥಿ ವೇತನವನ್ನು ನೀಡುತ್ತಾ ಬರುತ್ತಿದೆ.

ಸಿಂಗಾಪುರದ ಅಜಿತ್‌ ಪ್ರಭು ಎಂಬವರ ನೇತೃತ್ವದ ಪ್ರಭು ಚಾರಿಟೇಬಲ್‌ ಟ್ರಸ್ಟ್‌ ಸಂಸ್ಥೆಯು ಇದೇ ಧ್ಯೇಯೋದ್ಧೇಶದಿಂದ ಹುಟ್ಟಿಕೊಂಡಿದ್ದು, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ನೆರವು ನೀಡುತ್ತಿದ್ದು, ಜಿಎಸ್‌ಬಿ ಸ್ಕಾಲರ್‌ಶಿಪ್‌ ಲೀಗ್‌ ಸಂಸ್ಥೆಗೂ ಸಹಕರಿಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next