Advertisement
ಅಡಿಕೆ ಕೃಷಿಗೂ ರೋಗಸುಳ್ಯ ತಾಲೂಕಿನಲ್ಲಿ ಅಡಿಕೆ ಮತ್ತು ರಬ್ಬರ್ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಸುಮಾರು 25 ವರ್ಷಗಳ ಹಿಂದೆ ಸುಳ್ಯ ತಾಲೂಕಿನಲ್ಲಿ ಅಡಿಕೆ ಹಾಗೂ ಭತ್ತವನ್ನು ಬೆಳೆಯಲಾಗುತ್ತಿತ್ತು. ಅಡಿಕೆ ಕೃಷಿಗೆ ಅರಂತೋಡು, ಪೆರಾಜೆ, ತೊಡಿಕಾನ, ಕಲ್ಲುಗುಂಡಿ, ಸಂಪಾಜೆ, ಕೊಯಿನಾಡು ಭಾಗದಲ್ಲಿ ರೋಗ ವ್ಯಾಪಕವಾಗಿ ಹರಡಿರುವ ಪರಿಣಾಮ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ಹಿಂದಿನ ಸರಕಾರ ರಬ್ಬರ್ ಆಮದು ನೀತಿಯನ್ನು ಸಡಿಲಿಸಿರುವುದೇ ಇದಕ್ಕೆ ಕಾರಣ ಎನ್ನುತ್ತಾರೆ ರಬ್ಬರ್ ಕೃಷಿಕರು.
ಸ್ಥಳೀಯವಾಗಿ ಉತ್ಪಾದನ ವೆಚ್ಚ ಒಂದು ಕೆ.ಜಿ.ಗೆ 100 ರೂ.ಗಳಿಗೂ ಅಧಿಕ ಆಗುತ್ತಿದ್ದು, ರಬ್ಬರ್ ಮರಕ್ಕೆ ಹಾಕುವ ಗಮ್, ಪ್ಲಾಸ್ಟಿಕ್ ಹಾಗೂ ಇತರ ಸಾಮಗ್ರಿಗಳ ಬೆಲೆ ಏರಿದೆ. ಸಣ್ಣ ರಬ್ಬರ್ ಬೆಳೆಗಾರರು ತಾವೇ ಟ್ಯಾಪಿಂಗ್ ಮಾಡುತ್ತಿದ್ದು, ಕೂಲಿ ಕಾರ್ಮಿಕರನ್ನು ಆಶ್ರಯಿಸಿದ ಕೆಲವು ರಬ್ಬರ್ ಬೆಳೆಗಾರರು ಈಗಾಗಲೇ ಟ್ಯಾಪಿಂಗ್ ನಿಲ್ಲಿಸಿದ್ದಾರೆ. ಇನ್ನೂ ಕೆಲವರು ಮುಂದಿನ ವರ್ಷದಿಂದ ರಬ್ಬರ್ ಮರದಲ್ಲಿ ಹಾಲು ಕಡಿಮೆಯಾಗಬುದುದೆನ್ನುವ ಭಯದಿಂದ ರಬ್ಬರ್ ಹಾಲು ತೆಗೆಯುತ್ತಿದ್ದಾರೆ. ಉತ್ಪಾದನೆ ಕುಸಿದಿದೆ
ಬೆಳೆಗಾರರ ನಿರುತ್ಸಾಹದಿಂದ ರಬ್ಬರ್ ಕಾರ್ಮಿಕರನ್ನು ಸಂಕಷ್ಟಕ್ಕೆ ದೂಡಿದೆ. ರಬ್ಬರ್ ಟ್ಯಾಪಿಂಗ್ ಕಾರ್ಮಿಕರು ಜೀವನ ನಿರ್ವಹಣೆಗಾಗಿ ಪರ್ಯಾಯ ಕೆಲಸವನ್ನು ಹುಡುಕುತ್ತಿದ್ದಾರೆ. ರಾಜ್ಯದ 60 ಸಾವಿರ ಹೆಕ್ಟೇರ್ ರಬ್ಬರ್ ತೋಟದ ಪೈಕಿ ಶೇ. 50ರಷ್ಟು ದ.ಕ. ಜಿಲ್ಲೆಯಲ್ಲಿದೆ. ಇದೀಗ ರಬ್ಬರ್ ಟ್ಯಾಪಿಂಗ್ ನಿಲ್ಲಿಸಿರುವುದರಿಂದ ದೇಶದಲ್ಲಿ 2 ಲಕ್ಷ ಮೆಟ್ರಿಕ್ ಟನ್ ಮತ್ತು ರಾಜ್ಯದಲ್ಲಿ 10 ಸಾವಿರ ಮೆಟ್ರಿಕ್ ಉತ್ಪಾದನೆ ಕುಸಿದಿದೆ ಎಂದು ಅಂದಾಜಿಲಾಗಿದೆ. ಈ ಹಿಂದೆ ರಾಜ್ಯದಲ್ಲಿ 35 ಸಾವಿರ ಮೆಟ್ರಿಕ್ ಟನ್ ಉತ್ಪಾದನೆ ಆಗುತ್ತಿತ್ತು.
Related Articles
ಕೇರಳ ರಾಜ್ಯದಲ್ಲಿ ಪ್ರತಿ ಕೆ.ಜಿ.ಗೆ 40 ರೂ. ಸರಕಾರ ಪೋತ್ಸಾಹಧನ ನೀಡುತ್ತಿದೆ. ಇದನ್ನು ಕರ್ನಾಟಕ ರಾಜ್ಯ ಸರಕಾರ ಅಳವಡಿಸಿಕೊಳ್ಳಬೇಕೆಂದು ರಬ್ಬರ್ ಬೆಳೆಗಾರರು ಹೇಳುತ್ತಾರೆ. ಈ ಹಿಂದೆ ಅಡಿಕೆ ಜಾಗದಲ್ಲಿ ರಬ್ಬರ್ ಬೆಳೆ ಬಂದಿತ್ತು. ಜತೆಗೆ ವೆನಿಲ್ಲಾ ಬಳ್ಳಿ ಹಬ್ಬಿತ್ತು. ವೆನಿಲ್ಲಾವು ಲಾಭ ತರದ ಹಿನ್ನೆಲೆಯಲ್ಲಿ ಈಗ ಸುಳ್ಯ ತಾಲೂಕಿನ ಕೆಲ ರೈತರು ತಾಳೆ ಬೆಳೆಯಲ್ಲಿ ತಮ್ಮನ್ನು ತೊಡಗಿಸಿದ್ದಾರೆ.
Advertisement
ಕೇಂದ್ರ ವಾಣಿಜ್ಯ ಸಚಿವ ಸುರೇಶ್ ಪ್ರಭು ಅವರು ಸುಳ್ಯಕ್ಕೆ ಬಂದಿದ್ದ ಸಂದರ್ಭ ರಬ್ಬರ್ ಧಾರಣೆ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕೆಂದು ರೈತರು ಮನವಿ ಮಾಡಿಕೊಂಡಿದ್ದರು. ಸಚಿವರು ರಬ್ಬರ್ ಧಾರಣೆಯನ್ನು ಹೆಚ್ಚಿಸಲು ತತ್‌ಕ್ಷಣ ಸಭೆ ಕರೆದು ಕ್ರಮ ಕೈಗೊಳ್ಳಲಾಗುವುದೆಂದು ಭರವಸೆ ನೀಡಿದ್ದರು. ಆದರೆ ಈ ಭರವಸೆ ಇನ್ನೂ ಈಡೇರಿಲ್ಲ ಎಂದು ರಬ್ಬರು ಬೆಳೆಗಾರರು ಹೇಳಿದ್ದಾರೆ.
ಈಡೇರದ ಭರವಸೆಕೇಂದ್ರ ವಾಣಿಜ್ಯ ಸಚಿವ ಸುರೇಶ್ ಪ್ರಭು ಅವರು ಸುಳ್ಯಕ್ಕೆ ಬಂದಿದ್ದ ಸಂದರ್ಭ ರಬ್ಬರ್ ಧಾರಣೆ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕೆಂದು ರೈತರು ಮನವಿ ಮಾಡಿಕೊಂಡಿದ್ದರು. ಸಚಿವರು ರಬ್ಬರ್ ಧಾರಣೆಯನ್ನು ಹೆಚ್ಚಿಸಲು ತತ್‌ಕ್ಷಣ ಸಭೆ ಕರೆದು ಕ್ರಮ ಕೈಗೊಳ್ಳಲಾಗುವುದೆಂದು ಭರವಸೆ ನೀಡಿದ್ದರು. ಆದರೆ ಈ ಭರವಸೆ ಇನ್ನೂ ಈಡೇರಿಲ್ಲ ಎಂದು ರಬ್ಬರು ಬೆಳೆಗಾರರು ಹೇಳಿದ್ದಾರೆ. ತೇಜೇಶ್ವರ್ ಕುಂದಲ್ಪಾಡಿ