Advertisement

ವಸಾಯಿರೋಡ್‌ ಜಿಎಸ್‌ಬಿ ಬಾಲಾಜಿ ಸೇವಾ ಸಮಿತಿ: ಶ್ರೀ ವೆಂಕಟೇಶ ವ್ರತಾಚರಣೆ

11:29 AM Apr 30, 2022 | Team Udayavani |

ವಸಾಯಿ: ಜಿಎಸ್‌ಬಿ ಬಾಲಾಜಿ ಸೇವಾ ಸಮಿತಿ ವತಿಯಿಂದ ಕಳೆದ 2 ವರ್ಷಗಳಿಂದ ಕೊರೊನಾ ಮಹಾಮಾರಿಯಿದಾಗಿ ಮುಂದೂಡ ಲಾಗಿದ್ದ ಪ್ರತೀವರ್ಷ ಮಂದಿರದ ಪ್ರತಿಷ್ಠಾ ವರ್ಧಂತಿ ಪ್ರಯುಕ್ತ ಆಚರಿಸಲಾಗುವ ಶ್ರೀ ವೆಂಕಟೇಶ ವ್ರತಾಚರಣೆ ಎ. 24ರಂದು ಸಮಿತಿಯ ಬಾಲಾಜಿ ಸಭಾಗೃಹದಲ್ಲಿ ನಡೆಯಿತು.

Advertisement

ಪ್ರಾರಂಭದಲ್ಲಿ ಗಿರಿಧರ ಭಟ್‌ ಪೌರೋಹಿತ್ಯದಲ್ಲಿ ಎರಡು ಕಲಶಗಳನ್ನು ಪ್ರತಿಷ್ಠಾಪನೆ ಮಾಡಲಾ

ಯಿತು. ಗಿರಿನಾ ಮತ್ತು ಕಾರ್ತಿಕ್‌ ಪೈ ಹಾಗೂ ಸಮೀಕ್ಷಾ ಮತ್ತು ಸಿದ್ದೇಶ್‌ ಪ್ರಭು ದಂಪತಿಗಳು ಪೂಜೆಯ ಯಜಮಾನತ್ವ ವಹಿಸಿದ್ದರು. ಬೆಳಗ್ಗೆ 10ರಿಂದ ದೇವತಾ ಪ್ರಾರ್ಥನೆ ಬಳಿಕ ಪೂಜೆ ಆರಂಭ ಗೊಂಡಿತು. ಸಮಿತಿಯ ಭಜನ ಮಂಡಳಿಯವರಿಂದ ಮಧ್ಯಾಹ್ನ 12.30ರ ವರೆಗೆ ಸುಶ್ರಾವ್ಯ ಭಜನ ಕಾರ್ಯಕ್ರಮ ನಡೆಯಿತು.

ಸಮಿತಿಯ ಸಂಚಾಲಕ ದೇವೇಂದ್ರ ಭಕ್ತ ಸ್ವಾಗತಿಸಿ ಮಾತನಾಡಿ, ಕೊರೊನಾ ಮಹಾಮಾರಿಯಿಂದಾಗಿ ಕಳೆದ ವರ್ಷ ಮಂದಿರದ ಎಲ್ಲ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಿದರೂ ಸಮಾಜಪರ ಕಾರ್ಯಕ್ರಮ

ಗಳು ನಿರಂತರವಾಗಿ ನಡೆದಿವೆ. ಮುಂಬರುವ ದಿನಗಳಲ್ಲಿ  ಮಂದಿರದಲ್ಲಿ  ಎಂದಿನಂತೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಸಮಾಜ ಬಾಂಧವರು, ಭಕ್ತರು ಸಹಕರಿಸಬೇಕು ಎಂದರು.

Advertisement

ಶ್ರೀ ವೆಂಕಟೇಶ ದೇವರಿಗೆ, ಶ್ರೀ ಬಾಲಾಜಿ ಹಾಗೂ ಇತರ ಪರಿವಾರ ದೇವರಿಗೆ ಆರತಿ ಬೆಳಗಿದ ಬಳಿಕ ಯಜಮಾನತ್ವ ವಹಿಸಿದ ದಂಪತಿಗಳಿಗೆ ಮತ್ತು ಸಮಾಜದ ಪರವಾಗಿ ಸಮಿತಿಯ ಅಧ್ಯಕ್ಷ ಹಾಗೂ ಆಡಳಿತ ಮಂಡಳಿಯ ಸದಸ್ಯರಿಗೆ ಮಹಾಪ್ರಸಾದ ವಿತರಿಸಲಾಯಿತು. ಬಳಿಕ ಭಕ್ತರಿಗೆ ಪ್ರಸಾದ ವಿತರಿಸಿ ಹರಸಲಾಯಿತು. ವಾಶಿಯಲ್ಲಿ  ಕಾಶೀ ಮಠಾಧೀಶರ ವಸಂತ ಮಾಸ ಮಹೋತ್ಸವ ಪ್ರಯುಕ್ತ ನಡೆದ ಆಲ್‌ ಮುಂಬೈ ಜಿಎಸ್‌ಬಿ ಕ್ರಿಕೆಟ್‌ ಟೂರ್ನಮೆಂಟ್‌ನಲ್ಲಿ  ಪ್ರಥಮ ಸ್ಥಾನ ಪಡೆದ ಬಾಲಾಜಿ ಸೇವಾ ಸಮಿತಿಯ ಯುವ ವಿಭಾಗ ತಂಡದ ನಾಯಕ ಅಮೆಯ ಪೈ ಹಾಗೂ ತಂಡದ ಇತರ ಸದಸ್ಯರನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರಸಾದ ರೂಪದಲ್ಲಿ ಅನ್ನಸಂತರ್ಪಣೆ ನೆರವೇರಿತು. ವಿನಾಯಕ್‌ ಪೈ, ದೇವದಾಸ್‌ ಭಟ್‌ ಹಾಗೂ ಪ್ರಕಾಶ್‌ ಶೆಣೈ ಅವರು ಶ್ರೀ ವೆಂಕಟೇಶ ದೇವರ ಮಂಟಪವನ್ನು ಅಲಂಕರಿಸಿದ್ದು, ಎಲ್ಲರ ಶ್ಲಾಘನೆಗೆ ಪಾತ್ರರಾದರು. ವಸಾಯಿ ಹಾಗೂ ಪರಿಸರದ ನಲಸೋಪರದಿಂದ ಹೆಚ್ಚಿನ ಸಂಖ್ಯೆಯಲ್ಲಿ  ಭಕ್ತರು ಪಾಲ್ಗೊಂಡಿದ್ದರು. ಸಮಿತಿಯ ಸಂಚಾಲಕ ದೇವೇಂದ್ರ ಭಕ್ತ, ಅಧ್ಯಕ್ಷ ಕೃಷ್ಣ ಕಾಮತ್‌, ಕಾರ್ಯದರ್ಶಿ ಪುರುಷೋತ್ತಮ್‌ ಶೆಣೈ, ಕೋಶಾಧಿಕಾರಿ ಲಕ್ಷ್ಮಣ್‌ ರಾವ್‌, ಆಡಳಿತ ಮಂಡಳಿಯ ಇತರ ಸದಸ್ಯರು, ಮಹಿಳಾ ವಿಭಾಗ ಮತ್ತು ಯುವ ವಿಭಾಗದ ಸದಸ್ಯರು, ಸಮಾಜ ಬಾಂಧವರು, ಸದಸ್ಯರು, ದಾನಿಗಳ ಸಹಕಾರದಿಂದ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.

 

Advertisement

Udayavani is now on Telegram. Click here to join our channel and stay updated with the latest news.

Next