Advertisement

GruhaLakshmi: ತಾಲೂಕಿನ 949 ಮಹಿಳೆಯರಿಗೆ ಬರದ ಗೃಹಲಕ್ಷ್ಮಿ ಹಣ

04:33 PM Sep 25, 2023 | Team Udayavani |

ಗುಡಿಬಂಡೆ: ರಾಜ್ಯ ಕಾಂಗ್ರೆಸ್‌ ಸರ್ಕಾರ ಚುನಾವಣಾ ಪೂರ್ವ ಪಂಚ ಗ್ಯಾರಂಟಿ ಭಾಗ್ಯಗಳನ್ನು ಘೋಷಣೆ ಮಾಡಿ, ಅ ಧಿಕಾರಕ್ಕೆ ಬಂದ ಮೇಲೆ ಒಂದೊಂದೇ ಭಾಗ್ಯಗಳನ್ನು ಜಾರಿ ಮಾಡಿದ್ದು, ಅದರಂತೆ ಗೃಹಿಣಿಯರಿಗಾಗಿ ಜಾರಿ ಮಾಡಲಾದ ಗೃಹಲಕ್ಷ್ಮಿ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನಲ್ಲಿ ಅದ್ಧೂರಿಯಾಗಿ ಚಾಲನೆ ನೀಡಿದರು. ಆದರೆ, ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಿ ಒಂದು ತಿಂಗಳು ಕಳೆದರೂ ತಾಲೂಕಿನ 949 ಗೃಹಿಣಿಯರಿಗೆ ಗೃಹಲಕ್ಷ್ಮಿಯೋಜನೆಯ ಹಣ ಮಾತ್ರ ಇನ್ನೂ ಜಮಾ ಆಗಿಲ್ಲ. ಹಣ ಖಾತೆಗೆ ಬರದ ಕಾರಣ ಅರ್ಜಿ ಸಲ್ಲಿಸಿದ್ದ ಮಹಿಳೆ‌ಯರು ಸೈಬರ್‌ ಸೆಂಟರ್‌ ಗಳಿಗೆ‌ ಅಲೆದಾಡುತ್ತಿರುವ ದೃಶ್ಯಗಳು ತಾಲೂಕಿನಲ್ಲಿ ಸಾಮಾನ್ಯವಾಗಿವೆ.

Advertisement

ತಾಲೂಕಿನಲ್ಲಿ 10 ಸಾವಿರಕ್ಕೂ ಹೆಚ್ಚು ಅರ್ಜಿ: ಗುಡಿಬಂಡೆ ತಾಲೂಕಿನ ಪಡಿತರ ಚೀಟಿಯನ್ನು ಹೊಂದಿರುವ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಿದ ಮೇಲೆ ಇಲ್ಲಿಯವರೆಗೂ 10,520 ಮಹಿಳೆಯರು ಅರ್ಜಿಗಳನ್ನು ಸಲ್ಲಿಸಿದ್ದಾರೆ.

9 ಸಾವಿರ ಜನರಿಗೆ ಯೋಜನೆ ಹಣ: ತಾಲೂಕಿನಲ್ಲಿ ಅರ್ಜಿ ಸಲ್ಲಿಸಿಕೊಂಡಿದ್ದ ಒಟ್ಟು 10,520 ಫಲಾನುಭವಿಗಳ ಪೈಕಿ ಒಂದನೇ ಮಾಹೆಯ ಯೋಜನೆಯ ಹಣ 9,571 ಫಲಾನುಭವಿಗಳ ಖಾತೆಗೆ ಜಮಾಗೊಂಡಿದ್ದು, ಇನ್ನೂ 949 ಫಲಾನುಭವಿಗಳಿಗೆ ಹಣ ಬರಬೇಕಾಗಿದೆ. ಖಾತೆಗಳ ಪರಿಶೀಲನೆ: ತಾಲೂಕಿನಲ್ಲಿ ಇನ್ನೂ ಸಹ 949 ಫಲಾನುಭವಿಗಳಿಗೆ ಹಣ ವರ್ಗಾವಣೆ ಯಾಗಬೇಕಾಗಿದ್ದು, ಈ ಫಲಾನುಭವಿಗಳಿಗೆ ಹಣ ಜಮಾ ಮಾಡಲು 885 ಅರ್ಜಿದಾರರ ಖಾತೆಗಳ ಪರಿಶೀಲನೆಯಲ್ಲಿದ್ದರೇ, 64 ಅರ್ಜಿದಾರರ ಬ್ಯಾಂಕ್‌ ಖಾತೆಗಳು ಆಧಾರ್‌ ಜೋಡಣೆ ಮತ್ತು ಇತರೆ ತಾಂತ್ರಿಕ ತೊಂದರೆಯಲ್ಲಿಯವೆ ಎಂದು ತಿಳಿದಿದ್ದು, ಅರ್ಜಿದಾರರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯವರು ದೂರವಾಣಿ ಕರೆ ಮಾಡಿ, ಬ್ಯಾಂಕ್‌ ಖಾತೆಗಳನ್ನು ಸರಿಪಡಿಸಿಕೊಳ್ಳುವಂತೆ ತಿಳಿಸುತ್ತಿದ್ದಾರೆ ಎನ್ನಲಾಗಿದೆ.

2ಕಂತು ಹಣ ಜಮಾ: ಗೃಹಲಕ್ಷ್ಮಿಯೋಜನೆಗೆ ಅರ್ಜಿ ಸಲ್ಲಿಸಿಕೊಂಡು ಮೊದಲನೆ ಕಂತು ಬಾರದೆ ಇರುವ ಮಹಿಳೆಯರು ತಮ್ಮ ಬ್ಯಾಂಕ್‌ ಖಾತೆ ಹಾಗೂ ಆಧಾರ್‌ ಕಾರ್ಡ್‌ ಲಿಂಕ್‌ ಗಳನ್ನು ಸರಿಪಡಿಸಿಕೊಂಡರೇ, ಒಂದನೇ ಕಂತು ಬಾರದೇ ಇರುವ ಮಹಿಳೆಯರಿಗೆ ಎರಡು ಕಂತಿನ ಹಣ ಅವರ ಖಾತಗೆ ಜಮಾ ಆಗಲಿದೆ.

ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಿಕೊಂಡಿರುವ ಫಲಾನುಭವಿಗಳಲ್ಲಿ ಯಾರಿಗೆ ಮೊದಲ ಮಾಹೆಯ ಹಣ ಬಂದಿಲ್ಲ ಅಂತಹವರು ತಮ್ಮ ಬ್ಯಾಂಕ್‌ಗಳಲ್ಲಿ ಇ-ಕೆವೈಸಿ ಹಾಗೂ ಆಧಾರ್‌ ಜೋಡಣೆ ಮಾಡಿಕೊಂಡರೆ ಯೋಜನೆ ಹಣ ಜಮಾ ಆಗಲಿದೆ. ಅಶ್ವತ್ಥಮ್ಮ, ಜಿಲ್ಲಾ ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಚಿಕ್ಕಬಳ್ಳಾಪುರ

Advertisement

-ನವೀನ್‌ ಕುಮಾರ್‌.ಎನ್‌

Advertisement

Udayavani is now on Telegram. Click here to join our channel and stay updated with the latest news.

Next