ಆಳಂದ: ಸಮಾಜದಲ್ಲಿನ ಪ್ರತಿಯೊಬ್ಬರು ವರ್ಷಕ್ಕೊಂದಾದರು ಗಿಡ ಬೆಳಸಿ ನಿಸರ್ಗ ಸಂರಕ್ಷಣೆ ಮಾಡಿ ಕೃತಾರ್ಥರಾಗುವ ಜತೆಗೆ ತಾಪಮಾನ ತಗ್ಗಿಸಲು ಮುಂದಾಗಬೇಕು ಎಂದು ಹಿರಿಯ ಶ್ರೇಣಿಯ ದಿವಾಣಿ ನ್ಯಾಯಾಧಿಧೀಶ ಜಿ.ಆರ್. ಶೆಟ್ಟರ ಹೇಳಿದರು.
ಪಟ್ಟಣದ ಪುರಸಭೆ ಆವರಣದಲ್ಲಿ ಸೋಮವಾರ ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ ಮತ್ತು ಪುರಸಭೆ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಏರ್ಪಡಿಸಲಾಗಿದ್ದ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಕೃತಿ ಮನುಷ್ಯನ ಜೀವನಕ್ಕೆ ಏನೆಲ್ಲ ಕೊಟ್ಟಿದೆ. ಅಂತಹದರಲ್ಲಿ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಪರಿಸರದ ಮೇಲೆ ನಿರಂತರ ದಾಳಿ ನಡೆಸುತ್ತಿದ್ದಾನೆ.
ಇದನ್ನು ನಿಲ್ಲಿಸದೆ ಹೋದಲ್ಲಿ ಮುಂದೊಂದು ದಿನ ಜೀವ ಸಂಕುಲಕ್ಕೆ ಕೊಡಲಿ ಪೆಟ್ಟು ಬೀಳಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು. ಪ್ರಧಾನ ಸಿವಿಲ್ ನ್ಯಾಯಾ ಧೀಶ ವಿ. ಹನುಮಂತಪ್ಪ ಮಾತನಾಡಿ, ಗಿಡ, ಮರ ಪರಸರದಲ್ಲಿ ಸ್ವತ್ಛತೆಗೆ ಆದ್ಯತೆ ನೀಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ.
ಒಂದೊಮ್ಮೆ ಗಿಡ ನೆಡಲು ಆಗದಿದ್ದರೆ ಕಡಿಯಲು ಮಾತ್ರ ಹೋಗಬೇಡಿ ಎಂದು ಹೇಳಿದರು. ಹೆಚ್ಚುವರಿ ಸಿವಿಲ್ ನ್ಯಾಯಾ ಧೀಶ ಮುಜಫರ್ ಮಾಂಜರಿ ಮಾತನಾಡಿ, ನಿಸರ್ಗ ಮುಖೀಯಾಗಿ ಬಂದ ಮಾನವ ನಿಸರ್ಗಕ್ಕಾಗಿ ಗಿಡಮರ ನೆಟ್ಟು ಪರಿಸರ ಉಳಿಸಬೇಕು ಎಂದು ಹೇಳಿದರು.
ನ್ಯಾಯವಾದಿ ಸಂಘದ ಅಧ್ಯಕ್ಷ ಎಸ್.ಎ. ಪಾಟೀಲ, ಪುರಸಭೆ ಅಧ್ಯಕ್ಷ ಅಂಬಾದಾಸ ಪವಾರ, ಮುಖ್ಯಾಧಿ ಕಾರಿ ಗ್ವಾಲೇಶ ಹೊನ್ನಳ್ಳಿ, ಬಾಬುರಾವ ಪಾಟೀಲ ಮಾತನಾಡಿದರು. ನ್ಯಾಯವಾದಿ ಬಿ.ಐ. ಶಿರೋಳೆ, ಸಂದೀಪ ಚಿಂಚೋರೆ, ಪುರಸಭೆ ಉಪಾಧ್ಯಕ್ಷ ಅಜಗರ ಅಲಿ ಹವಾಲ್ದಾರ, ಕಭೀರಾ ಬೇಗಂ,
-ಲತೀಪ ಮುರುಮಕರ್, ಪುರಸಭೆ ನೈರ್ಮಲ್ಯ ನಿರೀಕ್ಷಕ ಲೋಹಿತ ಸಿಂದನವಾಡಿ ಸೇರಿದಂತೆ ಪುರಸಭೆ ಸಿಬ್ಬಂದಿಗಳು, ಸಪಾಯಿ ಕರ್ಮಚಾರಿಗಳು ಪಾಲ್ಗೊಂಡಿದ್ದರು. ಅಂಬಾರಾಯ ಲೋಕಾಣಿ ಕಾರ್ಯಕ್ರಮ ನಿರೂಪಿಸಿದರು. ಪುರಸಭೆ ಸಮುದಾಯ ಸಂಘಟಕ ಅಧಿಕಾರಿ ಭೀಮಾಶಂಕರ ವಂದಿಸಿದರು.