Advertisement
ಗೃಹಲಕ್ಷ್ಮಿ ಯೋಜನೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು ಮನೆ ಯಜಮಾನಿಗೆ 2,000 ರೂಗಳನ್ನು ಅವರ ಜೀವನಕ್ಕೆ ಉಪಯೋಗವಾಗಲಿ ಎಂದು ಕೊಡುತ್ತಿದ್ದೇವೆ ಇದರೊಂದಿಗೆ ನಾರಿ ಶಕ್ತಿ, ಅನ್ನಭಾಗ್ಯ, ಗೃಹಜೋತಿ ಯೋಜನೆಗಳನ್ನು ಕೂಡ ನೀಡಲಾಗಿದೆ ಎಂದು ಹೇಳಿದರು.
Related Articles
ಕೇಂದ್ರ ಸರಕಾರ ಗ್ಯಾಸ್ ಸಿಲಿಂಡರ್ ಬೆಲೆಯನ್ನು 200 ರೂಪಾಯಿ ಕಡಿತಗೊಳಿಸುವ ವಿಚಾರದ ಬಗ್ಗೆ ಹೇಳಿಕೆ ನೀಡಿದ ಸಚಿವರು ಪ್ರಧಾನಿ ನರೇಂದ್ರ ಮೋದಿ ಪುಕ್ಸಟ್ಟೆ ಗ್ಯಾಸ್ ಸಿಲಿಂಡರ್ ಕೊಡುವುದಾಗಿ ಹೇಳಿದ್ದರು ಮೊದಲು ಅದನ್ನು ಮಾಡಲಿ ಆಗ ನಾನು ಬಿಜೆಪಿಯವರಿಗೆ ಹಾರ ಹಾಕಿ ಸನ್ಮಾನಿಸುತ್ತೇನೆ ಎಂದು ಹೇಳಿದರು.
Advertisement
ಕಾವೇರಿ ನದಿ ನೀರು ಹಂಚಿಕೆ ವಿವಾದ ವಿಚಾರಡಾ ಬಗ್ಗೆ ಮಾತನಾಡಿದ ಅವರು ಪ್ರಕರಣ ನ್ಯಾಯಾಲಯದಲ್ಲಿದೆ. ನಾವು ಮಾಜಿ ಸಿಎಂ ಬಂಗಾರಪ್ಪನವರನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕು ಕಾನೂನನ್ನು ನಾವು ಗೌರವಿಸಬೇಕಾಗಿದೆ ನ್ಯಾಯಾಲಯ ಕೂಡ ನಮ್ಮ ವಾಸ್ತವಿಕತೆ ಅರಿತು ತೀರ್ಪು ನೀಡಲಿ, ಕರ್ನಾಟಕ ಮತ್ತು ತಮಿಳುನಾಡುಗಳಲ್ಲಿ ಇರುವ ರೈತರೆಲ್ಲರೂ ನಮ್ಮ ದೇಶದ ರೈತರೇ ರಾಜ್ಯದಲ್ಲಿ ಮಳೆಯಿಲ್ಲದೆ ಬರಗಾಲದ ಪರಿಸ್ಥಿತಿ ಎದುರಾಗಿದೆ ಶಿವಮೊಗ್ಗ ಜಿಲ್ಲೆಯನ್ನು ಸಂಪೂರ್ಣ ಬರಗಾಲಪೀಡಿತ ಜಿಲ್ಲೆಯೆಂದು ಘೋಷಣೆ ಮಾಡಬೇಕಿದೆ ಈ ಹಿಂದೆ ಕೂಡ ಎರಡು ಮೂರು ವರ್ಷಗಳ ಕಾಲ ಬರಗಾಲ ಬಂದಿತ್ತು ರಾಷ್ಟ್ರೀಯ ಕಾನೂನುಗಳನ್ನು ನಾವು ಬದಲಾವಣೆ ಮಾಡಲು ಸಾಧ್ಯವಿಲ್ಲ ಬರಗಾಲದ ಹಿನ್ನೆಲೆ ಕೇಂದ್ರ ಮತ್ತು ರಾಜ್ಯದಿಂದ ಸಿಗುವ ಸೌಲಭ್ಯಗಳನ್ನು ತರಬೇಕಾಗಿದೆ ಎಂದರು.
ಬಿಜೆಪಿ ಚಾರ್ಜ್ ಶೀಟ್ ಬಿಡುಗಡೆ ವಿಚಾರಡಾ ಬಗ್ಗೆ ಹೇಳಿಕೆ ನೀಡಿದ ಸಚಿವರು ಬಿಜೆಪಿಯವರು ಪಟ್ಟಿ ಬಿಡುಗಡೆ ಮಾಡಿದರೆ ಆಗುವುದಿಲ್ಲ ಅದರಲ್ಲಿ ಏನಾದರೂ ಅಂಶಗಳಿರಬೇಕು, ಸೋತವರು ಟೀಕೆ ಟಿಪ್ಪಣಿ ಮಾಡದೆ ಮತ್ತೇನು ಮಾಡುತ್ತಾರೆ ಭ್ರಷ್ಟಾಚಾರ ನಡೆದಿದ್ದರೆ ನಿಖರ ದಾಖಲೆ ನೀಡಲಿ ಅದನ್ನು ತನಿಖೆ ಮಾಡಿ ಉತ್ತರ ನೀಡುತ್ತೇವೆ, ಸುಮ್ಮ ಸುಮ್ಮನೆ ಹೀಗೆ ಮಾಡುವುದು ಬಿಜೆಪಿಯವರಿಗೆ ಒಂದು ರೋಗ ಎಂದು ಹೇಳಿದರು.
ಇದನ್ನೂ ಓದಿ: ISRO ವಿಜ್ಞಾನಿ ಎಂದು ಮಾಧ್ಯಮಗಳಿಗೆ ಸಂದರ್ಶನ ನೀಡಿದ ಟ್ಯೂಷನ್ ಶಿಕ್ಷಕನ ಬಂಧನ!