ಚಿಕ್ಕಬಳ್ಳಾಪುರ: ಜಿಲ್ಲಾದ್ಯಂತ ಒಂದಡೆ ಗೃಹಲಕ್ಷ್ಮಿ ಯೋಜನೆ ನೋಂದಣಿಗಾಗಿ ಮನೆ ಯಾಜಮಾನಿಯರು ಇನ್ನೂ ಪರದಾಟ ನಡೆಸುತ್ತಿದ್ದರೆ ಮತ್ತೂಂದಡೆ ಇ-ಕೆವೈಸಿ ಸರಿ ಇದ್ದರೂ 20 ಸಾವಿರ ಮಂದಿ ಫಲಾನುಭವಿಗಳಿಗೆ ಡಿಬಿಟಿ ಮೂಲಕ ವರ್ಗಾಯಿಸಿದ್ದ ಗೃಹಲಕ್ಷ್ಮಿ ಯೋಜನೆ ಹಣ ಖಜಾನೆಗೆ ಮರಳಿ ಬಂದಿದೆ.
ಹೌದು, ಜಿಲ್ಲಾದ್ಯಂತ ಗೃಹಲಕ್ಷ್ಮಿ ಯೋಜನೆ ಚಾಲನೆಗೊಂಡ ಬಳಿಕ ಇಲ್ಲಿವರೆಗೂ ಕೇವಲ 95,421 ಮಂದಿ ಫಲಾನುಭವಿಗಳಿಗೆ ಮಾತ್ರ ಗೃಹಲಕ್ಷ್ಮೀ ಹಣ ಜಮೆ ಆಗಿದ್ದು, ಉಳಿದವರಿಗೆ ಗೃಹಲಕ್ಷ್ಮೀ ಹಣ ತಲುಪಲು ತಾಂತ್ರಿಕ ಸಮಸ್ಯೆ ಉಂಟಾಗಿ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಪಡಿತರ ಚೀಟಿಯಲ್ಲಿ ಮನೆ ಯಾಜಮಾನಿ ಎಂದು ನಮೂದಾಗಿದ್ದರೆ ಹಾಗೂ ಬ್ಯಾಂಕ್‌ಗೆ ಆಧಾರ್ ಆಪ್ ಡೇಟ್ ಇದ್ದರೆ ಮಾತ್ರ ಗೃಹಲಕ್ಷ್ಮಿಯೋಜನೆ ನೊಂದಣಿ ಕಾರ್ಯ ಯಶಸ್ವಿ ಆಗುತ್ತದೆ. ಆದರೆ -ಕೆವೈಸಿ ಸರಿ ಇದ್ದು ನೋಂದಣಿ ಯಶಸ್ವಿಯಾದ 20 ಸಾವಿರ ಮಹಿಳೆಯರಿಗೆ ಜಿಲ್ಲಾ ಖಜಾನೆ ಮೂಲಕ ಕಳುಹಿಸಿದ ಗೃಹಲಕ್ಷ್ಮಿ ಹಣ ಅವರ ಬ್ಯಾಂಕ್ ಖಾತೆಗೆ ಜಮೆ ಆಗದೇ ವಾಪಸ್ ಬಂದಿದೆ.
ಇದಕ್ಕೆ ತಾಂತ್ರಿಕ ಸಮಸ್ಯೆಯೆ ಕಾರಣ ಆಗಿದ್ದು ಹೀಗಾಗಿ ಗೃಹಲಕ್ಷ್ಮಿ ಯೋಜನೆ ಅನುಷ್ಟಾನಕ್ಕೆ ಒಂದು ಕಡೆ ಸರ್ವರ್ ಸಮಸ್ಯೆ ಮತ್ತೂಂದು ಕಡೆ ಇ-ಕೆವೈಸಿ ಕಿರಿಕಿರಿಯಿಂದ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಾಗಲು ಕಾಯುತ್ತಿರುವ ಮಹಿಳೆಯರನ್ನು ಅಕ್ಷರಶಃ ತೀವ್ರ ಹೈರಾಣಾಗಿಸುತ್ತಿದೆ. ಎಲ್ಲವೂ ಸರಿ ಇದ್ದರೂ ಇನ್ನೂ ಜಿಲ್ಲೆಯಲ್ಲಿ ಸುಮಾರು 1ಲಕ್ಷಕ್ಕೂ ಅಧಿಕ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಸೇರಿಲ್ಲ.
ಗೃಹಲಕ್ಷ್ಮಿ ಹಣ ಪರಿಶೀಲನೆಗೆ ಬ್ಯಾಂಕ್‌ಗಳಿಗೆ ಅಲೆದಾಟ!: ಸರ್ಕಾರ ಪ್ರತಿ ಮನೆಯ ಯಾಮಾನಿಗೆ ಮಾಸಿಕ ಗೃಹಲಕ್ಷ್ಮಿ ಯೋಜನೆಯಡಿ 2000 ರೂ. ಹಣ ಜಮೆ ಮಾಡುವುದಾಗಿ ಘೋಷಿಸಿ ಕಳೆದ ಆ.30 ರಂದು ಯೋಜನೆಗೆ ಚಾಲನೆ ನೀಡಿದ ಬೆನ್ನಲೇ ಜಿಲ್ಲೆಯಲ್ಲಿ ಇಲ್ಲಿವರೆಗೂ ಸುಮಾರು 1.50 ಲಕ್ಷ ಮಂದಿಗೆ ಗೃಹಲಕ್ಷ್ಮೀ ಯೋಜನೆಯಡಿ ಹಣ ಜಮೆ ಆಗಿದೆ. ಆದರೆ ಜಿಲ್ಲೆಯಲ್ಲಿ ಯೋಜನೆಗೆ ಬರೋಬ್ಬರಿ 2.51 ಲಕ್ಷ ಮಂದಿ ನೋಂದಾಯಿಸಿಕೊಂಡಿರುವುದರಿಂದ ಮಹಿಳೆಯರು ಗೃಹಲಕ್ಷ್ಮೀ ಹಣ ಬಂದಿರುವುದನ್ನು ಖಚಿತಪಡಿಸಿ ಕೊಳ್ಳಲು ಬ್ಯಾಂಕ್‌ಗಳಿಗೆ ಲಗ್ಗೆ ಇಟ್ಟು ಖಾತೆ ಪರಿಶೀಲಿಸಿಕೊಳ್ಳುತ್ತಿದ್ದಾರೆ.
ಜಿಲ್ಲೆಯಲ್ಲಿ ಇನ್ನೂ 1 ಲಕ್ಷ ಗೃಹಲಕ್ಷ್ಮಿಯರಿಗೆ ಸರ್ಕಾರ 2000 ರೂ. ಹಣ ಜಮೆ ಮಾಡುವುದನ್ನು ಬಾಕಿ ಉಳಿಸಿಕೊಂಡಿದೆ. ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ಹೆಸರು ನೋಂದಾಯಿಸಿಕೊಂಡಿರುವ ಸುಮಾರು 20 ಸಾವಿರ ಮಂದಿ ಫಲಾನುಭವಿಗಳಿಗೆ ವರ್ಗಾವಣೆ ಮಾಡಲಾಗಿದ್ದ ಗೃಹಲಕ್ಷ್ಮಿ ಯೋಜನೆಯ ಹಣ ಪುನಃ ಖಜಾನೆಗೆ ವಾಪಸ್ ಬಂದಿದೆ
. -ಅಶ್ವತ್ಥಮ್ಮ, ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಚಿಕ್ಕಬಳ್ಳಾಪುರ
-ಕಾಗತಿ ನಾಗರಾಜಪ್ಪ