ದಾವಣಗೆರೆ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿತ ಗೃಹಲಕ್ಷ್ಮೀ ಯೋಜನೆಯ ಅರ್ಜಿ ಸಲ್ಲಿಕೆಯ ಮೊದಲ ದಿನವೇ ದಾವಣಗೆರೆಯಲ್ಲಿ ಮಹಿಳೆಯಿಂದ ತೀವ್ರ ಪ್ರತಿರೋಧ ವ್ಯಕ್ತವಾಗಿದೆ.
ಪಡಿತರ ಚೀಟಿ ನಂಬರನ್ನು ಎಸ್ ಎಂಎಸ್ ಮಾಡಿದ ನಂತರ ಅರ್ಜಿ ಸಲ್ಲಿಕೆಯ ದಿನಾಂಕ, ಸ್ಥಳ, ಸಮಯದ ಸಂದೇಶ ಬಂದ ನಂತರವೇ ಅರ್ಜಿ ಸಲ್ಲಿಸಬೇಕು ಎಂಬ ನಿಯಮದ ಮಾಹಿತಿ ಇಲ್ಲದೆ ಅನೇಕ ಮಹಿಳೆಯರು ದಾವಣಗೆರೆ ಒನ್ ಕೇಂದ್ರಕ್ಕೆ ಆಗಮಿಸಿದ್ದರು.
ದಾವಣಗೆರೆ ಒನ್ ಸಿಬ್ಬಂದಿ ಅರ್ಜಿ ಸ್ವೀಕರಿಸಲು ಇರುವಂತಹ ನಿಯಮದ ಬಗ್ಗೆ ಮಾಹಿತಿ ನೀಡುತ್ತಿದ್ದರಿಂದ ಕುಪಿತಗೊಂಡ ಅನೇಕರು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ:Gymನಲ್ಲಿ ವರ್ಕ್ ಔಟ್ ಮಾಡುವ ವೇಳೆ ಕುಸಿದು ಬಿದ್ದು ಯುವಕ ಮೃತ್ಯು… ಜಿಮ್ ಮ್ಯಾನೇಜರ್ ಬಂಧನ
ಸರ್ಕಾರದ ನಿಯಮದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಯೋಜನೆ ಜಾರಿ ಮಾಡಿರುವುದರಿಂದ ಮಹಿಳೆಯರಿಗೆ ಅನುಕೂಲ ಆಗುತ್ತದೆ. ಆದರೆ, ಮೊಬೈಲ್ ನಿಂದ ಮೆಸೇಜ್ ಕಳಿಸಿದ ಮೇಲೆ ತಿಳಿಸಿದ ದಿನ, ಟೈಮ್, ಸ್ಥಳಕ್ಕೆ ಹೋಗಿ ಅಪ್ಲಿಕೇಶನ್ ಕೊಡಬೇಕೆನ್ನುವ ನಿಯಮ ಮಾಡಿದ್ದು ಸರಿ ಅಲ್ಲ. ಒಂದೇ ಬಾರಿಗೆ ಅರ್ಜಿ ತೆಗೆದುಕೊಂಡರೆ ಅನುಕೂಲ ಆಗುತ್ತದೆ. ಮೊಬೈಲ್ ನಿಂದ ಮೆಸೇಜ್ ಕಳಿಸಬೇಕು ಎನ್ನುವುದು ಸರಿಯಲ್ಲ. ಕೆಲಸ ಕಾರ್ಯ ಬಿಟ್ಟು ಓಡಾಡ ಬೇಕಾಗುತ್ತದೆ. ಕೂಡಲೇ ಮೊಬೈಲ್ ನಿಂದ ಮೆಸೇಜ್ ಕಳಿಸುವುದನ್ನು ಕೈ ಬಿಡಬೇಕು. ಅರ್ಜಿ ತೆಗೆದುಕೊಳ್ಳುವ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು