Advertisement

‘ಅಸಹಿಷ್ಣುತೆಯಿಂದ ಸಮಾಜ ಕಲುಷಿತ’

01:10 AM Aug 21, 2019 | Team Udayavani |

ನವದೆಹಲಿ: ಕೋಮುದ್ವೇಷದ ಭಾವನೆಯಿಂದಾಗಿ, ದೇಶದಲ್ಲೆಡೆ ಅಸಹಿಷ್ಣುತೆ, ಸಿದ್ಧಾಂತಗಳ ಆಧಾರದಲ್ಲಿ ಸಮಾಜದ ವಿಭಜನೆ, ನಿರ್ದಿಷ್ಟ ಸಮುದಾಯಗಳ ಮೇಲಿನ ಹಿಂಸಾಚಾರಗಳು ಹೆಚ್ಚಾಗುತ್ತಿವೆ. ಇಂಥ ಅಹಿತಕರ ಸಂಸ್ಕೃತಿಯಿಂದ ದೇಶದ ಸಾಮಾಜಿಕ ವ್ಯವಸ್ಥೆಯೇ ಹಾಳಾಗುತ್ತಿದೆ ಎಂದು ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಹೇಳಿದ್ದಾರೆ.

Advertisement

ರಾಜೀವ್‌ಗಾಂಧಿಯವರ 75ನೇ ಜನ್ಮದಿನದ ಪ್ರಯುಕ್ತ, ಮಂಗಳವಾರ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, ”ದೇಶದ ಸಂವಿಧಾನದಲ್ಲಿ ಶಾಂತಿ ಪಾಲನೆ, ರಾಷ್ಟ್ರೀಯ ಏಕತೆ ಹಾಗೂ ಕೋಮು ಸೌಹಾರ್ದತೆಯಂಥ ಯಾವ ವಿಚಾರಗಳನ್ನು ಪಾಲಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಲಾಗಿದೆಯೋ, ಅದಕ್ಕೆ ತದ್ವಿರುದ್ಧವಾದ, ಅಸಹ್ಯಕರ ಸಂಸ್ಕೃತಿಯೊಂದು ದೇಶದಲ್ಲಿ ಅವತರಿಸಿದೆ. ಇಂಥ ಹೀನ ಸಂಸ್ಕೃತಿಯನ್ನು ಹತ್ತಿಕ್ಕಲು ನಾವೇನು ಮಾಡಬೇಕು ಎಂದು ಎಲ್ಲಾ ದೇಶಬಾಂಧವರೂ ಆಲೋಚಿಸಬೇಕಿದೆ” ಎಂದರು.

Advertisement

Udayavani is now on Telegram. Click here to join our channel and stay updated with the latest news.

Next